ಒಂದು ವಾರದಲ್ಲಿ ಸಾರ್ವಜನಿಕರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿ ! – ಸರ್ವೋಚ್ಚ ನ್ಯಾಯಾಲಯ

ಯೋಗಋಷಿ ಬಾಬಾ ರಾಮ್‌ದೇವ್ ಅವರು ಅಲೋಪತಿ ಔಷಧದ ಟೀಕಿಸಿದ್ದ ಬಗ್ಗೆ ಭಾರತೀಯ ವೈದ್ಯಕೀಯ ಸಂಘವು ಅರ್ಜಿ ಸಲ್ಲಿಸಿದ ಪ್ರಕರಣ

ನವದೆಹಲಿ – ಮುಂದಿನ ಒಂದು ವಾರದಲ್ಲಿ ಸಾರ್ವಜನಿಕರ ಕ್ಷಮೆ ಯಾಚಿಸುವಂತೆ ಯೋಗಋಷಿ ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಆಯುರ್ವೇದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಹಿಂದೆ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಅಲೋಪತಿ ಔಷಧಗಳ ಬಗ್ಗೆ ಟೀಕಿಸಿದ್ದರಿಂದ ಸುಪ್ರೀಂ ಕೋರ್ಟ್ ಅಸಮಧಾನ ವ್ಯಕ್ತಪಡಿಸಿತ್ತು. ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಮಾನತುಲ್ಲಾ ಅವರ ವಿಭಾಗೀಯಪೀಠವು, ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ; ಆದರೆ ಅಲೋಪತಿಯನ್ನು ನಿಂದಿಸುವ ಹಕ್ಕು ನಿಮಗಿಲ್ಲ. ಈ ವಿಚಾರಣೆಯ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಯೋಗಋಷಿ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಈ ಹಿಂದೆ ಬೇಷರತ್ ಕ್ಷಮೆಯಾಚಿಸಿರುವುದನ್ನು ವಿಭಾಗೀಯಪೀಠವು ಗಮನಿಸಿತ್ತು.

ಇದಕ್ಕೂ ಮುನ್ನ ಏಪ್ರಿಲ್ 10 ರಂದು ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಕ್ಷಮಾದಾನವನ್ನು ಸ್ವೀಕರಿಸಲು ವಿಭಾಗೀಯಪೀಠ ನಿರಾಕರಿಸಿತ್ತು. ಬಳಿಕ ಇಬ್ಬರೂ ಸಾರ್ವಜನಿಕ ಕ್ಷಮೆಯಾಚನೆಗೆ ಸಿದ್ಧರಿರುವಂತೆ ತೋರಿಸಿದ್ದಾರೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸಲ್ಲಿಸಿದ ನೋಟಿಸ್‌ಗೆ ಉತ್ತರಿಸುವಾಗ ಅವರು ಈ ಬೇಷರತ್ ಕ್ಷಮೆಯಾಚಿಸಿದ್ದರು. ಈ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 23 ರಂದು ನಡೆಯಲಿದೆ.

ಸಂಪಾದಕೀಯ ನಿಲುವು

ಪ್ರಸ್ತುತ ಚಾಲ್ತಿಯಲ್ಲಿರುವ ಆಪಾದಿತ ‘ಹೆಲ್ತ್ ಡ್ರಿಂಕ್ಸ್’ ಬಗ್ಗೆ ಭಾರತೀಯ ವೈದ್ಯಕೀಯ ಸಂಘ ಎಂದಾದರೂ ಧ್ವನಿ ಎತ್ತಿದೆಯೇ ?