Tamil Nadu IT Raid : ತಮಿಳುನಾಡಿನ ‘ಕೋಳಿ ಫಾರಂ’ ಮೇಲೆ ನಡೆದ ದಾಳಿಯಲ್ಲಿ 32 ಕೋಟಿ ರೂಪಾಯಿ ಪತ್ತೆ!

ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿರುವ ಸಂದೇಹ

ಕೊಯಮತ್ತೂರು (ತಮಿಳುನಾಡು) – ಆದಾಯ ತೆರಿಗೆ ಇಲಾಖೆ ಒಂದು ‘ಕೋಳಿ ಫಾರಂ’ ಮೇಲೆ ದಾಳಿ ನಡೆಸಿ 32 ಕೋಟಿ ರೂಪಾಯಿಗಳ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಹಣವನ್ನು ಮತದಾರರಿಗೆ ಹಂಚಲು ಸಂಗ್ರಹಿಸಿರಬಹುದು’ ಎನ್ನುವ ಸಂಶಯ ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ‘ಪೌಲ್ಟ್ರಿ ಫಾರ್ಮ್’ ಮಾಲೀಕರಾದ ಅರುಣ ಮುರುಗನ ಮತ್ತು ಶ್ರವಣ ಮುರುಗನ ಇವರಿಬ್ಬರಿದ್ದು, ರಾಜ್ಯಾದ್ಯಂತ ಅವರ ಅನೇಕ ಶಾಖೆಗಳಿವೆ.