ಅಯಾನ ಪಠಾಣ ಹಿಂದೂ ಯುವತಿಯ ಮೇಲೆ ಮಾಡಿದ ಅಮಾನವೀಯ ದೌರ್ಜನ್ಯದ ಪ್ರಕರಣ

  • ಒಂದು ಕಣ್ಣನ್ನು ಕಳೆದುಕೊಂಡ ಸಂತ್ರಸ್ತೆ

  • ಬುಲ್ಡೊಜರನಿಂದ ಅಯಾನ್‌ನ ಮನೆ ನೆಲಸಮ ಮಾಡಿದ ಆಡಳಿತ

ಗುನಾ (ಮಧ್ಯಪ್ರದೇಶ) – ಇಲ್ಲಿನ ಅಯಾನ ಪಠಾಣ ಹೆಸರಿನ ಓರ್ವ ಮುಸ್ಲಿಂ ಯುವಕ ಹಿಂದೂ ಯುವತಿಯ ಮೇಲೆ ನಡೆಸಿದ ದೌರ್ಜನ್ಯದ ಘಟನೆಯು ಈಗ ಭೀಕರ ಸ್ವರೂಪ ಪಡೆದುಕೊಂಡಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಸಂತ್ರಸ್ತೆಯ ಒಂದು ಕಣ್ಣಿನ ದೃಷ್ಟಿ ಹೋಗಿದೆ. ಇನ್ನೊಂದು ಕಣ್ಣಿನ ದೃಷ್ಟಿ ಮಂಜಾಗಿದೆ. ಸಂತ್ರಸ್ತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುನಾ ಜಿಲ್ಲಾ ಆಸ್ಪತ್ರೆಯಿಂದ ಗ್ವಾಲಿಯರಗೆ ಕಳುಹಿಸಲಾಗಿದೆ. ಮತ್ತೊಂದೆಡೆ ಅಯಾನ ಮನೆ ಸರಕಾರಿ ಭೂಮಿಯಲ್ಲಿ ನಿರ್ಮಿಸಿರುವುದು ಕಂಡು ಬಂದಿದ್ದರಿಂದ, ತಕ್ಷಣವೇ ಮನೆಗೆ ನೋಟಿಸ್‌ ಜಾರಿ ಮಾಡಿ ಉತ್ತರ ಕೋರಲಾಗಿತ್ತು. ಸುಮಾರು 12 ಗಂಟೆಗಳು ಕಳೆದರೂ ಅಯಾನ್‌ನ ಕುಟುಂಬದಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣದಿಂದ, ಕೊನೆಗೂ ಏಪ್ರಿಲ್ 21ರಂದು ಆಡಳಿತ ಮಂಡಳಿ ಬುಲ್ಡೋಜರ್‌ಗಳಿಂದ ಅಯಾನ್‌ನ ಮನೆಯನ್ನು ಕೆಡವಿತು. ಮಧ್ಯಪ್ರದೇಶ ಭಾಜಪ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಇವರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಏನಿದು ಪ್ರಕರಣ ?

ಅಯಾನ ಸಂತ್ರಸ್ತೆಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದನು. ತಂದೆ ಮತ್ತು ಸಹೋದರನಿಲ್ಲದಿರುವ ಕಾರಣ ಈ ಯುವತಿಯ ಜಮೀನು ಮತ್ತು ಆಸ್ತಿಯ ಮೇಲೆ ಅವನು ದೃಷ್ಟಿ ನೆಟ್ಟಿದ್ದನು. ಅದನ್ನು ಪಡೆದುಕೊಳ್ಳಲು ಅವನು ಅವಳನ್ನು ಅಮಾನವೀಯವಾಗಿ ಥಳಿಸಿದ್ದನು. ಅಲ್ಲದೆ, ಹಲವು ಬಾರಿ ಬಲಾತ್ಕಾರವನ್ನೂ ಮಾಡಿದ್ದನು. ಅವಳ ಗಾಯದ ಮೇಲೆ ಮೆಣಸಿನಪುಡಿ ಎರಚುತ್ತಿದ್ದನು. ಅವಳು ಕೂಗಬಾರದು ಎಂದು ಅವನು `ಫೆವಿಕ್ವಿಕ್’ ನಿಂದ ಅವಳ ತುಟಿಗಳನ್ನು ಅಂಟಿಸಿದ್ದನು. ಅಯಾನ ಯುವತಿಯ ಎರಡೂ ಕಣ್ಣುಗಳ ಮೇಲೆ ಮೊದಲು ಪೊರಕೆಯ ಹಿಂಬದಿಯಿಂದ ಮತ್ತು ನಂತರ ಕಲ್ಲಿನಿಂದ ಹೊಡೆದಿದ್ದನು.

‘ಸನಾತನ ಪ್ರಭಾತ’ದ ಪ್ರತಿನಿಧಿಯು ಗುನಾ ಜಿಲ್ಲೆಯ ಹೆಚ್ಚುವರಿ ಪೊಲೀಸ ಅಧೀಕ್ಷಕರ ಮಾನ ಸಿಂಗ ಠಾಕೂರ ಅವರನ್ನು ಸಂಪರ್ಕಿಸಿದಾಗ, ಅವರು ಈ ಘಟನೆಯು ಲವ್ ಜಿಹಾದ್ ಪ್ರಕಾರವಲ್ಲ, ಸಂತ್ರಸ್ಥೆ ಬಡ ಕುಟುಂಬದವಳಾಗಿದ್ದಾಳೆ. ಆಕೆ ಮತ್ತು ಅಯಾನ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಯಾನ್ `ಅವಳ ಆಸ್ತಿ ಪಡೆಯಬೇಕು’, ಅದಕ್ಕಾಗಿ ಥಳಿಸುತ್ತಿದ್ದನು ಎಂದು ಹೇಳಿದ್ದಾರೆ.

 

ಸಂಪಾದಕೀಯ ನಿಲುವು

ಬುಲ್ಡೊಜರನಿಂದ ಮನೆ ಬೀಳಿಸುವ ಬದಲು ಲವ್ ಜಿಹಾದಿಗಳನ್ನು ಗಲ್ಲು ಶಿಕ್ಷೆಗೆ ಗುರಿ ಮಾಡದೇ ಇಂತಹ ಘಟನೆಗಳು ನಿಲ್ಲುವುದಿಲ್ಲ. ಇದಕ್ಕಾಗಿ ಕೇಂದ್ರ ಸರಕಾರವೇ ಕಠಿಣ ಕಾನೂನು ಮಾಡಬೇಕು ಎಂದು ಹಿಂದೂ ಜನತೆಯ ಕೋರಿಕೆಯಾಗಿದೆ !