Cow Smuggling in Solapur: ಶ್ರೀರಾಮ ನವಮಿಯಂದು ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದರೂ 7 ಗೋವುಗಳ ಪ್ರಾಣ ಉಳಿಸಿದರು !

ಸೊಲ್ಲಾಪುರ – ಶ್ರೀರಾಮನವಮಿಯಂದು ಔರಾದ್ ಗ್ರಾಮದ ಬಳಿ ಗೋವು ಸಾಗಾಣಿಕೆ ವಾಹನವನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದ ಗೋರಕ್ಷಕರ ವಾಹನವನ್ನು ಅಪಘಾತ ಮಾಡಿ ಅವರ ಮೇಲೆ ವಾಹನ ಚಾಲಕನು ಮಾರಣಾಂತಿಕ ದಾಳಿ ಮಾಡಲು ಪ್ರಯತ್ನಿಸಿದ. ಗಾಯಗೊಂಡಿದ್ದರೂ, ಸ್ಥಳೀಯ ಪೊಲೀಸರು ಮತ್ತು ಇತರ ಗೋರಕ್ಷಕರ ಸಹಾಯದಿಂದ ಗೋರಕ್ಷಕರು ಹೇಳಿದ ವಾಹನವನ್ನು ವಶಪಡಿಸಿಕೊಂಡರು. ಇದಾದ ಬಳಿಕ ಈ ವಾಹನದಲ್ಲಿದ್ದ 7 ಹಸುಗಳನ್ನು ರಕ್ಷಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಬಜರಂಗದಳ ಸೊಲ್ಲಾಪುರ ಜಿಲ್ಲಾ ಗೋರಕ್ಷಾ ಪ್ರಮುಖ ಶ್ರೀ. ಪ್ರಶಾಂತ ಪರದೇಶಿ, ಬಜರಂಗದಳದ ಗೋರಕ್ಷಕರಾದ ಶ್ರೀ. ವಿರೇಶ ಮಂಚಾಲ, ಬಜರಂಗದಳ ಮಂದ್ರುಪ್ ಬ್ಲಾಕ್ ಪ್ರಮುಖರಾದ ಶ್ರೀ. ರವಿ ಮ್ಹೆತ್ರೆ, ಗೋರಕ್ಷಕ ಶ್ರೀ. ಅನಿಕೇತ್ ಗೊರಟ್ಯಾಲ ಮತ್ತು ಶ್ರೀ. ವಿವೇಕ ವಂಗಾರಿ ಭಾಗವಹಿಸಿದ್ದರು.

ಈ ವೇಳೆ ಪರಾರಿಯಾಗಿದ್ದ ಅಪರಿಚಿತ ಚಾಲಕನ ವಿರುದ್ಧ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 11 (1), ಬಿ.ಡಿ.ವಿ. 1860 ಸೆಕ್ಷನ್ 427, 504, 506 ಹಾಗೂ ಮೋಟಾರು ವಾಹನ ಕಾಯಿದೆ 1888 ರ ಅಡಿಯಲ್ಲಿ 177, 83 ಹಾಗೂ ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯಿದೆ 9 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಗೋಕಳ್ಳಸಾಗಣೆ ಅಪರಾಧದಲ್ಲಿ ಬಳಸುವ ವಾಹನಗಳ ಪರವಾನಗಿ ರದ್ದುಗೊಳಿಸಬೇಕು ! – ಪ್ರಶಾಂತ ಪರದೇಶಿ, ಗೌರವ ಪ್ರಾಣಿ ಕಲ್ಯಾಣ ಅಧಿಕಾರಿ ಮಹಾರಾಷ್ಟ್ರ ರಾಜ್ಯ

ಗೋವಂಶೀಯರ ಕಳ್ಳಸಾಗಣೆ ವಾಹನಗಳನ್ನು ವಶಪಡಿಸಿಕೊಂಡು ನ್ಯಾಯಾಲಯದ ಅನುಮತಿ ಪಡೆಯದೆ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಮತ್ತೆ ಅದೇ ವಾಹನಗಳ ಮೂಲಕ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಆದ್ದರಿಂದ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ನ್ಯಾಯಾಲಯದ ಅನುಮತಿಯಿಲ್ಲದೆ ಬಿಡುಗಡೆ ಮಾಡದಂತೆ ಎಚ್ಚರಿಕೆ ವಹಿಸಬೇಕು ಮತ್ತು 2 ಅಥವಾ ಅದಕ್ಕಿಂತ ಹೆಚ್ಚು ಅಪರಾಧಗಳಲ್ಲಿ ಒಂದೇ ವಾಹನವನ್ನು ಬಳಸಿರುವುದು ಕಂಡುಬಂದರೆ, ಸಂಬಂಧಿಸಿದ ವಾಹನದ ಪರವಾನಗಿ ರದ್ದುಗೊಳಿಸಬೇಕು. ಈಗ ನಾವು ಗೋಹತ್ಯೆ ವಿಮೋಚನೆಯತ್ತ ಸಾಗುತ್ತಿದ್ದೇವೆ. ಈ ಪ್ರಯತ್ನಗಳಿಗೆ ಶ್ರೀರಾಮನು ಖಂಡಿತಾ ಆಶೀರ್ವದಿಸುತ್ತಾನೆ. ಶ್ರೀರಾಮ ನವಮಿಯ ದಿನದಂದು, ನಾವು ಭಗವಾನ್ ಶ್ರೀರಾಮನ ಚರಣಗಳಲ್ಲಿ ಗೋವಂಶಿಗಳನ್ನು ಉಳಿಸುವ ಸೇವೆಯನ್ನು ಸಲ್ಲಿಸುತ್ತೇವೆ. (ಗೋವುಗಳ ರಕ್ಷಣೆಗಾಗಿ ಪ್ರಾಣ ಪಣಕ್ಕಿಡುವ ಎಲ್ಲಾ ಗೋರಕ್ಷಕರಿಗೆ ಅಭಿನಂದನೆಗಳು ! – ಸಂಪಾದಕರು)

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿರುವಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಿ ಹತ್ಯೆ ಮಾಡಲಾಗುತ್ತಿದೆ. ಹಿಂದೂಗಳ ಹಬ್ಬ ಹರಿದಿನಗಳಲ್ಲಿ ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿವೆ. ಇದರಿಂದ, ಗೋ ಕಳ್ಳಸಾಗಣೆಯ ಸಮಸ್ಯೆ ಎಷ್ಟು ಗಂಭೀರವಾಗಿದೆ? ಅದನ್ನು ಕಲ್ಪಿಸಿಕೊಳ್ಳಬಹುದು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿ ಹಲವು ವರ್ಷಗಳೇ ಕಳೆದಿವೆ. ಹಾಗಾಗಿ ಸರಕಾರಿ ವ್ಯವಸ್ಥೆಯು ಗೋಹತ್ಯೆ, ಗೋಕಳ್ಳಸಾಗಣೆ ಮತ್ತು ಅಕ್ರಮ ಕಸಾಯಿಖಾನೆಗಳನ್ನು ಯಾವಾಗ ನಿಷೇಧಿಸುತ್ತದೆ ?