ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಆರ್ಕಾನ್ಸಾ ಚರ್ಚ್‌ನಲ್ಲಿ 15 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ 26 ವರ್ಷದ ಶಿಕ್ಷಕಿ ರೇಗನ್ ಗ್ರೇ ಎಂಬವರನ್ನು ಬಂಧಿಸಲಾಗಿದೆ. ನ್ಯಾಯಾಲಯ ಆಕೆಗೆ ಜಾಮೀನು (ಸಮಂತ?) ನೀಡಿದೆ. 2020 ರಿಂದ ‘ಲಿಟಲ್ ರಾಕ್ ಇಮ್ಯಾನುಯೆಲ್ ಬ್ಯಾಪ್ಟಿಸ್ಟ್ ಚರ್ಚ್’ನಲ್ಲಿ ಸ್ವಯಂ ಸೇವಕಿಯಾಗಿ ಸೇವೆ ಸಲ್ಲಿಸುತ್ತಿರುವಾಗ ಬಾಲಕನ ಜೊತೆಗಿನ ಆಕೆಯ ಅಸಭ್ಯ ವರ್ತನೆ ಬೆಳಕಿಗೆ ಬಂದಿದೆ.
1. ಬಾಲಕನ ಪೋಷಕರು ಮೊಬೈಲ್ ಫೋನ್‌ನಲ್ಲಿ ಶಿಕ್ಷಕಿಯ ಹಲವಾರು ಸಂದೇಶಗಳನ್ನು ನೋಡಿದ ನಂತರ ಚರ್ಚ್ ಪಾದ್ರಿಗೆ ದೂರು ನೀಡಿದ್ದರು. ತನಿಖೆ ವೇಳೆ ಶಿಕ್ಷಕಿ ಬಾಲಕನಿಗೆ ನಗ್ನ ಚಿತ್ರಗಳನ್ನು(ಫೋಟೋ) ಕಳುಹಿಸಿರುವುದು ಬೆಳಕಿಗೆ ಬಂದಿದೆ. ಇದಾದ ಬಳಿಕ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿತ್ತು.
2. ಒಂದು ಚರ್ಚ್ ನ ನಾಯಕರೊಬ್ಬರು’ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್'(ಎಫ್.ಬಿ.ಐ)ಗೆ ನೀಡಿದ ಮಾಹಿತಿ ಪ್ರಕಾರ, ಈ ಶಿಕ್ಷಕಿ 2023 ರಲ್ಲಿ ನಡೆದ ತನಿಖೆಯಲ್ಲಿ ತಾನು ಹುಡುಗನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾಳೆ ಎಂದು ಹೇಳಿದರು.
ಸಂಪಾದಕೀಯ ನಿಲುವುಚರ್ಚ್ನಲ್ಲಿ ಹುಡುಗರು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಾರೆ, ಇದನ್ನು ತಡೆಯುವುದಕ್ಕಾಗಿ ಚರ್ಚ್ ಸಂಸ್ಥೆ ಏಕೆ ಕಠಿಣ ಕ್ರಮ ಕೈಗೊಳ್ಳುವುದಿಲ್ಲ? ಎಂಬ ಪ್ರಶ್ನೆ ಉದ್ಭವಿಸುತ್ತದೆ ! |