ಮಾನೇಸರ (ಹರಿಯಾಣ)ದಲ್ಲಿ 400 ವರ್ಷಗಳಷ್ಟು ಪ್ರಾಚೀನ ವಿಷ್ಣು ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳು ಪತ್ತೆ !

ಮಾನೇಸರ (ಹರಿಯಾಣ) – ಇಲ್ಲಿನ ಬಾಗನಕಿ ಗ್ರಾಮದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿರುವಾಗ 3 ಪುರಾತನ ವಿಗ್ರಹಗಳು ಪತ್ತೆಯಾಗಿವೆ. ಇವುಗಳಲ್ಲಿ ಭಗವಾನ್ ವಿಷ್ಣುವು ಒಂದೂವರೆ ಅಡಿ ಎತ್ತರ, ಶ್ರೀ ಲಕ್ಷ್ಮೀದೇವಿಯು ಒಂದು ಅಡಿ ಎತ್ತರ ಹಾಗೂ ಮೂರನೆಯ ವಿಗ್ರಹವು ಶೇಷಶಾಯಿ ಭಗವಾನ್ ಶ್ರೀವಿಷ್ಣು ಮತ್ತು ಶ್ರೀ ಲಕ್ಷ್ಮೀದೇವಿಯದ್ದಾಗಿದೆ. ಈ ಎಲ್ಲಾ ವಿಗ್ರಹಗಳು ಅಂದಾಜು 400 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ. ಈ ವಿಗ್ರಹಗಳನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಗಿದೆ.

‘ಈ ಮೂರ್ತಿಗಳು ಗ್ರಾಮದ ಗುರುತಾಗಿದ್ದರಿಂದ ನಮ್ಮ ವಶಕ್ಕೆ ಕೊಡಬೇಕು. ನಾವು ಇಲ್ಲಿ ದೇವಸ್ಥಾನ ಕಟ್ಟುವೆವು’, ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹಾಗೆಯೇ ವಿಗ್ರಹಗಳು ಪತ್ತೆಯಾದ ಕಡೆ ಹೆಚ್ಚಿನ ಅಗೆಯುವ ಕೆಲಸ ಮಾಡಬೇಕೆಂದು ಅವರು ಬೇಡಿಕೆ ಮಾಡಿದ್ದಾರೆ.