ಅನುದಾನಿತ ಖಾಸಗಿ ಆಸ್ಪತ್ರೆಗಳಿಂದ ಬಡವರಿಗಾಗಿ ಹಾಸಿಗೆ ಕಾಯ್ದಿರಿಸುವ ಭರವಸೆಗೆ ವಿರೋಧ (ಹರತಾಳ) !

ಸರ್ವೋಚ್ಚ ನ್ಯಾಯಾಲದಿಂದ ಖಾಸಗಿ ಆಸ್ಪತ್ರೆಗಳಿಗೆ ಛೀಮಾರಿ !

ನವದೆಹಲಿ – ದೇಶಾದ್ಯಂತ ಕೆಲವು ಖಾಸಗಿ ಆಸ್ಪತ್ರೆಗಳು ಸರಕಾರದ ಸಹಾಯಧನದ ಮೇಲೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತವೆ. ಅದರ ಮೇಲೆ ಆಸ್ಪತ್ರೆಗಳನ್ನು ನಿರ್ಮಿಸಿ, ಮತ್ತು ಈ ಆಸ್ಪತ್ರೆಗಳಲ್ಲಿ 25 ಪ್ರತಿಶತದಷ್ಟು ಹಾಸಿಗೆಗಳನ್ನು ಬಡವರಿಗೆ ಮೀಸಲಿಡುವುದಾಗಿ ಭರವಸೆ ಕೊಡುತ್ತವೆ; ಆದರೆ ಈ ಭರವಸೆಗಳು ಎಂದಿಗೂ ಈಡೇರುವುದಿಲ್ಲ. ಇದನ್ನು ನಾವು ಹಲವು ಬಾರಿ ನೋಡಿದ್ದೇವೆ, ಎಂದು ಖಾಸಗಿ ಆಸ್ಪತ್ರೆಗಳಿಗೆ ಉಚ್ಚನ್ಯಾಯಾಲಯವು ಛೀಮಾರಿ ಹಾಕಿದೆ. ನೇತ್ರ ರೋಗಗಳ ಚಿಕಿತ್ಸೆಗೆ ಏಕರೂಪದ ದರವನ್ನು ನಿಗದಿಪಡಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಅಖಿಲ ಭಾರತ ನೇತ್ರವಿಜ್ಞಾನ ಸೊಸೈಟಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಮೇಲಿನ ಸೂಚನೆಗಳನ್ನು ನೀಡಿದೆ. ತಜ್ಞರು ಮತ್ತು ಸಾಮಾನ್ಯ ವೈದ್ಯರ ದರ ಯಾವಾಗಲೂ ಒಂದೇ ಇರಲು ಸಾಧ್ಯವಿಲ್ಲ ಎಂದು ‘ಸೊಸೈಟಿ ‘ ಹೇಳಿದೆ.

ಸಂಪಾದಕೀಯ ನಿಲುವು

ನ್ಯಾಯಾಲಯವು ಇಂತಹ ಆಸ್ಪತ್ರೆಗಳಿಗೆ ಕೇವಲ ಛೀಮಾರಿ ಹಾಕುವುದಲ್ಲದೆ, ಅವರ ಕಡೆಯಿಂದ ಭರವಸೆಗಳು ಮತ್ತು ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಕಠಿಣ ನೀತಿಯನ್ನು ಜಾರಿಗೆ ತರಬೇಕು ಎಂದು ಸಾಮಾನ್ಯ ಜನರಿಗೆ ಅನಿಸುತ್ತದೆ !