Siddaramaiah On Modi : ಪ್ರಧಾನಮಂತ್ರಿ ಮೋದಿಯವರನ್ನು ವಿದ್ಯಾವಂತ ಯುವಕರು ‘ನಾಲಾಯಕ’ ಎಂದು ನಿರ್ಧರಿಸಿದ್ದಾರೆ!

ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ !

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಕೋಲಾರ – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ’ ಎಂದು ಆಶ್ವಾಸನೆ ನೀಡಿದ್ದರು; ಆದರೆ ಅದೇ ಯುವಕರಿಗೀಗ ಅವರು ತರಕಾರಿ ಮಾರಾಟ ಮಾಡಿ ಎಂದು ಹೇಳುತ್ತಿದ್ದಾರೆ. ಒಂದೆಡೆ ಪದವಿಯ ನಂತರ ನೌಕರಿ ಸಿಗುವ ಆಶೆಯಿರುತ್ತದೆ, ಇನ್ನೊಂದೆಡೆ ಮೋದಿಯವರು ಯುವಕರಿಗೆ ತರಕಾರಿ ಮಾರಲು ಹೇಳುತ್ತಿದ್ದಾರೆ. ಹಾಗಾಗಿ ವಿದ್ಯಾವಂತ ಯುವಕರು ನರೇಂದ್ರ ಮೋದಿಯವರನ್ನು ನಾಲಾಯಕ ಎಂದು ನಿರ್ಧರಿಸಿದ್ದಾರೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪ್ರಧಾನಮಂತ್ರಿ ಮೋದಿಯವರ ಬಗ್ಗೆ ಒಂದು ಪ್ರಚಾರ ಸಭೆಯಲ್ಲಿ ಟೀಕಾತ್ಮಕವಾಗಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನ್ನು ಮುಂದುವರಿಸಿ, ನಾಲಾಯಕ ಮೋದಿ ಅಧಿಕಾರಕ್ಕೆ ಬರುವ ಮುನ್ನ ಪೆಟ್ರೋಲ್, ಡಿಸೇಲ್, ಗ್ಯಾಸ್, ಧಾನ್ಯ ಮತ್ತು ಖಾದ್ಯ ತೈಲಗಳ ಬೆಲೆ ಎಷ್ಟಿತ್ತು? ಕಳೆದ 10 ವರ್ಷಗಳ ಅಧಿಕಾರದಲ್ಲಿ ಅವರು ಏನನ್ನೂ ಮಾಡದೇ ಮತವನ್ನು ಕೇಳುತ್ತಿದ್ದಾರೆ. ಮೋದಿಯವರ 10 ವರ್ಷಗಳ ಅಧಿಕಾರದ ಕಾಲಾವಧಿಯಲ್ಲಿ ಕೇವಲ ಸುಳ್ಳು ಮತ್ತು ಮೋಸವನ್ನೇ ಮಾಡಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ತಾನು ನೀಡಿರುವ ಭರವಸೆಗಳನ್ನು ಈಡೇರಿಸಿದ್ದು, ಪ್ರತಿ ಕುಟುಂಬಕ್ಕೆ ಈಗ ತಿಂಗಳಿಗೆ 4 ರಿಂದ 6 ಸಾವಿರ ರೂಪಾಯಿ ಸಿಗುತ್ತಿದೆಯೆಂದು ಸಿದ್ದು ಹೇಳಿದರು.

ಸಂಪಾದಕೀಯ ನಿಲುವು

2014 ರಿಂದ ಕಾಂಗ್ರೆಸ್ಸನ್ನು ಜನತೆಯು ಅಧಿಕಾರದಿಂದ ಕೆಳಗಿಳಿಸಿದ್ದಾರೆ ಏಕೆ ? ಇದಕ್ಕೆ ಉತ್ತರ ಸಿದ್ಧರಾಮಯ್ಯ ನೀಡುವರೇ ?