ಭಾರತ ಯಾವಾಗಲೂ ವಲಸಿಗರಿಗೆ ಸಹಾಯ ಮಾಡಿದೆ! – ವಿದೇಶಾಂಗ ಸಚಿವ ಎಸ್. ಜೈಶಂಕರ್
(‘ಜೆನೋಫೋಬಿಕ್’ ಎಂದರೆ ವಲಸಿಗರ ವಿಷಯದಲ್ಲಿ ಅಸಮಾಧಾನ)
ನವದೆಹಲಿ – ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಭಾರತವನ್ನು ‘ಜೆನೋಫೋಬಿಕ್’ ಎಂದು ನಿರ್ಧರಿಸಿದ್ದಾರೆ ಮತ್ತು ಭಾರತವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ದೇಶಗಳ ವರ್ಗಕ್ಕೆ ಸೇರಿಸಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಟೀಕಿಸಿದ್ದಾರೆ. ಜೈಶಂಕರ್ ಮಾತನಾಡಿ, ‘‘ಭಾರತ ವಿಶೇಷ ದೇಶವಾಗಿದೆ, ಅದು ತನ್ನ ಅತಿಥಿಗಳ ಆದರಾತಿಥ್ಯಕ್ಕೆ ಹೆಸರುವಾಸಿಯಾಗಿದೆ. ವಿಶ್ವದ ಇತಿಹಾಸದಲ್ಲಿ ಭಾರತವು ಯಾವಾಗಲೂ ಅಗತ್ಯವಿರುವವರಿಗೆ ಸಹಾಯ ಮಾಡಿದ ಒಂದು ದೇಶವಾಗಿದೆ. ಆದುದರಿಂದಲೇ ವಿವಿಧ ಪಂಥಗಳ ಜನರು ಭಾರತಕ್ಕೆ ಬರುತ್ತಾರೆ, ”ಬೈಡೆನ್ ಇವರು ‘ಭಾರತವು ಜೆನೋಫೋಬಿಕ್ ಅಂದರೆ ವಲಸಿಗರ ಬಗ್ಗೆ ಅಸಮಾಧಾನವನ್ನು ತೋರಿಸುವ ದೇಶವಾಗಿದೆ ಹಾಗಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ’ ಎಂಬ ಅರ್ಥವಿಲ್ಲದ ಹೇಳಿಕೆ ನೀಡಿದ್ದಾರೆ ಎಂದರು.