3 ಭಾರತೀಯ ಯುವಕರ ಅಪಹರಣ!
ನವದೆಹಲಿ – ಭಾರತದ ನೆರೆಯ ರಾಷ್ಟ್ರ ಮ್ಯಾನ್ಮಾರ್‌ನಲ್ಲಿ ಸೇನೆ ಮತ್ತು ಜನರ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಅಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಭಾರತವು ಅಲ್ಲಿನ ಅನಿಶ್ಚಿತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮ್ಯಾನ್ಮಾರ್‌ನ ಸಿಟವೆಯಲ್ಲಿರುವ ವಾಣಿಜ್ಯ ರಾಯಭಾರ ಕಚೇರಿಯ ಸಿಬ್ಬಂದಿಗಳನ್ನು ಯಾಂಗೂನಗೆ ಸ್ಥಳಾಂತರಿಸಲಾಗಿದೆಯೆಂದು ಹೇಳಿದೆ.
1. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ ಇವರು ಮಾತನಾಡಿ, ಭಾರತವು ಮ್ಯಾನ್ಮಾರ್‌ನಲ್ಲಿನ ಪರಿಸ್ಥಿತಿಯ ಸೂಕ್ಷ್ಮವಾಗಿ ನಿಗಾ ವಹಿಸಿದೆ. ನಮ್ಮ ನಾಗರಿಕರ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮಂಡಾಲೆಯ ಭಾರತೀಯ ವಾಣಿಜ್ಯ ರಾಯಭಾರ ಕಚೇರಿ ಕಾರ್ಯ ನಿರ್ವಹಿಸುತ್ತಿದೆ.
2. ಮೂವರು ಭಾರತೀಯ ಯುವಕರ ಅಪಹರಣದ ಘಟನೆಯ ಸುದ್ದಿಯ ಕುರಿತು ಜೈಸ್ವಾಲ್ ಅವರು ಮಾತನಾಡಿ, ಭಾರತೀಯ ರಾಯಭಾರ ಕಚೇರಿ ಈ ಪ್ರಕರಣದ ಬಗ್ಗೆ ಕಾರ್ಯನಿರತವಾಗಿದ್ದು, ಆ ಯುವಕರು ಆದಷ್ಟು ಬೇಗನೆ ಸ್ವದೇಶಕ್ಕೆ ಮರಳುವರು ಎನ್ನುವ ಭರವಸೆ ಇದೆ ಎಂದು ಹೇಳಿದರು.
3. ಫೆಬ್ರವರಿ 1, 2021 ರಂದು, ಸೇನೆಯು ಅಧಿಕಾರವನ್ನು ಕಬಳಿಸಿದ್ದು, ಮ್ಯಾನಮಾರನಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಕೋರಿಕೆಗಾಗಿ ವ್ಯಾಪಕ ಹಿಂಸಾತ್ಮಕ ಪ್ರದರ್ಶನಗಳು ನಡೆಯುತ್ತಿವೆ.