ಮುಂಬಯಿ – ಮಹಾರಾಷ್ಟ್ರ ದಿನದಂದು ರಸ್ತೆ ಅಥವಾ ಬೇರೆಡೆ ರಾಷ್ಟ್ರಧ್ವಜ ಬಿದ್ದಿರುವುದು ಕಂಡು ಬಂದರೆ ಸಂಬಂಧಪಟ್ಟ ತಹಶೀಲ್ದಾರರ ಕಚೇರಿ ಅಥವಾ ಜಿಲ್ಲಾ ಮಟ್ಟದ ಕಾರ್ಯಾಲಯಕ್ಕೆ ಒಪ್ಪಿಸಬೇಕು ಎಂದು ಮುಂಬಯಿ ಉಪನಗರ ಜಿಲ್ಲೆಯ ಜಿಲ್ಲಾಧಿಕಾರಿ ಸಂದೀಪ ನಿಚಿತ ಮನವಿ ಮಾಡಿದ್ದಾರೆ.
ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟ್ರಧ್ವಜಗಳ ಬಳಕೆಯನ್ನು ನಿಲ್ಲಿಸುವ ಬಗ್ಗೆ ಜಾಗೃತಿ ಮೂಡಿಸಲು ಮುಂಬಯಿ ಉಪನಗರಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ ಅಂಧೇರಿ, ಬೊರಿವಲಿ ಮತ್ತು ಮುಲುಂಡ ಈ ಸ್ಥಳಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ರಾಷ್ಟ್ರಧ್ವಜದ ಅಗೌರವವನ್ನು ತಡೆಯಲು ಜಿಲ್ಲಾಡಳಿತದಿಂದಲೂ ಜನಜಾಗೃತಿ ಮೂಡಿಸಲಾಗುತ್ತಿದೆ.
ಸಂಪಾದಕೀಯ ನಿಲುವುಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಕಳೆದ 23 ವರ್ಷಗಳಿಂದ ರಾಷ್ಟ್ರಧ್ವಜದ ಅಗೌರವವನ್ನು ತಡೆಯಲು ಸರಕಾರಕ್ಕೆ ಪದೇ ಪದೇ ಮನವಿ ನೀಡುವುದು, ಜನಜಾಗೃತಿ ಮೂಡಿಸುವ ಅಭಿಯಾನ ನಡೆಸುತ್ತಿದೆ ! ಈಗ ಅದನ್ನು ಸರಕಾರದ ಮಟ್ಟದಲ್ಲಿ ಪರಿಗಣಿಸಿ ಕ್ರಮ ಕೈಗೊಳ್ಳಲು ಆರಂಭಿಸಿದ್ದು, ಇದು ಅದರ ಫಲವೇ ಆಗಿದೆ ! |