Muijju’s Party Won Parliamentary Elections: ಮಾಲ್ಡೀವ್ಸ್‌ನ ಸಂಸತ್ ಚುನಾವಣೆಯಲ್ಲಿ, ಭಾರತ ದ್ವೇಷಿ ಮುಯಿಜ್ಜು ಪಕ್ಷಕ್ಕೆ ಬಹುಮತ!

ಮಾಲೆ (ಮಾಲ್ಡೀವ್ಸ್) – ಮಾಲ್ಡೀವ್ಸ್‌ನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರ ಪಕ್ಷ ಜಯಗಳಿಸಿದೆ. 93 ಸ್ಥಾನಗಳ ಪೈಕಿ 86 ಸ್ಥಾನಗಳ ಫಲಿತಾಂಶ ಘೋಷಿಸಿದ್ದು, 66 ಸ್ಥಾನಗಳು ಮುಯಿಜ್ಜು ಅವರ ‘ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್’ ಪಕ್ಷಕ್ಕೆ ಸಿಕ್ಕಿದೆ. ಭಾರತ ಮತ್ತು ಚೀನಾ ಈ ಚುನಾವಣೆಯತ್ತ ದೃಷ್ಟಿ ನೆಟ್ಟಿವೆ. ಮುಯಿಜ್ಜು ಚೀನಾ ಪರ ಮತ್ತು ಭಾರತ ವಿರೋಧಿ ಇದ್ದಾರೆ. ಆದ್ದರಿಂದ ಅವರ ಪಕ್ಷದ ಗೆಲುವು ಭಾರತಕ್ಕೆ ಆಘಾತಕಾರಿ ಎಂದು ಪರಿಗಣಿಸಲಾಗಿದೆ. ಈ ಗೆಲುವಿನಿಂದ ಮುಂದಿನ 5 ವರ್ಷಗಳ ಕಾಲ ಮುಯಿಜ್ಜು ಅವರ ಸರ್ಕಾರ ಅಧಿಕಾರದಲ್ಲಿ ಇರಲಿದೆ.

ಸಂಪಾದಕೀಯ ನಿಲುವು

ಮಾಲ್ಡೀವ್ಸ್‌ನಿಂದ ‘ಇಂಡಿಯಾ ಔಟ್’ ಎಂದು ಘೋಷಿಸಿದ ಮುಯಿಜ್ಜುಗೆ ಮಾಲ್ಡೀವ್ಸ್ ಜನರ ಬೆಂಬಲವಿದೆ, ಈಗ ಭಾರತವು ಅದನ್ನು ಗಮನದಲ್ಲಿಡಬೇಕು ಮತ್ತು ಮಾಲ್ಡೀವ್ಸ್ ಹಾಗೂ ಅವರ ಜನರಿಗೆ ಪಾಠ ಕಲಿಸಲು ಕಟ್ಟುನಿಟ್ಟಾದ ನಿಯಮಗಳನ್ನು ಮಾಡಬೇಕು!