ಇರಾನ್‌ನ ದಾಳಿಗೆ ಪ್ರತ್ಯುತ್ತರ ನೀಡುವ ಇಸ್ರೇಲ್‌ನ ಏಕಪಕ್ಷೀಯ ನಿರ್ಧಾರ !

  • ಇರಾನ್ ವಶಪಡಿಸಿಕೊಂಡಿರುವ ಇಸ್ರೇಲ್ ಹಡಗಿನಿಂದ 17 ಭಾರತೀಯ ಕಾರ್ಮಿಕರನ್ನು ಬಿಡುಗಡೆ ಮಾಡುವಂತೆ ಭಾರತವು ಇರಾನನೊಂದಿಗೆ ಮಾತುಕತೆ !

  • ಇರಾನ ಭಾರತೀಯ ಅಧಿಕಾರಿಗಳನ್ನು ಕಾರ್ಮಿಕರನ್ನು ಭೇಟಿಯಾಗಲು ಅವಕಾಶ ನೀಡಲಿದೆ !

ಟೆಲ್ ಅವಿವ (ಇಸ್ರೇಲ) – ಇರಾನ ಏಪ್ರಿಲ್ 13 ರಂದು ನಡೆಸಿದ ವೈಮಾನಿಕ ದಾಳಿಯ ನಂತರ, ಇಸ್ರೇಲ್ ಸೇಡು ತೀರಿಸಿಕೊಳ್ಳುತ್ತದೆ ಎಂದು ಮಾತನಾಡುತ್ತಿರುವಾಗ ಇಸ್ರೇಲನ ಯುದ್ಧ ಸಚಿವರ ಮರುದಿನವೇ ಸಭೆ ನಡೆಯಿತು. ಅದರಲ್ಲಿ ದಾಳಿಯ ಪ್ರತ್ಯುತ್ತರ ನೀಡುವ ನಿರ್ಧಾರದ ಬಗ್ಗೆ ಒಮ್ಮತ ಮೂಡಿದ್ದು, ಯುದ್ಧ ಹೇಗೆ ಮತ್ತು ಯಾವಾಗ ಯುದ್ಧ ನಡೆಯುತ್ತದೆ ಎಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ‘ಟೈಮ್ಸ್ ಆಫ್ ಇಸ್ರೇಲ್’ ವರದಿ ಮಾಡಿದೆ.

ಇರಾನ್ ಸೇನೆಯು ಏಪ್ರಿಲ್ 13 ರಂದು ಭಾರತೀಯ ಕಾಲಮಾನ ಅನುಸಾರ ಮಧ್ಯಾಹ್ನ 3 ಗಂಟೆಗೆ ಸುಮಾರು 300 ಡ್ರೋನ್ ಮತ್ತು ಕ್ಷಿಪಣಿಗಳೊಂದಿಗೆ ಇಸ್ರೇಲ್ ಮೇಲೆ ದಾಳಿ ಮಾಡಿತು. ಇಸ್ರೇಲ್ ಶೇ. 99 ಡ್ರೋನ್ ಕ್ಷಿಪಣಿಗಳನ್ನು ತಡೆಯಿತು. ಈ ದಾಳಿಯಲ್ಲಿ ಇಸ್ರೇಲ್‌ನ ‘ನೆವಾಟೀಮ್ ಏರ್ ಫೋರ್ಸ್’ ನ ಸೇನಾ ಶಿಬಿರಕ್ಕೆ ಸ್ವಲ್ಪಮಟ್ಟಿಗೆ ಹಾನಿಯಾಗಿದೆ. ಇರಾನ ಇಸ್ರೇಲ್ ಮೇಲಿನ ಈ ದಾಳಿಗೆ ‘ಆಪರೇಷನ್ ಟ್ರೂ ಪ್ರಾಮಿಸ್’ ಎಂದು ಹೆಸರು ನೀಡಿದೆ. ಎಪ್ರಿಲ್ 1 ರಂದು ಇಸ್ರೇಲ್ ಸಿರಿಯಾದಲ್ಲಿರುವ ಇರಾನ ರಾಯಭಾರ ಕಚೇರಿಯ ಬಳಿ ವೈಮಾನಿಕ ದಾಳಿ ನಡೆಸಿತ್ತು. ಇದರಲ್ಲಿ ಇರಾನ್‌ನ ಇಬ್ಬರು ಸರ್ವೋಚ್ಚ ಮಿಲಿಟರಿ ಕಮಾಂಡರ್‌ಗಳು ಮತ್ತು ‘ರೆವಲ್ಯೂಷನರಿ ಗಾರ್ಡ್ಸ್’ ನ 7 ಸಿಬ್ಬಂದಿಗಳು ಹತ್ಯೆಗೀಡಾದರು. ಇದರ ನಂತರ, ಇರಾನ ಸೇಡು ತೀರಿಸಿಕೊಳ್ಳಲು ಇಸ್ರೇಲ್ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿತ್ತು.

ಭಾರತ ಮತ್ತು ಇರಾನ್ ವಿದೇಶಾಂಗ ಸಚಿವರ ಭೇಟಿ

ಇಸ್ರೇಲ್ ಮೇಲೆ ದಾಳಿ ಮಾಡುವಾಗ ಇರಾನ ಒರ್ವ ಇಸ್ರೇಲಿ ಮಿಲಿಯನೇರನ ಸಂಸ್ಥೆಯ ಹಡಗನ್ನು ವಶಕ್ಕೆ ಪಡೆದಿತ್ತು. ಇದು ಸರಕು ಸಾಗಿಸುವ ಹಡಗು ಭಾರತಕ್ಕೆ ಬರುತ್ತಿತ್ತು ಮತ್ತು ಅದರಲ್ಲಿ 17 ಭಾರತೀಯ ಉದ್ಯೋಗಿಗಳು ಇದ್ದರು. ಈ ಹಿನ್ನಲೆಯಲ್ಲಿ ಭಾರತದ ವಿದೇಶಾಂಗ ಸಚಿವ ಡಾ. ಜೈಶಂಕರ ಅವರು ಇರಾನ್‌ನ ವಶದಲ್ಲಿರುವ 17 ಭಾರತೀಯರನ್ನು ಬಿಡುಗಡೆಗೊಳಿಸಲು ಇರಾನ್ ವಿದೇಶಾಂಗ ಸಚಿವ ಹುಸ್ಸೇನ ಅಮೀರ ಅಬ್ದುಲ್ಲಾಹಿಯಾನ ಅವರೊಂದಿಗೆ ಚರ್ಚಿಸಿದರು. ಡಾ. ಜೈಶಂಕರ್ ಮಾತನಾಡಿ, ಎರಡೂ ದೇಶಗಳು ಶಾಂತಿಯಿಂದ ಮತ್ತು ರಾಜತಾಂತ್ರಿಕತೆಯಿಂದ ಅಡಚಣೆಯನ್ನು ಬಗೆಹರಿಸಿಕೊಳ್ಳಬೇಕು. ಟೆಹರಾನ ಶೀಘ್ರದಲ್ಲೇ ಭಾರತೀಯ ಅಧಿಕಾರಿಗಳಿಗೆ ಅವರನ್ನು ಭೇಟಿ ಮಾಡಲು ಹೊರ್ಮುಝ ಸಮುದ್ರದ ಬಳಿ ಅವಕಾಶ ನೀಡಲಿದೆ ಎಂದು ಹೇಳಿದರು.