ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಮುಸ್ಲಿಂ ನ್ಯಾಯವಾದಿ ಮೊಹಮ್ಮದ್ ಇದ್ರಿಸ್ ಇವರ ನಮಾಜಪಠಣವನ್ನು ಟೀಕಿಸಿರುವ ಬಗ್ಗೆ ಅಲಹಾಬಾದ ಉಚ್ಚ ನ್ಯಾಯಾಲಯದ ‘ಎನ್.ಐ.ಎ’ ವಿಶೇಷ ನ್ಯಾಯಾಧೀಶರಾದ (ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ) ವಿವೇಕಾನಂದ ಶರಣ ತ್ರಿಪಾಠಿಯವರಿಗೆ ಸಮನ್ಸ ಜಾರಿಗೊಳಿಸಿದೆ. (ನ್ಯಾಯಾಲಯದ ಎದುರು ಉಪಸ್ಥಿತರಾಗಿರಲು ಸೂಚನೆ ನೀಡುವುದು). ಇದರಿಂದ ನ್ಯಾಯಾಧೀಶ ತ್ರಿಪಾಠಿಯವರು ಎಪ್ರಿಲ್ 15 ರಂದು ಉಚ್ಚ ನ್ಯಾಯಾಲಯದ ಎದುರಿಗೆ ಬೇಷರತ್ತು ಕ್ಷಮೆ ಕೋರಿದರು. ನಿಜವಾಗಿ ಹೇಳಬೇಕೆಂದರೆ, ನ್ಯಾಯಾಧೀಶ ತ್ರಿಪಾಠಿಯವರು, ಇದ್ರಿಸ್ ಅವರು ಆಗಾಗ್ಗೆ ನಮಾಜ್ ಮಾಡಲು ನ್ಯಾಯಾಲಯದಿಂದ ಹೊರಗೆ ಹೋಗುತ್ತಿದ್ದರು. ಇದರಿಂದ ಆರೋಪಿಯನ್ನು ಪ್ರತಿನಿಧಿಸಲು ಒಬ್ಬ ನ್ಯಾಯಮಿತ್ರನನ್ನು (ಆಮಿಕಸ್ ಕ್ಯೂರಿ) ನೇಮಿಸಿದ್ದರು.
1. ನ್ಯಾಯಾಧೀಶ ತ್ರಿಪಾಠಿ ಅವರ ನಿರ್ಧಾರವನ್ನು ವಿರೋಧಿಸಿ ಮೊಹಮ್ಮದ ಇದ್ರಿಸ ಅವರು ಅಲಹಾಬಾದ ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.
2. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶಮೀಮ ಅಹಮದ ಅವರು ಇದು ಧಾರ್ಮಿಕ ಆಧಾರದಲ್ಲಿ ಭೇದಭಾವವಾಗಿದೆಯೆಂದು ಹೇಳಿದರು. ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುವ ಕಲಂ 15 ರ ಉಲ್ಲಂಘನೆಯಾಗಿದೆಯೆಂದು ತಿಳಿಸುತ್ತಾ, ನ್ಯಾಯಾಧೀಶ ತ್ರಿಪಾಠಿಯವರಿಗೆ ಸಮನ್ಸ ಕಳುಹಿಸಿದರು. ಇದರಿಂದ ನ್ಯಾಯಾಧೀಶ ತ್ರಿಪಾಠಿಯವರು ಉಚ್ಚ ನ್ಯಾಯಾಲಯಕ್ಕೆ ಹೋಗಿ ನ್ಯಾಯಾಧೀಶರ ಎದುರಿಗೆ ಬೇಷರತ್ ಕ್ಷಮೆಯನ್ನು ಕೋರಿದರು.
3. ವಿಚಾರಣೆ ವೇಳೆ ಕೆಲವು ಮುಸ್ಲಿಂ ನ್ಯಾಯವಾದಿಗಳು ಶುಕ್ರವಾರದ ಪ್ರಾರ್ಥನೆಗೆ ಹೋಗಲು ನ್ಯಾಯಾಲಯದ ವಿಚಾರಣೆಯನ್ನು ಸ್ವಲ್ಪ ಕಾಲ ಮುಂದೂಡುವಂತೆ ಮನವಿ ಮಾಡಿದ್ದರು. ಇದರಿಂದ ನ್ಯಾಯಾಧೀಶ ವಿವೇಕಾನಂದ ಶರಣ ತ್ರಿಪಾಠಿ ಅವರು ಮುಸ್ಲಿಂ ವಕೀಲರ ಅರ್ಜಿಯನ್ನು ವಜಾಗೊಳಿಸಿ, ಮುಸ್ಲಿಂ ನ್ಯಾಯವಾದಿಗಳು ನಮಾಜ್‌ಗೆ ಹೋದಾಗಲೆಲ್ಲಾ ಅಮಿಕಸ್ ಕ್ಯೂರಿ(ನ್ಯಾಯಮಿತ್ರ) ಅವರು ಆರೋಪಿಗಳನ್ನು ಪ್ರತಿನಿಧಿಸುತ್ತಾರೆ ಎಂದು ಆದೇಶ ಹೊರಡಿಸಿದ್ದರು.