ಚೆನ್ನೈ (ತಮಿಳುನಾಡು) – ತಮಿಳುನಾಡು ರಾಜ್ಯದಲ್ಲಿನ ೨೨ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಕುಡಿಯುವ ನೀರಿನ ಪರಿಸ್ಥಿತಿ ತಿಳಿದುಕೊಳ್ಳುವುದಕ್ಕಾಗಿ ಮುಖ್ಯ ಮಂತ್ರಿಗಳಿಂದ ಸಭೆ ನಡೆಸಲಾಯಿತು. ಭವಿಷ್ಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗುವುದರಿಂದ ನೀರಿನ ಕೊರತೆ ಉಂಟಾಗಬಹುದು. ರಾಜ್ಯದ ಈಶಾನ್ಯ ಮತ್ತು ಸಮುದ್ರದಡದಲ್ಲಿನ ಪ್ರದೇಶದಲ್ಲಿ ಮಳೆಗಾಲದಲ್ಲಿ ಉತ್ತಮ ಮಳೆಯಾಗಿತ್ತು ; ಆದರೆ ಇತರ ಪ್ರದೇಶಗಳಲ್ಲಿ ವಿಶೇಷವಾಗಿ ಪಶ್ಚಿಮ ಭಾಗದಲ್ಲಿ ಕಡಿಮೆ ಮಳೆ ಆಗಿತ್ತು. ಆದ್ದರಿಂದ ಮುಂದಿನ ೨ ತಿಂಗಳು ಕುಡಿಯುವ ನೀರು ಎಲ್ಲಾ ಕಡೆಯಲ್ಲಿ ಸಿಗಲು ಸಾಧ್ಯಗುವ ದೃಷ್ಟಿಯಿಂದ ಯೋಜನೆ ಮಾಡಬೇಕೆಂದು ಮುಖ್ಯಮಂತ್ರಿ ಸ್ಟಾಲಿನ್ ಅವರು ಆದೇಶ ನೀಡಿದ್ದಾರೆ. ನೀರು ಪೂರೈಕೆ ಮಾಡುವುದಕ್ಕಾಗಿ ೧೫೦ ಕೋಟಿ ರೂಪಾಯಿಯ ನಿಧಿ ಸರಕಾರ ಬಿಡುಗಡೆ ಮಾಡಿದೆ.
ಕೇರಳಕ್ಕೆ ಉಷ್ಣ ಮಾರುತದ ಎಚ್ಚರಿಕೆ !
ಕೇರಳದಲ್ಲಿ ಮುಂದಿನ ೨ ದಿನಗಳಲ್ಲಿ ಉಷ್ಣ ಮಾರುತ ಬರುವ ಎಚ್ಚರಿಕೆ ಹವಾಮಾನ ಇಲಾಖೆ ನೀಡಿದೆ. ರಾಜ್ಯದಲ್ಲಿ ಕೆಲವು ದಿನಗಳಿಂದ ಸತತವಾಗಿ ತಾಪಮಾನ ಹೆಚ್ಚುತ್ತಿದೆ. ಪಾಲಕ್ಕಾಡ್ ನಲ್ಲಿ ೪೧, ಹಾಗೂ ಕೊಲ್ಲಮ್ ಮತ್ತು ತ್ರಿಶೂರ್ ನಲ್ಲಿ ೪೦ ಡಿಗ್ರಿ ತಾಪಮಾನ ದಾಖಲಾಗಿದೆ.
ಕರ್ನಾಟಕಕ್ಕೆ ಕೇಂದ್ರ ಸರಕಾರದಿಂದ ಮೂರುವರೆ ಸಾವಿರ ಕೋಟಿ ರೂ. ಬರ ಪರಿಹಾರ ನಿಧಿ
ಕರ್ನಾಟಕದಲ್ಲಿ ಬರ ಪರಿಸ್ಥಿತಿ ನಿವಾರಣೆಗಾಗಿ ಕೇಂದ್ರ ಸರಕಾರದಿಂದ ಮೂರು ಸಾವಿರದ ೪೯೯ ಕೋಟಿ ರೂಪಾಯಿಯ ನಿಧಿ ಮಂಜೂರಾಗಿದೆ. ಸರ್ವೋಚ್ಚ ನ್ಯಾಯಾಲಯ ಎಚ್ಚರಿಕೆ ನೀಡಿದ ನಂತರ ಕೇಂದ್ರ ಸರಕಾರವು ಬರ ನಿವಾರಣೆಗಾಗಿ ನಿಧಿ ಮಂಜೂರು ಮಾಡಿರುವುದರ ಬಗ್ಗೆ ಮುಖ್ಯಮಂತ್ರಿಗಳು ನ್ಯಾಯಾಲಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.