‘ಲಿವ್ ಇನ್ ರಿಲೇಶನ್‌ಶಿಪ್’ ಅನ್ನು ಬೆಂಬಲಿಸಿದ ನಟಿ ಜೀನತ್ ಅಮಾನರಿಗೆ ನಟಿ ಮುಮ್ತಾಜರಿಂದ ಛೀಮಾರಿ !
(ಲಿವ್-ಇನ್ ರಿಲೇಶನ್ ಶಿಪ್ ಎಂದರೆ ಮದುವೆಯಾಗದೆ ಪುರುಷ ಮತ್ತು ಸ್ತ್ರೀ ಒಟ್ಟಿಗೆ ವಾಸಿಸುವುದು)
ಮುಂಬಯಿ – ಹಿರಿಯ ನಟಿ ಜೀನತ್ ಅಮಾನ್ ಅವರು ಇತ್ತೀಚೆಗೆ ದೇಶದ ಯುವಕ-ಯುವತಿಯರಿಗೆ ಮದುವೆಗೆ ಮುನ್ನ ‘ಲಿವ್-ಇನ್ ಸಂಬಂಧ’ದಲ್ಲಿ ವಾಸಿಸುವ ಬಗ್ಗೆ ಹೇಳಿಕೆ ನೀಡಿದ್ದರು. “ಇದು ಸಂಬಂಧವನ್ನು ಸುಧಾರಿಸಲು ಮತ್ತು ಪರೀಕ್ಷಿಸಲು ಅವಕಾಶ ನೀಡುತ್ತದೆ” ಎಂದು ಅವರು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಬಾಲಿವುಡ್ ನ ಹಿರಿಯ ನಟಿ ಮುಮ್ತಾಜ, ಮದುವೆಗೂ ಮುನ್ನ ಒಟ್ಟಿಗೆ ವಾಸಿಸುವುದರಿಂದ ಸಂಬಂಧದಲ್ಲಿ ಬಿರುಕು ಮೂಡಬಹುದು ಎಂದಿದ್ದಾರೆ.
ಮುಮ್ತಾಜ ಹೇಳಿದ್ದು,
1. ನಾನು ಜೀನತ್ ಅವರ ಲೀವ್-ಇನ್ ಸಲಹೆಯನ್ನು ಒಪ್ಪುವುದಿಲ್ಲ. ನೀವು ಎಷ್ಟೇ ಲೀವ್-ಇನ್‌ಗಳಲ್ಲಿದ್ದರೂ, ತಿಂಗಳುಗಟ್ಟಲೆ ಒಟ್ಟಿಗೆ ವಾಸಿಸಿದ ಬಳಿಕ ಮದುವೆ ಯಶಸ್ವಿಯಾಗುವುದು ಎನ್ನುವುದಕ್ಕೆ ಖಾತ್ರಿ ಏನು ? ಮದುವೆಯನ್ನೇ ಮಾಡಿಕೊಳ್ಳಬಾರದು ಎಂದು ನಾನು ಹೇಳುತ್ತೇನೆ. ಇಂದಿನ ಕಾಲದಲ್ಲಿ ತಮ್ಮನ್ನು ತಾವು ಆ ಬಂಧನದಲ್ಲಿ ಬಂಧಿಸಿಡುವ ಆವಶ್ಯಕತೆ ಏನಿದೆ? ಮಗುವಿಗಾಗಿಯೇ? ಹಾಗಿದ್ದರೆ ಹೊರಗೆ ಹೋಗಿ ಸರಿಯಾದ ವ್ಯಕ್ತಿಯನ್ನು ಹುಡುಕಿ ಮತ್ತು ಮದುವೆಯಾಗದೇ ಮಗುವನ್ನು ಪಡೆಯಿರಿ. ಕಾಲ ಬಹಳಷ್ಟು ಮುಂದುವರಿದಿದೆ. ನಿಮ್ಮ ಹುಡುಗಿಯರಿಗೆ ‘ಈಗ ಪುರುಷರ ಅವಶ್ಯಕತೆ ಇಲ್ಲ’ ಎಂದು ಹೇಳಿತ್ತಾ ಬೆಳೆಸಿರಿ. ನನಗೆ ಮದುವೆಯಾಗಿ 40 ವರ್ಷಗಳಾಗಿವೆ. ವಿವಾಹ ಬಂಧನವನ್ನು ಉಳಿಸಿಕೊಳ್ಳಬೇಕಾಗುತ್ತದೆ ಮತ್ತು ಅದು ಸುಲಭವಲ್ಲ.
2. ಜೀನತ್ ವಿಚಾರ ಮಾಡಬೇಕು , ಅವಳು ಏನು ಸಲಹೆ ನೀಡುತ್ತಿದ್ದಾಳೆ? ಸಾಮಾಜಿಕ ಮಾಧ್ಯಮದಲ್ಲಿ ಇದ್ದಕ್ಕಿದ್ದ ಹಾಗೆ ಇಷ್ಟು ದೊಡ್ಡ ಹೇಳಿಕೆ ನೀಡಿದ್ದಾಳೆ. ಯುವಕ-ಯುವತಿಯರು ಲಿವ್-ಇನ್ ಸಂಸ್ಕೃತಿಯನ್ನು ಅಳವಡಿಸಿಕೊಂಡರೆ, ಭವಿಷ್ಯದಲ್ಲಿ ಮದುವೆಗಳು ನಡೆಯುವುದಿಲ್ಲ. ನನಗೆ ಪ್ರಾಮಾಣಿಕವಾಗಿ ಹೇಳಿರಿ, ನೀವು ನಿಮ್ಮ ಮಗನ ಮದುವೆಯನ್ನು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಹುಡುಗಿಯೊಂದಿಗೆ ಮಾಡುತ್ತೀರಾ? ಜೀನತ್ ಳ ಉದಾಹರಣೆಯನ್ನೇ ತೆಗೆದುಕೊಳ್ಳಿರಿ. ಅವಳಿಗೆ ಮದುವೆಗೆ ಮುಂಚೆ ಅನೇಕ ವರ್ಷಗಳಿಂದ ಮಜಹರ ಖಾನ್ (ಝೀನತ್ ಅಮಾನ್ ಅವರ ಪತಿ) ಪರಿಚಿತರಿದ್ದರು; ಆದರೂ ಅವಳ ಮದುವೆಯ ಅನುಭವ ಕೆಟ್ಟದಾಗಿತ್ತು. ಹಾಗಾಗಿ ಅವಳು ಈ ಬಗ್ಗೆ ಸಲಹೆಯನ್ನೇ ನೀಡಬಾರದು ಎಂದು ನನಗೆ ಅನಿಸುತ್ತದೆ ಎಂದು ಮುಮ್ತಾಜ ಟೀಕಿಸಿದರು.