ECI Asks ‘X’ To Remove Post: ‘X’ ಗೆ 4 ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಚುನಾವಣಾ ಆಯೋಗದಿಂದ ಆದೇಶ !

  • ನೀತಿ ಸಂಹಿತೆ ಉಲ್ಲಂಘನೆ ಆರೋಪ !

  • ಇದೆಂತಹ ಅಭಿವ್ಯಕ್ತಿ ಸ್ವಾತಂತ್ರ್ಯ? – ‘X’

ನವ ದೆಹಲಿ – ಭಾರತದ ಚುನಾವಣಾ ಆಯೋಗವು 4 ಚುನಾವಣೆ ಸಂಬಂಧಿತ ಪೋಸ್ಟ್‌ಗಳನ್ನು ತೆಗೆದುಹಾಕಲು ‘X’ ಗೆ ಆದೇಶಿಸಿದೆ. ಇದರಲ್ಲಿ ವೈ.ಎಸ್.ಆರ್. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಎನ್. ಚಂದ್ರಬಾಬು ನಾಯ್ಡು ಮತ್ತು ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ಪೋಸ್ಟಗಳು ಸೇರಿವೆ. ಈ ಪೋಸ್ಟ ನೀತಿ ಸಂಹಿತೆಯನ್ನು ಉಲ್ಲಂಘಿಸಿವೆ ಎಂದು ಆಯೋಗ ಹೇಳಿದೆ. ಇತರ ಪಕ್ಷಗಳ ನಾಯಕರ ವೈಯಕ್ತಿಕ ಜೀವನದ ಆಧಾರದ ಮೇಲೆ ರಾಜಕೀಯ ಪಕ್ಷಗಳ ಟೀಕೆಗೆ ನಾವು ಯಾವುದೇ ರೀತಿಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಆಯೋಗ ಹೇಳಿದೆ. ಈ 4 ಪೋಸ್ಟ್‌ಗಳು ಯಾವುವು? ಇದು ಇನ್ನೂ ತಿಳಿದಿಲ್ಲ.

1. ಎಕ್ಸ್ ಈ ಕುರಿತು ಪ್ರತಿಕ್ರಿಯಿಸುತ್ತಾ, ನಾವು ಪೋಸ್ಟ್ ಅನ್ನು ತೆಗೆದುಹಾಕುತ್ತಿದ್ದೇವೆ ಎಂದು ಹೇಳಿದರು. ಚುನಾವಣಾ ಆಯೋಗದ ಈ ಕ್ರಮವನ್ನು ನಾವು ಒಪ್ಪುವುದಿಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ.

2. ಸಂಸ್ಥೆಯು, ಪೋಸ್ಟಗಳನ್ನು ತೆಗೆದುಹಾಕುವ ಬಗ್ಗೆ ನಾವು 4 ನಾಯಕರಿಗೆ ತಿಳಿಸಿದ್ದೇವೆ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಆದೇಶವನ್ನು ಪ್ರಕಟಿಸುತ್ತಿದ್ದೇವೆ ಎಂದು ಹೇಳಿದೆ.

3. ಈ ಹಿಂದೆ ಫೆಬ್ರವರಿಯಲ್ಲೂ ‘ಎಕ್ಸ್’ ಇದೇ ನಿಲುವು ತಳೆದಿತ್ತು. ಆಗ ಕೇಂದ್ರ ಸರಕಾರ ಕೆಲವು ಖಾತೆಗಳು ಮತ್ತು ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಹೇಳಿತ್ತು.

4. 2021 ರಲ್ಲಿ, ಎಡಪಂಥೀಯ ಜಾಕ್ ಡೋರ್ಸೆ ಸ್ಥಾಪನೆಯ ಮುಖ್ಯಸ್ಥರಾಗಿದ್ದಾಗ, ರೈತರ ಆಂದೋಲನದಲ್ಲಿ ರೈತರ ಖಾತೆಗಳನ್ನು ಅಳಿಸಲು ಕೇಂದ್ರ ಸರಕಾರವು ಕೇಳಿತ್ತು. ಆ ಖಾತೆಗಳು ಖಲಿಸ್ತಾನಿ ಭಯೋತ್ಪಾದಕರಿಗೆ ಸಂಬಂಧಿಸಿತ್ತು. ಆಗ ಸರಕಾರ 1,200 ಖಾತೆಗಳು ಹಾಗೂ 250 ಪತ್ರಕರ್ತರ ಖಾತೆಗಳನ್ನು ಅಳಿಸಲು ಆದೇಶ ನೀಡಿತ್ತು.

5. ನಿಜವಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಮತ್ತು ಹಿಂದುತ್ವನಿಷ್ಠರ ಖಾತೆಗಳ ನಿಷೇಧವನ್ನು ವಿರೋಧಿಸುವ ಎಲೋನ್ ಮಸ್ಕ್ X ನ ಮಾಲಿಕತ್ವವನ್ನು ಹೊಂದಿದ್ದರೂ, ಈ ವಿಷಯದ ಬಗ್ಗೆ ಸಂಸ್ಥೆಯ ನಿಲುವು ಬದಲಾಗಿಲ್ಲ.

ಸಂಪಾದಕೀಯ ನಿಲುವು

‘X’ ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತದೆಯಾದರೂ, ಯಾವುದೇ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಆ ದೇಶದ ಕಾನೂನಿಗಿಂತ ಮಿಗಿಲಿಲ್ಲ. ಈ ವ್ಯತ್ಯಾಸವನ್ನು ‘X’ ಗಮನದಲ್ಲಿಟ್ಟುಕೊಳ್ಳಬೇಕು