ಬಂಗಾಳದಲ್ಲಿ ಸಿಎಎ, ಎನ್.ಆರ್.ಸಿ. ಮತ್ತು ಸಮಾನ ನಾಗರಿಕ ಕಾನೂನು ಜಾರಿಗೊಳಿಸಲು ಬಿಡುವುದಿಲ್ಲ ! – ಮಮತಾ ಬ್ಯಾನರ್ಜಿ, ಬಂಗಾಲ ಮುಖ್ಯಮಂತ್ರಿ

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಂದ ಈದ ಕಾರ್ಯಕ್ರಮದಲ್ಲಿ ರಾಷ್ಟ್ರಘಾತಕ ಹೇಳಿಕೆ !

(ಸಿಎಎ ಎಂದರೆ ಪೌರತ್ವ ತಿದ್ದುಪಡಿ ಕಾಯ್ದೆ, ಮತ್ತು ಎನ್‌ಆರ್‌ಸಿ ಎಂದರೆ ರಾಷ್ಟ್ರೀಯ ಪೌರತ್ವ ನೋಂದಣಿ)

ಕೋಲಕಾತಾ (ಬಂಗಾಳ) – ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಸಮಾನ ನಾಗರಿಕ ಕಾಯಿದೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈದ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹೇಳಿದರು. ‘ಚುನಾವಣೆಯಲ್ಲಿ ಕೆಲವು ಜನರು ಗಲಭೆ ನಡೆಸಲು ಪ್ರಯತ್ನಿಸಬಹುದು; ಆದರೆ ನೀವು ಅವರ ಬಲೆಗೆ ಬೀಳಬೇಡಿ’ ಎಂದೂ ಅವರು ಈ ಸಮಯದಲ್ಲಿ ಕರೆ ನೀಡಿದರು. (ಹಿಂದೂಗಳ ಹಬ್ಬಗಳ ಸಮಯದಲ್ಲಿ, ತೃಣಮೂಲ ಕಾಂಗ್ರೆಸ್‌ನ ಮತಾಂಧ ಮುಸಲ್ಮಾನ ಕಾರ್ಯಕರ್ತರೇ ಗಲಭೆ ನಡೆಸುತ್ತಿರುತ್ತಾರೆ, ಈ ವಿಷಯದಲ್ಲಿ ಮಮತಾ ಬ್ಯಾನರ್ಜಿಯವರು ಮಾತನಾಡಬೇಕು-ಸಂಪಾದಕರು)

(ಸೌಜನ್ಯ –  India Today)

ಮಮತಾ ಬ್ಯಾನರ್ಜಿ ಹೇಳಿದರು,

1. ಈ ಚುನಾವಣೆಯಲ್ಲಿ ಕೆಲವು ಜನರಿಗೆ ತನಿಖಾ ಸಂಸ್ಥೆಯ ಬೆದರಿಕೆ ತೋರಿಸಿ, ಜನತೆಯನ್ನು ಹೆದರಿಸುತ್ತಿದ್ದಾರೆ. ಕೇಂದ್ರ ತನಿಖಾ ಇಲಾಖೆ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮುಂತಾದವರು ಕೆಲವು ಜನರನ್ನು ಬೆನ್ನಿಗೆ ಬಿಟ್ಟಿದ್ದಾರೆ. ನೀವು ಅನೇಕ ಸ್ಥಳಗಳಲ್ಲಿ ಕಾರಾಗೃಹಗಳನ್ನು ಕಟ್ಟಿ ಎಲ್ಲರನ್ನೂ ಅದರಲ್ಲಿ ದಬ್ಬಿರಿ; ಆದರೆ ನೀವು 130 ಕೋಟಿ ಜನರನ್ನು ಜೈಲಿಗೆ ಹಾಕಬಲ್ಲಿರೇ ? ನಾನು ದೇಶಕ್ಕಾಗಿ ರಕ್ತ ಹರಿಸಲು ಸಿದ್ಧಳಿದ್ದೇನೆ; ಆದರೆ ಈ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದರು. (ಬಂಗಾಳದಲ್ಲಿ, ಮತಾಂಧ ಮುಸ್ಲಿಮರು ಹಿಂದೂಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ, ನೆರೆಯ ಬಾಂಗ್ಲಾದೇಶದಲ್ಲಿಯೂ ಬಂಗಾಳಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಈ ವಿಷಯದ ಬಗ್ಗೆ ಮಮತಾ ಬ್ಯಾನರ್ಜಿ ಒಂದೇ ಒಂದು ಮಾತನ್ನು ಹೇಳುವುದಿಲ್ಲ! – ಸಂಪಾದಕರು)

