Rama Navami Processions: ಭಾಜಪದ ಶಾಸಕ ಟಿ. ರಾಜಾ ಸಿಂಹ ಇವರು ಕಾಂಗ್ರೆಸ್ ಸರಕಾರದ ವಿರೋಧವನ್ನು ಲೆಕ್ಕಿಸದೇ ಮೆರವಣಿಗೆ ನಡೆಸಿದರು !

ಭಾಗ್ಯನಗರ (ತೆಲಂಗಾಣ)ದ ರಾಮನವಮಿ ಮೆರವಣಿಗೆಗೆ ಅನುಮತಿ ನಿರಾಕರಿಸಿತ್ತು !

ಭಾಗ್ಯನಗರ (ತೆಲಂಗಾಣ) – ಇಲ್ಲಿನ ಹಿಂದುತ್ವನಿಷ್ಠ ಭಾಜಪ ಶಾಸಕ ಟಿ. ರಾಜಾ ಸಿಂಹ ಇವರಿಗೆ ರಾಮ ನವಮಿಯಂದು ನಡೆಸುವ ಮೆರವಣಿಗೆಗೆ ಕಾಂಗ್ರೆಸ್ ಸರಕಾರ ಅನುಮತಿ ನಿರಾಕರಿಸಿತ್ತು. ಆದರೂ ಟಿ. ರಾಜಾ ಸಿಂಹ ಇವರು ಸರಕಾರದ ವಿರೋಧವನ್ನು ಲೆಕ್ಕಿಸದೇ ಮೆರವಣಿಗೆ ನಡೆಸಿದರು. ಈ ಮೆರವಣಿಗೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಾವಿರಾರು ಹಿಂದೂಗಳು ಸಹಭಾಗಿ ಆಗಿದ್ದರು.

1. ಶಾಸಕ ಟಿ. ರಾಜಾಸಿಂಹ ಇವರು ಮಾತನಾಡಿ, ಏಪ್ರಿಲ್ 16 ರಂದು ರಾತ್ರಿ 8.30 ಕ್ಕೆ ಪೊಲೀಸರು ಒಂದು ಪತ್ರವನ್ನು ಕಳುಹಿಸಿ ಈ ವರ್ಷ ರಾಮನವಮಿ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿಸಿದ್ದರು. ಈ ಸಮಸ್ಯೆಯನ್ನು ಪರಿಹರಿಸಲು ಬಹಳ ಕಡಿಮೆ ಸಮಯ ಉಳಿದಿದೆ. ಹಲವು ವರ್ಷಗಳಿಂದ ನಡೆಸುತ್ತಿರುವ ರಾಮನವಮಿ ಮೆರವಣಿಗೆ ಭಕ್ತಿಯ ಸಂಕೇತವಾಗಿದೆ. ಈ ಮೆರವಣಿಗೆಗೆ ದೇಶದ ಎಲ್ಲೆಡೆಯಿಂದ ಲಕ್ಷಾಂತರ ರಾಮಭಕ್ತರು ಆಗಮಿಸುತ್ತಾರೆ. ಇದು ಹಿಂದೂಗಳ ಸ್ವಾತಂತ್ರ್ಯದ ಮೇಲೆ ಅನಗತ್ಯವಾಗಿ ಹಸ್ತಕ್ಷೇಪ ಮಾಡುವ ಪ್ರಯತ್ನವಾಗಿದೆ. ಈ ಮೊದಲು ಅಧಿಕಾರದಲ್ಲಿದ್ದ ಕೆ. ಚಂದ್ರಶೇಖರ ರಾವ್ ಸರಕಾರದ ಹಾದಿಯಲ್ಲಿ ಸಾಗುತ್ತಿರುವ ಕಾಂಗ್ರೆಸ್ ಸರಕಾರದಿಂದ ನಮಗೆ ಇದೇ ರೀತಿಯ ನಿರ್ಧಾರದ ಅಪೇಕ್ಷೆ ಇತ್ತು.

2. ಈ ಮೆರವಣಿಗೆ ಆಕಾಶಪುರಿ ಹನುಮಾನ್ ದೇವಸ್ಥಾನದಿಂದ ರಾಮಕೋಟಿಯ ಹನುಮಾನ್ ವ್ಯಾಯಾಮಶಾಲೆಯ ವರೆಗೆ ಇತ್ತು. ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ಸಮಯವನ್ನು ಕೇಳಲಾಗಿತ್ತು; ಆದರೆ ತೆಲಂಗಾಣ ಪೊಲೀಸರು ಈ ಬೇಡಿಕೆಯನ್ನು ತಿರಸ್ಕರಿಸಿದ್ದರು.

