Statement by Former Congress Minister: ‘ಸ್ವಾತಂತ್ರ್ಯ ಚಳವಳಿಯಲ್ಲಿ ಮುಸ್ಲಿಮರು ಹೆಚ್ಚು ಬಲಿದಾನ ಮಾಡಿದ್ದಾರೆ !’ (ಅಂತೆ) – ಎಚ್. ಆಂಜನೇಯ, ಮಾಜಿ ಸಚಿವ

ಚಿತ್ರದುರ್ಗ – ಮುಸ್ಲಿಮರಿಗೆ ಭಾಜಪದ ಮಾನಸಿಕತೆ ತೊಂದರೆ ನೀಡುತ್ತಿದೆ ಎಂದು ಕಾಂಗ್ರೆಸ್ಸಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಮಾಜಿ ಸಚಿವ ಮತ್ತು ಕಾಂಗ್ರೆಸ್ಸಿನ ಹಿರಿಯ ನಾಯಕ ಎಚ್. ಆಂಜನೇಯ ಇವರು ಚಿತ್ರದುರ್ಗದಲ್ಲಿ ಬೆಂಬಲಿಸಿದರು. ಅವರು ಮಾತನಾಡಿ, ಯಾರು ಎಷ್ಟೇ ತೊಂದರೆ ಕೊಟ್ಟರೂ ದೇಶದಲ್ಲಿ ವಾಸಿಸುತ್ತಿರುವವರು ದೇಶವನ್ನು ತೊರೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಲ್ಲಿ ವಾಸಿಸುವ ಎಲ್ಲರೂ ಒಂದೇ ತಾಯಿಯ ಮಕ್ಕಳಾಗಿದ್ದಾರೆ. ಮುಸಲ್ಮಾನರು ಕೂಡ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಬ್ರಿಟಿಷರು ಗುಂಡು ಹಾರಿಸುತ್ತಿದ್ದಾಗ ಮುಸಲ್ಮಾನ, ಸಿಖ್ಖ, ಲಿಂಗಾಯತರು, ಬ್ರಾಹ್ಮಣರು ಏಕೆ ಹೇಳುತ್ತಿದ್ದರೇ ? ಬ್ರಿಟಿಷರನ್ನು ದೇಶಬಿಟ್ಟು ಓಡಿಸುವಾಗ ಮುಸ್ಲಿಮರೇ ಹೆಚ್ಚು ಬಲಿದಾನ ಮಾಡಿದ್ದಾರೆ ಎಂದು ಹೇಳಿದರು.

ಆಂಜನೇಯ ಅವರು ತಮ್ಮ ಮಾತನ್ನು ಮುಂದುವರಿಸಿ, ನಾವೇ ದೇಶವನ್ನು ನಿರ್ಮಿಸಿದ್ದೇವೆ, ನಾವೇ ಗೆಲ್ಲುತ್ತೇವೆ, ನಾವೇ ದೇಶವನ್ನು ಆಳುತ್ತೇವೆ ! (ಹಗಲುಗನಸು ಕಾಣುತ್ತಿರುವ ಆಂಜನೇಯ – ಸಂಪಾದಕರು) ಶೇ. 75 ರಷ್ಟು ಹಿಂದೂಗಳು ನಮ್ಮ ಪರವಾಗಿದ್ದಾರೆ. ಮುಸಲ್ಮಾನರಿಗೆ ಭಾಜಪದಿಂದ ಏನೂ ಬೇಡ; ಆದರೆ ಹಿಂದೂಗಳಿಗೆ ಭಾಜಪ ಏನು ಕೊಟ್ಟಿದೆ ? ಹಿಂದೂ ಎಂದು ಹೇಳಿ ಅವರು ಹಿಂದೂಗಳನ್ನು ಹಿಂದೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಒಂದು ವೇಳೆ ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರು ಹೆಚ್ಚು ಬಲಿದಾನ ಮಾಡಿದ್ದರೆ, ಅವರು ದೇಶದ ವಿಭಜನೆಗೆ ಏಕೆ ಅವಕಾಶ ನೀಡಿದರು ? ಇಂತಹ ಖೇದಕರ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ಸಿಗರು ಹಿಂದೂಗಳ ತ್ಯಾಗವನ್ನು ಅವಮಾನ ಮಾಡುತ್ತಿದ್ದಾರೆ. ಹಿಂದೂಗಳು ಇಂತಹ ಕಾಂಗ್ರೆಸ್ಸನ್ನು ಎಂದಿಗೂ ಮರೆಯುವುದಿಲ್ಲ !