ಭಾರತದಿಂದ ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ 3 ಸಾವಿರ ಕ್ಷಿಪಣಿಗಳನ್ನು ನಿಯೋಜಿಸಲಿದೆ !

ಭುಜದ ಮೇಲೆ ರಾಕೆಟ್ ಲಾಂಚರ್ ಮೂಲಕ ಹಾರಿಸಬಹುದಾದ ಕ್ಷಿಪಣಿಗಳು!

ನವದೆಹಲಿ – ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಭಾರತವು 3 ಸಾವಿರ ಕ್ಷಿಪಣಿಗಳನ್ನು ನಿಯೋಜಿಸಲು ಯೋಜಿಸಿದೆ. ವಿಶೇಷ ಅಂದರೆ, ಈ ಕ್ಷಿಪಣಿಗಳನ್ನು ಭುಜದ ಮೇಲಿನಿಂದ ಉಡಾಯಿಸುವ ಕ್ಷಿಪಣಿ ಲಾಂಚರ್‌ನಿಂದ ಹಾರಿಸಬಹುದು. ಇದಕ್ಕಾಗಿ 6 ಸಾವಿರದ 800 ಕೋಟಿ ರೂಪಾಯಿಗಳ ಯೋಜನೆ ಜಾರಿಗೊಳಿಸಲಾಗುವುದು.

ಈ ಯೋಜನೆಗೆ ‘ವೆರಿ ಶಾರ್ಟ್ ರೇಂಜ್ ಏರ್ ಡಿಫೆನ್ಸ್ ಸಿಸ್ಟಂ’ ಎಂದು ಹೆಸರಿಸಲಾಗಿದೆ. ಇದರ ಅಡಿಯಲ್ಲಿ, 500 ಲಾಂಚರ್‌ಗಳು ಮತ್ತು ಅಂದಾಜು 3 ಕ್ಷಿಪಣಿಗಳನ್ನು ಖರೀದಿಸಲಾಗುತ್ತದೆ. ಅವು ದೇಶದಲ್ಲೇ ತಯಾರಾಗಲಿವೆ. ಈ ಕ್ಷಿಪಣಿಗಳ ಮೂಲಕ ಶತ್ರುಗಳ ಡ್ರೋನ್‌ಗಳು, ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ನಾಶಪಡಿಸಬಹುದು ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

(ಸೌಜನ್ಯ – MKN NEWS)