ಝೇಲಂ ನದಿಯಲ್ಲಿ ದೋಣಿ ಮುಳುಗಿ 6 ಜನರ ಸಾವು

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) – ಏಪ್ರಿಲ್ 16 ರಂದು ಬೆಳಿಗ್ಗೆ ಬಟವಾರ ಪ್ರದೇಶದ ಝೇಲಂ ನದಿಯಲ್ಲಿ ದೋಣಿ ಮುಳುಗಿ 6 ಜನರು ಸಾವನ್ನಪ್ಪಿದ್ದಾರೆ. ಈ ದೋಣಿಯಲ್ಲಿ 11 ಜನರು ಪ್ರಯಾಣಿಸುತ್ತಿದ್ದರು. ಕಳೆದ 48 ಗಂಟೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಝೇಲಂ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಇದರಿಂದಾಗಿ ದೋಣಿ ಪಲ್ಟಿಯಾಗಿದೆ ಎನ್ನಲಾಗಿದೆ.