ಜೈಪುರದಲ್ಲಿ (ರಾಜಸ್ಥಾನ)ಇಲ್ಲಿ ಕಾಂಗ್ರೆಸ್ ನ ದೂರಿನ ಮೇರೆಗೆ ಕೇಸರಿ ಧ್ವಜಗಳನ್ನು ತೆಗೆಯಲಾಯಿತು !

ಇನ್ನೊಂದೆಡೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಹಿಂದೂ ಸಂಘಟನೆಗಳು ಬೀದಿಗಿಳಿದಿವೆ. ಮುಖ್ಯಮಂತ್ರಿ ಭಜನಲಾಲ್ ಶರ್ಮಾ ಇವರ ನೇತೃತ್ವದಲ್ಲಿ ಭಾಜಪ ಸರಕಾರವಿದ್ದರೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತ ಚುನಾವಣಾ ಆಯೋಗದ ಅಧೀನದಲ್ಲಿದ್ದು, ಕಾಂಗ್ರೆಸ್ ದೂರಿನ ಮೇರೆಗೆ ವಿವಿಧೆಡೆ ಹಚ್ಚಿದ್ದ ಕೇಸರಿ ಧ್ವಜಗಳನ್ನು ಪೊಲೀಸರು ತೆಗೆದಿದ್ದಾರೆ. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಕಾಂಗ್ರೆಸ್‌ನ ಪ್ರತಿಕೃತಿ ದಹಿಸಿ ಈ ಕೃತ್ಯವನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಮತ್ತು ರಾಮನಾಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹಿಂದೂ ಸಂಘಟನೆಗಳು ಹೇಳಿವೆ.

ಜೈಪುರ ನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್ ಸಿಂಗ್ ಖಾಚರಿಯಾವಾಸ್ ಅವರು ನ್ಯಾಯವಾದಿ ಮಂಗಲ ಸಿಂಹ ಇವರ ಮೂಲಕ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದು, ‘2024 ರ ಲೋಕಸಭಾ ಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷಕ್ಕೆ ಲಾಭದಾಯಕವಾಗಬೇಕೆಂದು ಪರಕೋಟಾ ಮಾರುಕಟ್ಟೆಯಲ್ಲಿ ಕೇಸರಿ ಧ್ವಜಗಳನ್ನು ನೆಡಲಾಗಿದೆ. ಇದು ಆಚಾರ ಸಂಹಿತೆಯ ಉಲ್ಲಂಘನೆಯಾಗಿದೆ,” ಎಂದು ಅದರಲ್ಲಿ ಹೇಳಲಾಗಿದೆ.

ಇದಾದ ನಂತರ ಮಹಾನಗರ ಪಾಲಿಕೆಯು ರಾತ್ರೋರಾತ್ರಿ ಧ್ವಜಗಳನ್ನು ಇಳಿಸಿತು. ಹವಾಮಹಲ ಶಾಸಕ ಬಾಲಮುಕುಂದಾಚಾರ್ಯ ಅವರು ಜಿಲ್ಲಾಧಿಕಾರಿಗೆ ದೂರು ನೀಡಿ ಧ್ವಜವನ್ನು ಮರಳಿ ಹಚ್ಚುವಂತೆ ಮನವಿ ಮಾಡಿದ್ದಾರೆ.

ಸಂಪಾದಕೀಯ ನಿಲುವು

ರಾವಣನ ರೂಪದ ಕಾಂಗ್ರೆಸ್ಸಿಗೆ ಶ್ರೀರಾಮನ ಅಲರ್ಜಿ ಇದೆ ಎಂಬುದು ಜಗಜ್ಜಾಹೀರಾಗಿರುವುದರಿಂದ ಕಾಂಗ್ರೆಸ್ ಸರಕಾರ ರಾಮನವಮಿ ಮೆರವಣಿಗೆಗೆ ಅನುಮತಿ ನಿರಾಕರಿಸಿದೆ. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿರುವ ಹಿಂದೂಗಳಿಗೆ ಇದು ಒಪ್ಪಿಗೆಯೇ ?