50 ಸಾವಿರ ಅನಿವಾಸಿ ಭಾರತೀಯರು ದುಬೈಗೆ ವಲಸೆ ಹೋಗುವ ಸಾಧ್ಯತೆ

ಲಂಡನ್ (ಬ್ರಿಟನ್) – ಬ್ರಿಟನ್‌ನಲ್ಲಿ ವಾಸಿಸುವ ಅನಿವಾಸಿ ಭಾರತೀಯರಿಗೆ ಬ್ಯಾಂಕ್‌ಗಳು, ಷೇರು ಮಾರುಕಟ್ಟೆಗಳು ಮತ್ತು ಭಾರತದಲ್ಲಿನ ಬಾಡಿಗೆ ಆದಾಯದಲ್ಲಿನ ಸ್ಥಿರ ಠೇವಣಿ (ಎಫ್‌ಡಿ) ಮೇಲೆ ಬ್ರಿಟನ್ ಸರ್ಕಾರವು ತೆರಿಗೆ ವಿನಾಯಿತಿಯನ್ನು 15 ವರ್ಷಗಳಿಂದ 4 ವರ್ಷಗಳಿಗೆ ಇಳಿಸಿದೆ. ಈಗ 5 ನೇ ವರ್ಷದಿಂದ ಬ್ರಿಕಟನ್‌ನಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು ಅವರ ಭಾರತದ ಆದಾಯದ ಮೇಲೆ 50% ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಮುಂದಿನ ವರ್ಷ ಏಪ್ರಿಲ್ ನಿಂದ ಈ ನಿಯಮ ಜಾರಿಗೆ ಬರಲಿದೆ.
ಲಂಡನ್ ಮೂಲದ ತೆರಿಗೆ ಸಲಹೆಗಾರ ಸೌರಭ್ ಜೇಟ್ಲಿ ಮಾತನಾಡಿ, ಬ್ರಿಟನ್ ಸರಕಾರದ ಹೊಸ ಕಾನೂನಿನ ನಂತರ ಅನಿವಾಸಿ ಭಾರತೀಯರು ಬ್ರಿಟನ್ ನಲ್ಲಿ ವ್ಯಾಪಾರ ಮಾಡುವ ಬಗ್ಗೆ ಭ್ರಮನಿರಸನಗೊಂಡಿದ್ದಾರೆ ಎಂದು ಹೇಳಿದ್ದಾರೆ. ಬ್ರಿಟನ್‌ನಲ್ಲಿ ವಾಸಿಸುವ 5 ಲಕ್ಷ ಅನಿವಾಸಿ ಭಾರತೀಯರಲ್ಲಿ ಅಂದಾಜು 50 ಸಾವಿರ ಜನರು ನಿಯಮದ ನಂತರ ದುಬೈಗೆ ತೆರಳಲು ಯೋಜಿಸಿದ್ದಾರೆ; ಏಕೆಂದರೆ ದುಬೈನಲ್ಲಿ ವೈಯಕ್ತಿಕ ತೆರಿಗೆ ದರ ಶೂನ್ಯ ಮತ್ತು ಹಂಚಿಕೆಯ (ಕಾರ್ಪೊರೇಟ್) ತೆರಿಗೆ ಕೇವಲ 9 ಪ್ರತಿಶತ ಇದೆ. ಲಂಡನ್ ನಲ್ಲಿ ಆಸ್ತಿ ತೆರಿಗೆ ಶೇ.40ರಷ್ಟಿದ್ದರೆ, ದುಬೈನಲ್ಲಿ ಶೇ. ಶೂನ್ಯ ಇದೆ.
ಭಾರತೀಯ ಅರ್ಚಕರಿಗೆ ವೀಸಾ ಇಲ್ಲದ್ದರಿಂದ ಬ್ರಿಟನ್‌ನಲ್ಲಿ 50 ದೇವಸ್ಥಾನಗಳು ಬಂದ್ !
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಸರಕಾರವು ಭಾರತೀಯ ಅರ್ಚಕರಿಗೆ ವೀಸಾ ನೀಡದ ಕಾರಣ ಬ್ರಿಟನ್‌ನಲ್ಲಿ ಅಂದಾಜು 500 ದೇವಾಲಯಗಳಲ್ಲಿ 50 ಮುಚ್ಚಲಾಗಿದೆ. ಉಳಿದ ಹಲವು ದೇವಸ್ಥಾನಗಳಲ್ಲಿ ಕೆಲಸ ಸ್ಥಗಿತಗೊಂಡಿದೆ.
Britain proposes tax changes reducing the duration in years of tax concession on NRI investment in Fixed Deposits and the #stockmarkets !
50, 000 Non-Resident #Indians are considering shifting their base to #Dubai.
This is a tight slap on the faces of all Indians who feel proud… pic.twitter.com/7l8UdsHYla
— Sanatan Prabhat (@SanatanPrabhat) April 21, 2024
ಸಂಪಾದಕೀಯ ನಿಲುವು
|
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!