ಎಲ್ಲಾ ಮಕ್ಕಳು ಶಾಲೆಗೆ ಹೋಗುವುದನ್ನು ಖಚಿತಪಡಿಸಿಕೊಳ್ಳಿ ! – ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಉತ್ತರ ಪ್ರದೇಶದಲ್ಲಿ ಅನಧಿಕೃತ ಮದರಸಾಗೆ ಕರೆದೊಯ್ಯುತ್ತಿದ್ದ 95 ಮಕ್ಕಳನ್ನು ಬಿಡುಗಡೆ ಮಾಡಿದ ಪ್ರಕರಣ !

ನವದೆಹಲಿ – ಏಪ್ರಿಲ್ 26 ರಂದು, ಅಯೋಧ್ಯೆಯಿಂದ 95 ಅಪ್ರಾಪ್ತ ಬಾಲಕರನ್ನು ಸಹರಾನಪುರದ ಅನಧಿಕೃತ ಮದರಸಾಕ್ಕೆ ಕರೆದೊಯ್ಯಲಾಗುತ್ತಿತ್ತು. ಆ ಸಮಯದಲ್ಲಿ ‘ಉತ್ತರ ಪ್ರದೇಶ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ ಮಹತ್ವದ ಕ್ರಮ ಕೈಗೊಂಡು ಈ ಮಕ್ಕಳನ್ನು ಬಿಡುಗಡೆ ಗೊಳಿಸಿತ್ತು. ಈ ಘಟನೆಯಿಂದಾಗಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ದೇಶದ ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳು ಹತ್ತಿರದ ಶಾಲೆಯಲ್ಲಿ ಓದುತ್ತಿರುವುದನ್ನು ದೃಢಪಡಿಸಿಕೊಳ್ಳುವಂತೆ ತಿಳಿಸಿದೆ. ಇದು ಶಿಕ್ಷಣ ಹಕ್ಕು ಕಾಯಿದೆ, 2009 ರ ಅಡಿಯಲ್ಲಿ ಅವರ ಅಧಿಕಾರ ಆಗಿದೆ ಎಂದು ಆಯೋಗವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದೆ.

ಆಯೋಗದ ರಾಷ್ಟ್ರೀಯ ಅಧ್ಯಕ್ಷೆ ಪ್ರಿಯಾಂಕ್ ಕನುನಗೋ ಅವರು ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ನೀಡಿದ ಮಾಹಿತಿಯನುಸಾರ, ಈ ಆದೇಶ ಮೇ 3 ರಂದು ಹೊರಡಿಸಲಾಗಿದೆ. ಅದರಲ್ಲಿ ಅಯೋಧ್ಯೆಯ ಘಟನೆಯ ಪ್ರಕಾರ ಯಾವುದೇ ಮಕ್ಕಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂದರೆ, ‘ ಜುವೈನಲ್ ಜಸ್ಟಿಸ್ ಆಕ್ಟ್ 2015’ ಮತ್ತು ಭಾ.ದ.ವಿ. ಕಲಂ 370ರ ಪ್ರಕಾರ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ನಡೆಯದಂತೆ ನಿಮ್ಮ ವ್ಯಾಪ್ತಿಯ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಇದಕ್ಕಾಗಿ ವಿಶೇಷ ಕಾಳಜಿ ವಹಿಸಬೇಕು. ಈ ಆದೇಶದ ಅನುಷ್ಠಾನದ ವರದಿಯನ್ನು 15 ದಿನಗಳಲ್ಲಿ ನೀಡಬೇಕು ಎಂದು ಪ್ರಿಯಾಂಕ ಕನುನಗೊ ಅವರು ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಈಗ ಕೇಂದ್ರ ಸರ್ಕಾರವು ದೇಶದಲ್ಲಿರುವ ಅಂತಹ ಎಲ್ಲಾ ಮದರಸಾಗಳನ್ನು ನಿಷೇಧಿಸಿ, ಎಲ್ಲಾ ಮಕ್ಕಳಿಗೆ ಮುಖ್ಯವಾಹಿನಿಯ ಶಿಕ್ಷಣವನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕು, ಎಂದೇ ಜನತೆಗೆ ಅನಿಸುತ್ತಿದೆ!