Women Killed for Filing Compliant: ಜಹಾಂಗೀರ್‌ಪುರಿ (ದೆಹಲಿ)ಯಲ್ಲಿ ಮುಸಲ್ಮಾನ ಯುವಕರಿಂದ ಸರಿತಾ ಶರ್ಮಾಳ ಕೊಲೆ !

  • ದೆಹಲಿಯಲ್ಲಿ ‘ಲವ್ ಜಿಹಾದ್’ ಪ್ರಕರಣ ಬಹಿರಂಗ!

  • ಅಪ್ರಾಪ್ತ ಮಗಳಿಗೆ ಕಿರುಕುಳ ನೀಡಿದ ಮುಸ್ಲಿಂ ವಿರುದ್ಧ ಸರಿತಾ ಶರ್ಮಾ ದೂರು ದಾಖಲಿಸಿದ್ದರು !

ನವ ದೆಹಲಿ – ದೆಹಲಿಯಲ್ಲಿ ‘ಲವ್ ಜಿಹಾದ್’ ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿಯ ಜಹಾಂಗೀರಪುರಿಯಲ್ಲಿ ಮುಸ್ಲಿಂ ಯುವಕರು ಸರಿತಾ ಶರ್ಮಾ (36 ವರ್ಷ) ಎಂಬ ಹಿಂದೂ ಮಹಿಳೆಯ ಮನೆಗೆ ನುಗ್ಗಿ ಗುಂಡಿಕ್ಕಿ ಕೊಂದರು. ಆರೋಪಿಗಳಲ್ಲಿ ಒಬ್ಬನಾದ ಮುಸ್ಲಿಂ ಯುವಕ ಸರಿತಾ ಶರ್ಮಾ ಅವರ ಅಪ್ರಾಪ್ತ ಮಗಳಿಗೆ ಕಿರುಕುಳ ನೀಡುತ್ತಿದ್ದ. ಆರೋಪಿ ಮುಸ್ಲಿಂ ಯುವಕನ ವಿರುದ್ಧ ಸರಿತಾ ಶರ್ಮಾ ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಆರೋಪಿ ಯುವಕ ಸರಿತಾ ಶರ್ಮಾಗೆ ‘ನನ್ನ ವಿರುದ್ಧದ ದೂರನ್ನು ಹಿಂತೆಗೆದುಕೊಳ್ಳಿ, ಇಲ್ಲದಿದ್ದರೆ ನಿನ್ನನ್ನು ಸಾಯಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದ. ಕೊಲೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಏಪ್ರಿಲ್ 26, 2024 ರಂದು ಆರೋಪಿಗಳು ದೆಹಲಿಯ ಜಹಾಂಗೀರಪುರಿ ಪ್ರದೇಶದಲ್ಲಿ ಸರಿತಾ ಶರ್ಮಾ ಅವರ ಮನೆಗೆ ನುಗ್ಗಿ ಅವರ ಮೇಲೆ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದರು. ಕುಟುಂಬದವರು ಗಾಯಗೊಂಡ ಮಹಿಳೆಯನ್ನು ಬಾಬು ಜಗಜೀವನ್ ರಾಮ ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿದ್ದಾಳೆ ಎಂದು ಹೇಳಿದರು.

ಪೊಲೀಸರು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದ ಕಾರಣ ಸರಿತಾ ಹತ್ಯೆ! – ಕುಟುಂಬಗಳ ಆರೋಪ

ಘಟನೆಯ ವಿಡಿಯೋವನ್ನು ಪ್ರಸಾರ ಮಾಡುವ ಮೂಲಕ ಹಿರಿಯ ಪತ್ರಕರ್ತ ರವಿ ಪ್ರತಾಪ್ ದುಬೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆರೋಪಿ ಮುಸ್ಲಿಂ ಯುವಕರನ್ನು ಹಿಡಿಯಲು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಈ ಪ್ರಕರಣದಲ್ಲಿ ಮೃತ ಸರಿತಾ ಶರ್ಮಾ ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸರಿತಾ ಶರ್ಮಾ ಅವರ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದರೆ ಇಂದು ಈ ಘಟನೆ ನಡೆಯುತ್ತಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. (ಇಂತಹ ಕೈಚೆಲ್ಲುವ ಪೊಲೀಸ್ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಇದರಿಂದ ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ದೂರುಗಳನ್ನು ನಿರ್ಲಕ್ಷಿಸುವ ಧೈರ್ಯ ಮಾಡುವುದಿಲ್ಲ ! – ಸಂಪಾದಕರು)

ಸಂಪಾದಕೀಯ ನಿಲುವು

ಇನ್ನೂ ಎಷ್ಟು ಘಟನೆಗಳ ನಂತರ, ದೇಶದಲ್ಲಿ ಕಟ್ಟುನಿಟ್ಟಾದ ಲವ್ ಜಿಹಾದ್ ವಿರೋಧಿ ಕಾನೂನನ್ನು ಮಾಡಲಾಗುವುದು ?