ಪ್ರಧಾನಮಂತ್ರಿ ಮೋದಿಯವರಿಂದ ಕಾಂಗ್ರೆಸ್ಸಿನ ಮೇಲೆ ವಾಗ್ದಾಳಿ !
ಬಾಂಸವಾಡಾ (ರಾಜಸ್ಥಾನ) – ಮೊದಲು ಅವರ (ಕಾಂಗ್ರೆಸ್) ಸರಕಾರ ಅಧಿಕಾರದಲ್ಲಿದ್ದಾಗ, ಅಂದಿನ ಪ್ರಧಾನ ಮಂತ್ರಿ ಡಾ ಮನಮೋಹನ ಸಿಂಗ ಅವರು, `ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸಲ್ಮಾನರಿಗೆ ಇದೆ’ ಎಂದು ಹೇಳೀದ್ದರು. ಇದರರ್ಥ ಈ ಸಂಪತ್ತನ್ನು ಕ್ರೋಢೀಕರಿಸಿ, ಯಾರಿಗೆ ವಿತರಿಸುವವರಿದ್ದೀರಿ? ಅಧಿಕ ಮಕ್ಕಳಿರುವವರಿಗೆ ಮತ್ತು ನುಸುಳುಕೋರರಿಗೆ ಹಂಚುವರು. ನಿಮ್ಮ ದುಡಿಮೆಯ ಹಣವನ್ನು ನುಸುಳುಕೋರರಿಗೆ ಹಂಚುವರು, ಇದು ನಿಮಗೆ ಒಪ್ಪಿಗೆಯಿದೆಯೇ? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಪ್ರಿಲ್ 21 ರಂದು ಒಂದು ಪ್ರಚಾರಸಭೆಯಲ್ಲಿ ಜನತೆಯನ್ನು ಪ್ರಶ್ನಿಸಿದರು.
ಕಾಂಗ್ರೆಸ್ ನ ನಗರ ನಕ್ಸಲವಾದಿಗಳ ವಿಚಾರ
ಪ್ರಧಾನಮಂತ್ರಿ ಮೋದಿ ತಮ್ಮ ಮಾತನ್ನು ಮುಂದುವರಿಸಿ, ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ, ಅವರು (ಕಾಂಗ್ರೆಸ್ಸಿಗರು) ದೇಶದಲ್ಲಿರುವ ಮಹಿಳೆಯರ ಬಳಿಯಿರುವ ಚಿನ್ನದ ಲೆಕ್ಕವನ್ನು ಪಡೆದು ಆ ಸಂಪತ್ತನ್ನು ಹಂಚುವೆವು. ಈ ನಗರ ನಕ್ಸಲವಾದಿಗಳ ವಿಚಾರ ಸರಣಿಯು ನಮ್ಮ ಮಹಿಳೆಯರ ಮಂಗಳಸೂತ್ರವನ್ನೂ ಸಹ ಬಿಡುವುದಿಲ್ಲ. ಕೆಲವೊಮ್ಮೆ ಅವರು ದಲಿತರು ಮತ್ತು ಆದಿವಾಸಿ ಜನತೆಯಲ್ಲಿ ಭಯ ಹುಟ್ಟಿಸುತ್ತಾರೆ. ಸದ್ಯ ಕಾಂಗ್ರೆಸ್ ಸಂವಿಧಾನ ಮತ್ತು ಮೀಸಲಾತಿಯ ಬಗ್ಗೆ ಭಯ ಹುಟ್ಟಿಸುತ್ತಿದೆ. ಅವರ ಈ ಸುಳ್ಳು ಉಪಯೋಗಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ಗೆ ತಿಳಿದಿದೆ; ಯಾಕೆಂದರೆ ದಲಿತರಿಗೆ ಅವರ ಹಕ್ಕುಗಳ ಬಗ್ಗೆ ಸಂಪೂರ್ಣ ಅರಿವಿದೆ.
ಪ್ರಧಾನಮಂತ್ರಿ ಮೋದಿ ಸುಳ್ಳು ಹೇಳುತ್ತಿದ್ದಾರೆ! –ಕಾಂಗ್ರೆಸ್ಸಿನ ಟೀಕೆ
ಪ್ರಧಾನಮಂತ್ರಿ ಮೋದಿಯವರ ಹೇಳಿಕೆಯ ಬಗ್ಗೆ ಕಾಂಗ್ರೆಸ್ಸಿನ ನಾಯಕ ಪವನ ಖೇಡಾ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ಪ್ರಸಾರ ಮಾಡಿ, ದೇಶದ ಪ್ರಧಾನಮಂತ್ರಿ ಪುನಃ ಸುಳ್ಳು ಹೇಳಿದರು. ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಅವರು ಜನತೆಯೊಂದಿಗೆ ಸುಳ್ಳು ಹೇಳುತ್ತಲೇ ಇರುತ್ತಾರೆ. ಅವರ ಹೇಳಿಕೆಗಳು ಮತ್ತು ಭರವಸೆಗಳು ಸುಳ್ಳಾಗಿವೆ. ಅವರು ಹಿಂದೂ- ಮುಸಲ್ಮಾನರ ಹೆಸರಿನಲ್ಲಿ ಸುಳ್ಳು ಹೇಳಿ, ದೇಶವನ್ನು ವಿಭಾಜನೆ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನ ಪ್ರಣಾಳಿಕೆಯಲ್ಲಿ ಎಲ್ಲಿಯೂ `ಮುಸಲ್ಮಾನ’ ಮತ್ತು `ಹಿಂದೂ’ ಎಂಬ ಪದಗಳಿವೆಯೇ ಹೇಳಿ? ಇಲ್ಲವಾದರೆ ಅವರು ಸುಳ್ಳು ಹೇಳುತ್ತಿದ್ದಾರೆಂದು ನಾನು ಪ್ರಧಾನಮಂತ್ರಿಗಳಿಗೆ ಸವಾಲು ಹಾಕುತ್ತೇನೆ. ಈ ಸುಳ್ಳನ್ನು ಅವರು ಸ್ವೀಕರಿಸಲಿ ಅಥವಾ ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ಖೇಡಾ ಟೀಕಿಸಿದ್ದಾರೆ.
ಆಗಿನ ಪ್ರಧಾನಮಂತ್ರಿ ಮನಮೋಹನ ಸಿಂಗರು ನೀಡಿದ ಹೇಳಿಕೆ
2006ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಧಾನಮಂತ್ರಿಯಾಗಿದ್ದ ಡಾ.ಮನಮೋಹನ ಸಿಂಗ ಅವರು ಮಾತನಾಡಿ, ದೇಶದ ಅಭಿವೃದ್ಧಿಯ ಫಲಗಳು ಸಮಾನ ಪದ್ಧತಿಯಿಂದ ಅಲ್ಪಸಂಖ್ಯಾತರಿಗೆ ಅದರಲ್ಲೂ ಮುಸ್ಲಿಮರಿಗೆ ಸಮಾನವಾಗಿ ಸಿಗಬೇಕು. ಇದಕ್ಕಾಗಿ ನಾವು ಕಲ್ಪನಾಶೀಲ ಯೋಜನೆಯನ್ನು ಜಾರಿಗೊಳಿಸಬೇಕು. ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿರಬೇಕು ಎಂದಿದ್ದರು.