2. ಚುನಾವಣೆ ಹತ್ತಿರ ಬಂದಿರುವಾಗ ದೇಶದ ಕೆಲವು ಮುಸಲ್ಮಾನ ಮುಖಂಡರಿಗೆ ದೂರವಾಣಿ ಮಾಡಿ ಅವರನ್ನು ಸೆಳೆಯಲು ಪ್ರಯತ್ನಿಸಲಾಗುತ್ತಿದೆ. ಚುನಾವಣೆಯ ಕಾಲದಲ್ಲಿ ನೀವು(ಭಾಜಪ) ಕೆಲವು ಮುಸಲ್ಮಾನ ಜನರನ್ನು ಆಯ್ಕೆ ಮಾಡುತ್ತಿದೆ ಮತ್ತು ಅವರಿಗೆ ಏನು ಬೇಕು ಎಂದು ಕೇಳುತ್ತಿದ್ದಾರೆ. ನಾನು ನಿಮಗೆ ಹೇಳುತ್ತೇನೆ, ಅವರು ಏನನ್ನೂ ಬಯಸುವುದಿಲ್ಲ

3. ಒಂದು ವೇಳೆ ಯಾರಾದರೂ ಗಲಭೆಯನ್ನು ಪ್ರಚೋದಿಸಿದಾಗ, ನೀವು ಶಾಂತರಾಗಿ ಸುಮ್ಮನಿರಿ; ಕಾರಣ ಸ್ಫೋಟವಾದರೆ, ಅವರು ರಾಷ್ಟ್ರೀಯ ತನಿಖಾ ದಳವನ್ನು ಕಳುಹಿಸುತ್ತಾರೆ ಮತ್ತು ಎಲ್ಲರನ್ನೂ ಬಂಧಿಸುತ್ತಾರೆ. ಎಲ್ಲರಿಗೂ ಬಂಧಿಸಿದರೆ ದೇಶ ಬರಡಾಗುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎನ್ನುವುದು ನಮ್ಮ ಇಚ್ಛೆಯಾಗಿದೆ. ನಾವು ಸಂಘಟಿತರಾಗಿದ್ದರೆ, ಯಾರೂ ನಮಗೆ ಹಾನಿ ಮಾಡಲು ಸಾಧ್ಯವಿಲ್ಲ.

4. ತೃಣಮೂಲ ಕಾಂಗ್ರೆಸ್ ನ ಹೋರಾಟ ಭಾಜಪ ವಿರುದ್ಧ. ‘ಇಂಡಿ’ ಒಕ್ಕೂಟದೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೋ ಬೇಡವೋ ಎಂಬುದನ್ನು ಚುನಾವಣೆ ನಂತರ ನಿರ್ಧರಿಸುತ್ತೇನೆ; ಬಂಗಾಳದಲ್ಲಿ ಮಾತ್ರ ಬೇರೆ ಪಕ್ಷಕ್ಕೆ ಮತ ಹಾಕಬೇಡಿರಿ.

ಸಂಪಾದಕೀಯ ನಿಲುವು

ಸಂಸತ್ತಿನಲ್ಲಿ ಅಂಗೀಕರಿಸಿದ ಕಾನೂನುಗಳನ್ನು ಜಾರಿಗೆ ತರಲು ಬಿಡುವುದಿಲ್ಲ, ಎಂದು ಹೇಳುವ ಮಮತಾ ಬ್ಯಾನರ್ಜಿ ಅವರು ಪ್ರಜಾಪ್ರಭುತ್ವ ವಿರೋಧಿ ಆಗಿದ್ದಾರೆ. ಇಂತಹ ಮುಖ್ಯಮಂತ್ರಿಗಳ ಸರಕಾರವನ್ನು ಕೇಂದ್ರ ಸರಕಾರವು ಕೂಡಲೇ ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಬೇಕು.

ಮುಸಲ್ಮಾನರ ಓಲೈಕೆಗಾಗಿ ದೇಶದ್ರೋಹಿ ಆಡಳಿತ ನಡೆಸಲು ಪ್ರಯತ್ನಿಸುತ್ತಿರುವ ಮಮತಾ ಬ್ಯಾನರ್ಜಿಯವರನ್ನು ಬಂಗಾಳದ ದೇಶಪ್ರೇಮಿ ಜನತೆ ವಿರೋಧಿಸುವುದು ಅಗತ್ಯವಾಗಿದೆ.