ಬ್ರಿಟನ್‌ನಲ್ಲಿ ಶಾಲೆಯಲ್ಲಿ ನಮಾಜಪಠಣದ ಮೇಲೆ ನಿಷೇಧದ ವಿರುದ್ಧದ ಅರ್ಜಿಯನ್ನು ನ್ಯಾಯಾಲಯದಿಂದ ವಜಾ!

ಶಾಲೆಯಲ್ಲಿ ಕಲಿಯುವುದಿದ್ದರೆ, ಶಾಲೆಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ನ್ಯಾಯಾಲಯದಿಂದ ತಪರಾಕಿ !

ಲಂಡನ್ – ಬ್ರಿಟನ್‌ನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಶಾಲೆಯ ಪರಿಸರದಲ್ಲಿ ನಮಾಜ ಮಾಡಲು ನಿಷೇಧಿಸಲಾಗಿದೆ. ಶಾಲೆಯ ಈ ನಿರ್ಣಯದ ವಿರುದ್ಧ ಓರ್ವ ಮುಸ್ಲಿಂ ವಿದ್ಯಾರ್ಥಿನಿಯು ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಳು. ಉಚ್ಚ ನ್ಯಾಯಾಲಯವು ವಿದ್ಯಾರ್ಥಿನಿಯ ದೂರನ್ನು ವಜಾಗೊಳಿಸಿ ಅವಳಿಗೆ ‘ಶಾಲೆಯಲ್ಲಿ ಕಲಿಯುವುದಿದ್ದರೆ, ಶಾಲೆಯ ನಿಯಮಗಳನ್ನು ಪಾಲಿಸಬೇಕಾಗುವುದು’, ಎಂದು ಹೇಳಿದೆ. ‘ವಿದ್ಯಾರ್ಥಿನಿ ಅಥವಾ ಅವಳ ಪೋಷಕರಿಗೆ ಶಾಲೆಯ ಯಾವುದೇ ನಿಯಮಗಳು ಇಷ್ಟವಾಗದಿದ್ದರೆ ಅವರು ಶಾಲೆ ತೊರೆಯಬಹುದು’ ಎಂದೂ ನ್ಯಾಯಾಲಯ ತಿಳಿಸಿದೆ. ಉಚ್ಚ ನ್ಯಾಯಾಲಯದ ನಿರ್ಣಯದ ಬಳಿಕ ಶಾಲೆಯ ಸಂಸ್ಥಾಪಕಿ ಮುಖ್ಯ ಶಿಕ್ಷಕಿ ಕ್ಯಾಥರೀನ್ ಬೀರಬಲ ಸಿಂಗ್ ಅವರು ಈ ನಿರ್ಣಯವನ್ನು ಸ್ವಾಗತಿಸಿದರು ಮತ್ತು ಈ ನಿರ್ಣಯವು ಎಲ್ಲಾ ಶಾಲೆಗಳ ಜಯವಾಗಿದೆ ಎಂದು ಹೇಳಿದರು.

ಈ ಪ್ರಕರಣವು ಬ್ರಿಟನ್‌ನ ಬ್ರೆಂಟ್‌ನಲ್ಲಿರುವ ‘ಮೈಕೆಲಾ ಕಮ್ಯುನಿಟಿ ಸ್ಕೂಲ’ಗೆ ಸಂಬಂಧಿಸಿದೆ. ಈ ಶಾಲೆಯ ಪರಿಸರದಲ್ಲಿ ಯಾವುದೇ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಶಾಲೆಯಲ್ಲಿ 700 ವಿದ್ಯಾರ್ಥಿಗಳು ಕಲಿಯುತ್ತಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮುಸಲ್ಮಾನರಿದ್ದಾರೆ. ಈ ಶಾಲೆಯಲ್ಲಿ ನಮಾಜ ಮೇಲೆ ನಿರ್ಬಂಧವಿರುವಾಗಲೂ 30 ಶಾಲಾ ಮುಸಲ್ಮಾನರ ವಿದ್ಯಾರ್ಥಿನಿಯರು ನಮಾಜ ಮಾಡಿದರು. ತದನಂತರ ಶಾಲೆಯು ಕಠೋರ ಕ್ರಮ ಕೈಕೊಂಡು ಎಲ್ಲರಿಗೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿತು. ಇದಾದ ಬಳಿಕ ಓರ್ವ ಶಾಲಾ ಹುಡುಗಿ ಶಾಲೆಯಲ್ಲಿ ನಮಾಜ ಮಾಡುವುದಕ್ಕೆ ಇರುವ ನಿಷೇಧವನ್ನು ಹಿಂಪಡೆಯುವಂತೆ ಕೋರುವ ಅರ್ಜಿಯನ್ನು ಉಚ್ಚನ್ಯಾಯಾಲಯದಲ್ಲಿ ದಾಖಲಿಸಿದ್ದರು

ಸಂಪಾದಕೀಯ ನಿಲುವು

ಶಾಲಾ ಆವರಣದಲ್ಲಿ ನಮಾಜಪಠಣ ಮಾಡಲು ಕೋರುವುದೆಂದರೆ, ಮೂಲದಲ್ಲಿ ಮತಾಂಧತೆಯ ಲಕ್ಷಣವಾಗಿದೆ, ಇದರಿಂದ ಬ್ರಿಟನನ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪು ಬಹಳಷ್ಟು ಮಗ್ಗಲುಗಳಿಂದ ಮಹತ್ವಪೂರ್ಣವಾಗಿದೆ.

ಭಾರತದ ಕರ್ನಾಟಕದಲ್ಲಿ ಕೆಲವು ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಲಾಗಿತ್ತು. ಶಾಲೆಯ ಇಸ್ಲಾಮೀಕರಣ ಮಾಡುವ ಪಿತೂರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿದೆ ಎನ್ನುವುದನ್ನು ಗಮನಿಸಬೇಕು !