Congress Calls Naxalites As Martyrs: ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೊಂದ 29 ನಕ್ಸಲೀಯರನ್ನು ‘ಹುತಾತ್ಮರು’ ಎಂದು ಕರೆದ ಕಾಂಗ್ರೆಸ್ !

ರಾಯಪುರ – ಛತ್ತೀಸ್‌ಗಢದ ನಕ್ಸಲ್ ಪೀಡಿತ ಕಾಂಕೇರ್ ಜಿಲ್ಲೆಯ ಹಿದೂರ್ ಮತ್ತು ಕಾಲ್ಪರ್ ಗ್ರಾಮಗಳ ಅರಣ್ಯದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಇತ್ತೀಚೆಗೆ ನಡೆದ ಎನ್‌ಕೌಂಟರ್‌ನಲ್ಲಿ 29 ನಕ್ಸಲೀಯರು ಹತರಾಗಿದ್ದಾರೆ. ಕಾಂಗ್ರೆಸ್ ವಕ್ತೆ ಸುಪ್ರಿಯಾ ಶ್ರೀನೆಟ್ ಇವರು ನಕ್ಸಲೀಯರನ್ನು ‘ಹುತಾತ್ಮರು’ ಎಂದು ಕರೆದಿದ್ದು, ಎನ್‌ಕೌಂಟರ್ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಬಿಜೆಪಿಯ ಗೌರವ್ ಭಾಟಿಯಾ ಇವರು ಕಾಂಗ್ರೆಸ್ ವಕ್ತೆಯ ಹೇಳಿಕೆ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದಾರೆ. ‘ಕಾಂಗ್ರೆಸ್ ವಕ್ತಾರರು ಈ ನಕ್ಸಲೀಯರನ್ನು ‘ಹುತಾತ್ಮರು’ ಎಂದು ಕರೆಯುತ್ತಿದ್ದಾರೆ. ಇದನ್ನು ಮಾನಸಿಕ ಮತ್ತು ನೈತಿಕ ದಿವಾಳಿತನ ಎಂದು ಕರೆಯಲಾಗುತ್ತದೆ’ ಎಂದು ಭಾಟಿಯಾ ಹೇಳಿದರು.

ಬಿಜೆಪಿಯಿಂದ ಶ್ರೀನೆಟ್ ಮೇಲೆ ಟೀಕೆ

ಸುಪ್ರಿಯಾ ಶ್ರೀನೆಟ್ ಹೇಳಿಕೆಯನ್ನು ಬಿಜೆಪಿ ಟೀಕಿಸಿದೆ. ಶ್ರೀನೆಟ್ ವಿರುದ್ಧ ‘X’ ನಲ್ಲಿ ‘ಹ್ಯಾಶ್‌ಟ್ಯಾಗ್’ (ಒಂದೇ ವಿಷಯದ ಬಗ್ಗೆ ಚರ್ಚೆ ನಡೆಸುವುದು) ಪ್ರಾರಂಭಿಸುವ ಮೂಲಕ ಬಿಜೆಪಿ ಶ್ರೀನೆಟ್ ಅನ್ನು ಟೀಕಿಸಿದೆ.

ಸಂಪಾದಕೀಯ ನಿಲುವು

  • ಇಂತಹ ಕಾಂಗ್ರೆಸ್ ನ ರಾಜಕೀಯ ಅಸ್ತಿತ್ವವನ್ನು ಕೊನೆಗಾಣಿಸಲು ಈ ಚುನಾವಣೆಯಲ್ಲಿ ರಾಷ್ಟ್ರಪ್ರೇಮಿಗಳಿಗೆ ಅವಕಾಶವಿದೆ. ಅವರು ಅದನ್ನು ಕಳೆದುಕೊಳ್ಳಬಾರದು !
  • ಜಿಹಾದಿ ಭಯೋತ್ಪಾದಕರು, ನಕ್ಸಲೀಯರು ಮತ್ತು ಮತಾಂಧರನ್ನು ವೈಭವೀಕರಿಸಿದ ಕಾಂಗ್ರೆಸ್ ಭಾರತವನ್ನು ಹೆಚ್ಚು ಆಳಿದೆ, ಇದು ನಾಚಿಕೆಗೇಡಿನ ಸಂಗತಿ !