India’s Gift to Nepal: ಭಾರತದಿಂದ ನೇಪಾಳಕ್ಕೆ 35 ಆಂಬ್ಯುಲೆನ್ಸ್‌ ಮತ್ತು 66 ಶಾಲಾ ಬಸ್‌ ಉಡುಗೊರೆ !

ಕಾಠ್ಮಂಡು – ನೇಪಾಳದ ವಿವಿಧ ಸಂಸ್ಥೆಗಳಿಗೆ ಭಾರತವು ಇತ್ತೀಚೆಗೆ 35 ಆಂಬ್ಯುಲೆನ್ಸ್‌ ಮತ್ತು 66 ಶಾಲಾ ಬಸ್‌ಗಳನ್ನು ಉಡುಗೊರೆಯಾಗಿ ನೀಡಿದೆ. ನೇಪಾಳದಲ್ಲಿನ ಭಾರತದ ರಾಯಭಾರಿ ನವೀನ್ ಶ್ರೀವಾಸ್ತವ್ ಅವರು ನೇಪಾಳ ಸರಕಾರದ ಹಣಕಾಸು ಸಚಿವ ವರ್ಷಮನ್ ಪುನ್ ಅವರ ಸಮ್ಮುಖದಲ್ಲಿ ಆಂಬ್ಯುಲೆನ್ಸ್ ಮತ್ತು ಶಾಲಾ ಬಸ್‌ಗಳ ಕೀಲಿ ಕೈಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಉಡುಗೊರೆಯು ಭಾರತದ ದೀರ್ಘಾವಧಿಯ ಉಪಕ್ರಮದ ಭಾಗವಾಗಿದೆ ಮತ್ತು ಈ ಕ್ರಮವು ಉಭಯ ದೇಶಗಳ ನಡುವಿನ ಆಳವಾದ ಪಾಲುದಾರಿಕೆಯನ್ನು ದೃಢ ಪಡಿಸುತ್ತದೆ ಎಂದು ಭಾರತೀಯ ರಾಯಭಾರಿ ಶ್ರೀವಾಸ್ತವ್ ಹೇಳಿದ್ದಾರೆ. ಇದರ ಉದ್ದೇಶ ಅಗತ್ಯ ಸೇವೆಗಳಲ್ಲಿ ಉತ್ತಮ ಸೌಲಭ್ಯಗಳ ಮೂಲಕ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವುದಾಗಿದೆ ಎಂದು ಹೇಳಿದರು.
ನೇಪಾಳದ ಹಣಕಾಸು ಸಚಿವ ವರ್ಷಮಾನ್ ಪುನ ಅವರು ಭಾರತ ಸರಕಾರದ ಸಹಯೋಗದೊಂದಿಗೆ ನೇಪಾಳದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳನ್ನು ಶ್ಲಾಘಿಸಿದರು. ಇದರಿಂದ ಉಭಯ ದೇಶಗಳ ಜನರ ನಡುವಿನ ಸಂಬಂಧವು ಹೆಚ್ಚು ಸದೃಢವಾಗುವುದು, ಎಂದು ಹೇಳಿದರು.