40 Million Old Fossil: ಸಮುದ್ರಮಂಥನದ ‘ವಾಸುಕಿ’ ಸರ್ಪದ ಇತಿಹಾಸಕ್ಕೆ ವಿಜ್ಞಾನದ ಮೊಹರು!

  • ಗುಜರಾತನಲ್ಲಿ 40 ದಶಲಕ್ಷ ವರ್ಷಗಳಷ್ಟು ಹಳೆಯದಾದ ಭವ್ಯವಾದ ಸರ್ಪದ ಪಳೆಯುಳಿಕೆಗಳು ಪತ್ತೆ!

  • ಜಾಗತಿಕ ವೈಜ್ಞಾನಿಕ ಮಾಸಿಕ ‘ಸ್ಪ್ರಿಂಗರ್ ನೇಚರ್’ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧ !

 

ಕರ್ಣಾವತಿ (ಗುಜರಾತ್) – ಹಿಂದೂ ಧರ್ಮಗ್ರಂಥಗಳಲ್ಲಿ 50 ಅಡಿ ಉದ್ದದ ವಾಸುಕಿ ಸರ್ಪದ ವಿಷಯದಲ್ಲಿ ಒಂದು ಘಟನೆಯನ್ನು ವಿವರಿಸಲಾಗಿದೆ. ಈ ಸರ್ಪವನ್ನು ದೇವರು ಮತ್ತು ದಾನವರು ಒಟ್ಟಾಗಿ ಸಮುದ್ರ ಮಂಥನ ಮಾಡಲು ಹಗ್ಗದ ರೂಪದಲ್ಲಿ ಬಳಸಿದ್ದರು. ಭಗವಾನ್ ಶಿವ ವಾಸುಕಿಯನ್ನು ತಮ್ಮ ಕೊರಳಿನಲ್ಲಿ ಧರಿಸಿದ್ದರು. ಈಗ ಗುಜರಾತ್‌ನ ಕಚ್‌ನಲ್ಲಿ ನಡೆದ ಉತ್ಖನನದಲ್ಲಿ ಇಂತಹದು ಸಿಕ್ಕಿದೆ. ಇದರಿಂದ ಇಂತಹ ದೈತ್ಯ ಕಾಯದ ಪ್ರಾಣಿಯ ಅಸ್ತಿತ್ವವನ್ನು ದೃಢಪಡಿಸುತ್ತದೆ. ಉತ್ಖನನದ ಸಮಯದಲ್ಲಿ ಇಂತಹ ಸರ್ಪಗಳ ಪಳೆಯುಳಿಕೆಗಳು ಸಿಕ್ಕಿದೆ. ಅದಕ್ಕೆ ‘ವಾಸುಕಿ ಇಂಡಿಕಸ್’ ಎಂಬ ವೈಜ್ಞಾನಿಕ ಹೆಸರು ನೀಡಲಾಗಿದೆ. ಐಐಟಿ ರೂರ್ಕಿಯ ವಿಜ್ಞಾನಿಗಳಿಗೆ ಸಂಶೋಧನೆಯ ಸಮಯದಲ್ಲಿ ಈ ಮಾಹಿತಿ ಸಿಕ್ಕಿದೆ. ಈ ಸಂಶೋಧನೆಯಿಂದ ಕೇವಲ ಪ್ರಾಣಿಗಳ ವಿಕಾಸವನ್ನು ಮಾತ್ರವಲ್ಲದೆ ಪ್ರಾಚೀನ ಸರೀಸೃಪ ಪ್ರಾಣಿಗಳೊಂದಿಗೆ ಭಾರತದ ಸಂಬಂಧವನ್ನು ಬಹಿರಂಗಪಡಿಸಿದೆ. ‘ವಾಸುಕಿ’ ಸರ್ಪ ಭಾರತಕ್ಕೆ ಬಂದಿತು ಮತ್ತು ಅದು ಯುರೇಷಿಯಾದಿಂದ ಉತ್ತರ ಆಫ್ರಿಕಾಕ್ಕೆ ಹರಡಿತು. ಅವರ ಸಂಶೋಧನಾ ಪ್ರಬಂಧವು ‘ಸ್ಪ್ರಿಂಗರ್ ನೇಚರ್’ ಜರ್ಮನಿಯ ಜಾಗತಿಕ ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಐಐಟಿ ರೂರ್ಕಿಯ ಭೂ ವಿಜ್ಞಾನ ವಿಭಾಗದ ಅಧ್ಯಕ್ಷ ಸುನಿಲ್ ವಾಜಪೇಯಿ ಅವರು ಮಾತನಾಡಿ, ಈ ಸರ್ಪದ ಉದ್ದ 11 ಮೀಟರ್ (36 ಅಡಿ) ನಿಂದ 15 ಮೀಟರ್ (49.22 ಅಡಿ) ಗಳಷ್ಟು ಇದೆಯೆಂದು ಹೇಳಿದರು. ಇದರ ಪಳೆಯುಳಿಕೆಗಳು ಕಚ್‌ನ ಪಣಂಧ್ರೋ ಗ್ರಾಮದಲ್ಲಿ ಕಂದು ಕಲ್ಲಿದ್ದಲು ಗಣಿಗಳಲ್ಲಿ ಸಿಕ್ಕಿದೆ. ಅದು ಅಂದಾಜು 12,000 ವರ್ಷಗಳ ಹಿಂದೆ ನಾಶವಾಗಿದೆ. ಈ ಸಂಶೋಧನೆಯು ನಮ್ಮನ್ನು ಇಯಸೀನ್ ಯುಗಕ್ಕೆ, ಅಂದರೆ ಕನಿಷ್ಠ 3.39 ಕೋಟಿ ವರ್ಷಗಳ ಹಿಂದಿನ ಕಾಲಕ್ಕೆ ಕೊಂಡೊಯ್ಯುತ್ತದೆ. ಈ ಪಳೆಯುಳಿಕೆಗಳು 2005 ರಲ್ಲಿ ಸಿಕ್ಕಿತ್ತು; ಆದರೆ ಇತರೆ ಯೋಜನೆಗಳಿಗೆ ಆದ್ಯತೆ ನೀಡಿದ್ದರಿಂದ ಅದರ ಬಗ್ಗೆ ಆಳವಾದ ಅಧ್ಯಯನ ನಡೆಸಲಿಲ್ಲ. ಮೊದಲು ಅನೇಕ ಜನರಿಗೆ, ಆ ಪಳೆಯುಳಿಕೆ ಮೊಸಳೆಯದ್ದಾಗಿದೆಯೆಂದು ಅನಿಸುತ್ತಿತ್ತು; ಆದರೆ ಮತ್ತೆ ಅಭ್ಯಾಸ ಮಾಡಿದ ನಂತರ ಅದು ಸರ್ಪದ್ದಾಗಿದೆಯೆಂದು ದೃಢೀಕರಿಸಲಾಗಿದೆ.