ರಾಂಪುರ (ಉತ್ತರ ಪ್ರದೇಶ)ದಲ್ಲಿ ನಡೆದ ಘಟನೆ !
ರಾಂಪುರ (ಉತ್ತರ ಪ್ರದೇಶ) – ಸಮಾಜವಾದಿ ಪಕ್ಷದ ಅಭ್ಯರ್ಥಿ ಮೊಹಿಬುಲ್ಲಾ ನದ್ವಿ ಅವರ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೊಹಿಬುಲ್ಲಾ ನದ್ವಿ ಇದರಲ್ಲಿ ಡಾ. ಭೀಮರಾವ್ ಅಂಬೇಡ್ಕರ್ ಅವರ ಜಯಂತಿಯಂದು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡದಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ವೀಡಿಯೊದ ಕೊನೆಯಲ್ಲಿ, ನದ್ವಿ ತರಾತುರಿಯಲ್ಲಿ ಸ್ಥಳದಿಂದ ಹೊರಡುತ್ತಿರುವುದನ್ನು ಕಾಣಬಹುದು. ದಲಿತ-ಮುಸ್ಲಿಂ ಐಕ್ಯತೆಗೆ ಅನುಗುಣವಾಗಿ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
An incident from #Rampur (Uttar Pradesh) !
Samajwadi Party candidate Mohibullah Nadvi avoids offering flowers to a statue of Dr. #Ambedkar !
Now will those who chant ‘Dalit-Muslim bhai bhai’ (Dalits and Muslims are brothers) say anything about this ?#AmbedkarJayanti2024… pic.twitter.com/CuCKQRlntC
— Sanatan Prabhat (@SanatanPrabhat) April 17, 2024
ಕಾರ್ಯಕ್ರಮದ ನಂತರ ಪತ್ರಕರ್ತರೊಬ್ಬರು ನದ್ವಿ ಅವರನ್ನು ಅಂಬೇಡ್ಕರ್ ಪ್ರತಿಮೆಗೆ ಏಕೆ ಮಾಲಾರ್ಪಣೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಈ ಕುರಿತು ಅವರು, ‘ನನ್ನದೇ ಆದ ರೀತಿಯಲ್ಲಿ ಹಾರ ಹಾಕಿದ್ದೇನೆ’ ಎಂದು ಹೇಳಿದರು. ಈ ಉತ್ತರದಿಂದ ಪತ್ರಕರ್ತರು ತೃಪ್ತರಾಗಲಿಲ್ಲ. ಮತ್ತೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಲು ನದ್ವಿ ತಪ್ಪಿಸಿಕೊಳ್ಳತೊಡಗಿದರು. ಪತ್ರಕರ್ತರು ಅವರನ್ನು ಹಿಂಬಾಲಿಸಲು ಪ್ರಾರಂಭಿಸಿದಾಗ ಪೊಲೀಸರು ಅವರನ್ನು ತಡೆದರು.
ಸಂಪಾದಕೀಯ ನಿಲುವುದಲಿತ-ಮುಸ್ಲಿಂ ಭಾಯಿ ಭಾಯಿ’ ಎನ್ನುವವರು ಈ ಬಗ್ಗೆ ಬಾಯಿ ತೆರೆಯುತ್ತಾರೆಯೇ ? |