ಮೇಟ್ಟುಪಾಳ್ಯಂ (ತಮಿಳುನಾಡು) ಇಲ್ಲಿಯ ವನಭದ್ರಕಾಳಿಯಮ್ಮ ದೇವಸ್ಥಾನದ ೪ ಅರ್ಚಕರ ಬಂಧನ !

ಭಕ್ತರು ಅರ್ಪಿಸಿರುವ ಅರ್ಪಣೆಯ ನಿಧಿಯಲ್ಲಿ ಅವ್ಯವಹಾರ ಮಾಡಿರುವ ಆರೋಪ

ಮೇಟ್ಟುಪಾಳ್ಯಂ – ತಮಿಳುನಾಡು ರಾಜ್ಯದಲ್ಲಿನ ಮೇಟ್ಟುಪಾಳ್ಯಂ ನ ವನಭದ್ರಕಾಳಿಯಮ್ಮ ದೇವಸ್ಥಾನದ ೪ ಅರ್ಚಕರನ್ನು ಭಕ್ತರು ಅರ್ಪಿಸಿರುವ ನಿಧಿಯಲ್ಲಿ ಅವ್ಯವಹಾರ ಮಾಡಿರುವ ಆರೋಪದಡಿಯಲ್ಲಿ ಇತ್ತೀಚಿಗೆ ಬಂಧಿಸಿದ್ದಾರೆ . ಬಂಧಿಸಿರುವ ಆರೋಪಿಗಳಲ್ಲಿ ಆರ್. ರಘುಪತಿ (೩೬ ವರ್ಷ) ಎಸ್.ತಂಡಪಾಣಿ (೪೭ ವರ್ಷ) ಎಸ್. ವಿಷ್ಣುಕುಮಾರ್ (೩೩ ವರ್ಷ) ಮತ್ತು ಎನ್. ಶರವಣ (೫೪ ವರ್ಷ) ಇವರೊಂದಿಗೆ ಈ ಪ್ರಕರಣದಲ್ಲಿ ಸಿಲುಕಿರುವ ದೇವಸ್ಥಾನದ ಓರ್ವ ಟ್ರಸ್ಟಿ ಪರಾರಿ ಆಗಿದ್ದಾರೆ ಎಂದು ಮೇಟ್ಟುಪಾಳ್ಯಂ ಪೊಲೀಸರು ಹೇಳಿದರು.

ಕಾನೂನಿನ ಕಾರ್ಯಾಚರಣೆ ನಡೆಸುವ ಅಧಿಕಾರಿಗಳು ಸಿಸಿಟಿವಿ ಫೂಟೇಜ್ ಆಧಾರದಲ್ಲಿ ೪ ಅರ್ಚಕರನ್ನು ದೇವಸ್ಥಾನದಲ್ಲಿನ ಆರತಿ ತಟ್ಟೆಯಲ್ಲಿನ ಹಣವನ್ನು ಮನೆಗೆ ಕೊಂಡೊಯ್ಯುವಾಗ ಬಂಧಿಸಿದ್ದಾರೆ. ತಮಿಳುನಾಡು ಹಿಂದೂ ಧರ್ಮದಾಯಿ (ಎಚ್ ಆರ್ ಅಂಡ್ ಸಿ ಎ) ಇಲಾಖೆಯ ಸಹಾಯಕ ಆಯುಕ್ತ ಮತ್ತು ದೇವಸ್ಥಾನ ಕಾರ್ಯಕಾರಿ ಅಧಿಕಾರಿ ಯು.ಎಸ್ ಕೈಲಾಸ ಮೂರ್ತಿ ಇವರು, ದೇವಸ್ಥಾನದ ಅರ್ಚಕರು ಸರಕಾರಿ ಆದೇಶದ ಪ್ರಕಾರ ದೇವಸ್ಥಾನದಲ್ಲಿನ ಆರತಿ ತಟ್ಟೆಯಲ್ಲಿನ ಎಲ್ಲಾ ಹಣ ಹುಂಡಿಯಲ್ಲಿ ಹಾಕಬೇಕು. ಆದರೂ ಅರ್ಚಕರು ಈ ನಿಯಮವನ್ನು ದುರ್ಲಕ್ಷಿಸಿದ್ದಾರೆ. ಆದ್ದರಿಂದ ಅವರು ಅರ್ಚಕರ ವಿರುದ್ಧ ಮೇಟ್ಟುಪಾಳ್ಯಂ ದಂಡಾಧಿಕಾರಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು .

ಮಾರ್ಚ್ ೧೪.೨೦೨೪ ರಂದು ನ್ಯಾಯಾಲಯವು ನೀಡಿರುವ ಆದೇಶದ ಪ್ರಕಾರ, ಮೇಟ್ಟುಪಾಳ್ಯಂ ಪೊಲೀಸರು ಈ ಅವ್ಯವಹಾರದಲ್ಲಿ ತೊಡಗಿರುವ ದೇವಸ್ಥಾನ ಟ್ರಸ್ಟಿ ವಸಂತಂ ಸಂಪತ್ ಇವರ ಜೊತೆಗೆ ೪ ಅರ್ಚಕರ ವಿರುದ್ಧ ಕಾರ್ಯಾಚರಣೆ ಆರಂಭಿಸಿದರು. ಅದರ ನಂತರ ಏಪ್ರಿಲ್ ೨೫.೨೦೨೪ ರಂದು ಪೊಲೀಸರು ೪ ಅರ್ಚಕರನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ದ್ರಮುಕ್ ಸರಕಾರದ ಕುರಿತು ಟೀಕೆ

ಈ ಪ್ರಕರಣದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಇವರ ಕುರಿತು ಎಲ್ಲಾ ಕಡೆಯಿಂದ ಟೀಕೆ ಆಗುತ್ತಿದೆ. ಅವರ ಈ ಕೃತ್ಯ ಹಿಂದೂದ್ವೇಷ ಮತ್ತು ಭೇದಭಾವದ ಉದಾಹರಣೆ ಆಗಿದೆ. ಪ್ರಸಿದ್ಧ ಲೇಖಕಿ ಮತ್ತು ವಕ್ತಾರೆ ಶೆಫಾಲಿ ವೈದ್ಯ ಇವರು ಎಕ್ಸ್ ನಲ್ಲಿ ಪ್ರಸಾರ ಮಾಡಿರುವ ಒಂದು ಪೋಸ್ಟಿನಲ್ಲಿ ಅರ್ಚಕರಿಗೆ ಕಡಿಮೆ ಗೌರವಧನ ಸಿಗುತ್ತದೆ, ಹಾಗೂ ದೇವಸ್ಥಾನದ ಹುಂಡಿಗಳಲ್ಲಿನ ನಿಧಿ ಸರಕಾರದಿಂದ ದುರುಪಯೋಗ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಭಕ್ತರು ಆರತಿಯ ತಟ್ಟೆಯಲ್ಲಿ ಅರ್ಪಿಸಿರುವ ದಾನ ಅರ್ಚಕರೇ ಪಡೆಯುವ ಪದ್ಧತಿ ಇದೆ. ಈ ಪದ್ಧತಿಯಲ್ಲಿ ರಾಜ್ಯ ಸರಕಾರ ತಲೆ ಹಾಕಬಾರದೆಂದು ಕೂಡ ಅವರು ಆರೋಪಿಸಿದ್ದಾರೆ .