Dismissal of Indian Employees: ಕೆನಡಾದಲ್ಲಿ ರಾಜಕೀಯ ಕಚೇರಿಗಳಿಂದ ಭಾರತೀಯ ಉದ್ಯೋಗಿಗಳ ವಜಾ!

ಭಾರತವು ಕೆನಡಾದ 41 ರಾಜಕೀಯ ಅಧಿಕಾರಿಗಳನ್ನು ತೆಗೆದುಹಾಕಿರುವುದಕ್ಕೆ ಕೆನಡಾದ ಪ್ರತ್ಯುತ್ತರ!

ಒಟ್ಟಾವಾ (ಕೆನಡಾ) – ಕೆನಡಾ ಭಾರತದಲ್ಲಿರುವ ತನ್ನ ರಾಜಕೀಯ ಕಚೇರಿಗಳಲ್ಲಿ ಕೆಲಸ ಮಾಡುವ ಅನೇಕ ಭಾರತೀಯ ಉದ್ಯೋಗಿಗಳನ್ನು ವಜಾಗೊಳಿಸಿದೆ ಹಾಗೆಯೇ ಚಂಡೀಗಢ, ಮುಂಬಯಿ ಮತ್ತು ಬೆಂಗಳೂರಿನಲ್ಲಿರುವ ಕೆನಡಾದ ವಾಣಿಜ್ಯ ರಾಯಭಾರ ಕಚೇರಿಯ ಎಲ್ಲ ಸಿಬ್ಬಂದಿಗಳನ್ನು ತೆಗೆದು ಹಾಕಿದೆಯೆಂದು ಈ ಸಂದರ್ಭದಲ್ಲಿ ಕೆನಡಾದ ಹೈಕಮಿಷನ್ ಸಾರ್ವಜನಿಕ ಸಂಪರ್ಕ ಕಚೇರಿ ತಿಳಿಸಿದೆ. ಭಾರತ ಕೆನಡಾದ ರಾಜಕೀಯ ಅಧಿಕಾರಿಗಳನ್ನು ತೆಗೆದುಹಾಕಿದ ಬಳಿಕ ಈ ನಿರ್ಣಯವನ್ನು ತೆಗೆದುಕೊಂಡಿದೆ.

ಕಳೆದ ವರ್ಷ ಭಾರತವು ಕೆನಡಾ ದೇಶಕ್ಕೆ ಅದರ 62 ರಾಜತಾಂತ್ರಿಕರಲ್ಲಿ 41 ರಾಜತಾಂತ್ರಿಕರನ್ನು ಮರಳಿ ಕರೆಸಿಕೊಳ್ಳುವಂತೆ ಹೇಳಿತ್ತು. ಎರಡೂ ದೇಶಗಳ ರಾಜಕೀಯ ಸಿಬ್ಬಂದಿಗಳ ಸಂಖ್ಯೆ ಸಮಾನವಾಗಿರಲು ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆಯೆಂದು ವಿದೇಶಾಂಗ ಸಚಿವಾಲಯ ಹೇಳಿತ್ತು. `ಭಾರತದಲ್ಲಿ ಉಪಸ್ಥಿತರಿರುವ ಕೆನಡಾದ ಹೆಚ್ಚುವರಿ ರಾಜತಾಂತ್ರಿಕರು ನಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಾರೆ’ ಎಂದು ಭಾರತ ಆರೋಪಿಸಿತ್ತು.

ಭಾರತವು ನಮ್ಮ ನಾಗರಿಕರ ಸೇವೆಯನ್ನು ಮುಂದುವರಿಸುತ್ತವೆ! – ಕೆನಡಾ

`ನಾವು ಭಾರತದಲ್ಲಿ ನಮ್ಮ ನಾಗರಿಕರಿಗೆ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುತ್ತೇವೆ. ಕೆನಡಾದಲ್ಲಿ ಅಧ್ಯಯನ ಮಾಡಲು, ಕೆಲಸ ಮಾಡಲು ಅಥವಾ ವಾಸಿಸಲು ಭಾರತೀಯ ನಾಗರಿಕರನ್ನು ನಾವು ಸ್ವಾಗತಿಸುತ್ತಲೇ ಇರುತ್ತೇವೆ.’ – ಕೆನಡಾದ ಹೈ ಕಮಿಷನ್