ಇಂದು ಶ್ರೀ ರಾಮಲಲ್ಲಾನ ದರ್ಶನ ಹೀಗಿರಲಿದೆ !

ಅಯೋಧ್ಯೆ (ಉತ್ತರ ಪ್ರದೇಶ) – ಇಂದು, ರಾಮ ನವಮಿಯ ನಿಮಿತ್ತ, ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮ ಲಲ್ಲಾನನ್ನು ಆಪಾದಮಸ್ತಕ ರತ್ನಾಭರಣವನ್ನು ಧರಿಸಲಿದ್ದಾನೆ. ಅವನ ವಸ್ತ್ರಗಳು ಚಿನ್ನದ ಎಳೆಗಳಿಂದ ನೇಯಲ್ಪಟ್ಟಿದೆ. ಶ್ರೀ ರಾಮಲಲ್ಲಾ ಧರಿಸಲಿರುವ ಆಭರಣಗಳಲ್ಲಿ ಮುಕುಟ,ಕುಂಡಲ, ಹಾರ, ತಿಲಕ,ಬಾಜುಬಂದ,ಕೈಗಳಿಗೆ ಕಡಗ, ಚಿನ್ನದ ಎಳೆಗಳಿರುವ ಬಿಲ್ಲು ಮತ್ತು ಬಾಣಗಳು ಇರಲಿದೆ. ರತ್ನಗಳಿಂದ ಹೆಣೆದಿರುವ ಉಡುಪು ಹಳದಿ ಮತ್ತು ಗುಲಾಬಿ ಬಣ್ಣಗಳಲ್ಲಿ ಸಿದ್ಧ ಪಡಿಸಲಾಗಿದೆ.

(ಸೌಜನ್ಯ – DD News)

15 ರಿಂದ 20 ಲಕ್ಷ ಭಕ್ತರು ದರ್ಶನಕ್ಕೆ ಬರಲಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಪ್ರಧಾನ ಕಾರ್ಯದರ್ಶಿ ಚಂಪತ ರಾಯ್ ಮಾತನಾಡಿ, ರಾಮನವಮಿ ದಿನದಂದು ಬೆಳಿಗ್ಗೆ 3.3೦ಗಂಟೆಗೆ ದರ್ಶನ ಪ್ರಾರಂಭವಾಗಲಿದೆ ಮತ್ತು ಅಂದು ದಿನವಿಡೀ 20 ಗಂಟೆ ದರ್ಶನ ಸಿಗಲಿದೆ . ದೇಶಾದ್ಯಂತ ಕನಿಷ್ಠ 15 ರಿಂದ 20 ಲಕ್ಷ ಭಕ್ತರು ಆ ದಿನದಂದು ಅಯೋಧ್ಯೆಗೆ ಬರಬಹುದು. ಇದರಿಂದಾಗಿ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಭಕ್ತರು ತಮ್ಮ ಮನೆಯಲ್ಲಿಯೇ ಹಬ್ಬವನ್ನು ಆಚರಿಸಬೇಕು.

ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಕುಮಾರ ಮಾತನಾಡಿ, ಅಂದು 1 ಲಕ್ಷ ಯೋಧರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಏಪ್ರಿಲ್ 19 ರವರೆಗೆ ಅಯೋಧ್ಯೆಯಲ್ಲಿ ದೊಡ್ಡ ವಾಹನಗಳನ್ನು ನಿಷೇಧಿಸಲಾಗಿದೆ.