ಬೆಂಗಳೂರು – ರಾಮ ನವಮಿ ದಿನದಂದು ಅಂದರೆ ಏಪ್ರಿಲ್ 17 ರಂದು ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಲಕ್ಷಾಂತರ ಜನರು ಸೇರಲಿದ್ದಾರೆ. ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ರಾಮಲಲ್ಲಾನ ಮೂರ್ತಿಯನ್ನು ರಚಿಸಿದ ಶಿಲ್ಪಿ ಅರುಣ ಯೋಗಿರಾಜ ಇವರು, ರಾಮನವಮಿಯ ಮೊದಲು ಸಂದರ್ಶನವೊಂದರಲ್ಲಿ ಜನರು ಕೇಳುವ ಹೆಚ್ಚಿನ ಪ್ರಶ್ನೆಗಳು ಶ್ರೀರಾಮನ ಕಣ್ಣುಗಳ ಬಗ್ಗೆ ಆಗಿರುತ್ತದೆ ಎಂದು ಹೇಳಿದರು. ಶ್ರೀರಾಮನ ಕಣ್ಣುಗಳು ತಮ್ಮೊಂದಿಗೆ ಮಾತನಾಡುತ್ತಿವೆ ಎಂದು ಅವರಿಗೆ ಅನಿಸುತ್ತಿದೆ . ಆದ್ದರಿಂದ ಅವರು ನನ್ನನ್ನು , ‘ನಾನು ಶ್ರೀರಾಮನ ಕಣ್ಣುಗಳನ್ನು ಹೇಗೆ ಮಾಡಿದ್ದೇನೆ? ‘ ಎಂದು ಕೇಳುತ್ತಾರೆ. ನನ್ನ ಉತ್ತರ ಯಾವಾಗಲೂ ಇದೇ ಇರುತ್ತದೆ, ಅದನ್ನು ನಾನು ಮಾಡಿಲ್ಲ. ಪ್ರಭು ಶ್ರೀ ರಾಮನೇ ಅದನ್ನು ನನ್ನಿಂದ ಮಾಡಿಸಿಕೊಂಡಿದ್ದಾನೆ.
ಶೇ.100 ರಷ್ಟು ಜನರು ಮೂರ್ತಿಯನ್ನು ಇಷ್ಟಪಟ್ಟಿದ್ದಾರೆ!
ಶಿಲ್ಪಿ ಯೋಗಿರಾಜ ಮಾತನಾಡಿ ಯಾವುದೇ ಕಲಾಕೃತಿಯನ್ನು ವ್ಯಾಪಕವಾಗಿ ಟೀಕಿಸಲಾಗುತ್ತದೆ ; ಆದರೆ ಪ್ರಭು ಶ್ರೀರಾಮನ ಮೂರ್ತಿಯನ್ನು ತಯಾರಿಸುವಾಗ ಈ ರೀತಿಯ ಏನೂ ಸಂಭವಿಸಿಲ್ಲ. ಅವನಿಗೆ ಜನರಿಂದ ಪ್ರೀತಿ ಮತ್ತು ಮೆಚ್ಚುಗೆ ಸಿಕ್ಕಿದೆ. ಕಲಾ ಕ್ಷೇತ್ರದಲ್ಲಿ ಶೇ. 70 ರಷ್ಟು ಜನರಿಗೆ ನಿಮ್ಮ ಕೆಲಸ ಇಷ್ಟವಾಗುತ್ತದೆ ಮತ್ತು ಶೇ. 30 ರಷ್ಟು ಜನರಿಗೆ ಇಷ್ಟವಾಗುವುದಿಲ್ಲ; ಆದರೆ ಇಲ್ಲಿ ನನಗೆ ಶೇ.100 ರಷ್ಟು ಪ್ರೀತಿ ಮತ್ತು ಮೆಚ್ಚುಗೆ ಸಿಕ್ಕಿತು. ನನ್ನ ಮೇಲೆ ಶೇಕಡಾ ಒಂದರಷ್ಟೂ ಟೀಕೆ ಆಗಲಿಲ್ಲ.
ನನಗೆ ಮೂರ್ತಿಯನ್ನು ಜೀವಂತಗೊಳಿಸುವುದಿತ್ತು!
ನಾನು ಭಕ್ತನ ದೃಷ್ಟಿಕೋನದಿಂದ ಕೆಲಸ ಮಾಡುತ್ತಿದ್ದೆನು. ನನಗೆ ಭಗವಂತನ ಮೂರ್ತಿಯನ್ನು ಜೀವಂತ ಗೊಳಿಸುವುದಿತ್ತು. ಅದಕ್ಕಾಗಿ ನಾನು 7 ತಿಂಗಳ ಕಾಲ ಅಪಾರ ಪರಿಶ್ರಮ ವಹಿಸಿದೆನು. ಇದು ನನಗೆ ಕಷ್ಟವಾಗಿರಲಿಲ್ಲ, ಆದರೆ ಇದು ನನಗೆ ಒಂದು ಅವಕಾಶವಾಗಿತ್ತು. ಭಗವಂತನ ಆಶೀರ್ವಾದದಿಂದಲೇ ನನಗೆ ಅವನ ಮೂರ್ತಿ ಮಾಡುವ ಅವಕಾಶ ಸಿಕ್ಕಿತು ಎಂದು ಅವರು ಹೇಳಿದರು.
ಮೂರ್ತಿ ತಯಾರಿಸುವಾಗ ಸಾತ್ವಿಕ ಆಹಾರ ತೆಗೆದುಕೊಂಡಿದ್ದೇನೆ!
ಯೋಗಿರಾಜರು ಮಾತನಾಡಿ, ಮೂರ್ತಿ ತಯಾರಿಸುವಾಗ ಆಹಾರದ ಮೇಲೆ ಕೆಲವು ನಿರ್ಬಂಧಗಳಿದ್ದವು. ಅಡುಗೆಯನ್ನು ಕಡಿಮೆ ಎಣ್ಣೆ ಮತ್ತು ಕಡಿಮೆ ಖಾರ ಬಳಸಿ ಬೇಯಿಸಲಾಗುತ್ತಿತ್ತು. ಬೆಳಿಗ್ಗೆ ನನಗೆ ಪ್ರೋಟೀನ್ ಆಗಿ ಬೇಳೆಕಾಳುಗಳನ್ನು ನೀಡಲಾಗುತ್ತಿತ್ತು. ನಾನು ಸಾತ್ವಿಕ ಆಹಾರವನ್ನು ಸೇವಿಸುತ್ತಿದ್ದೆನು.