ಶ್ರೀರಾಮ ನವಮಿಯಂದು ಮಧ್ಯಾಹ್ನ 12 ಗಂಟೆಗೆ ಶ್ರೀರಾಮಲಲ್ಲಾ ಗೆ ಸೂರ್ಯತಿಲಕ ಅಭಿಷೇಕ !

‘ಐಐಟಿ ರೂಡ್‌ಕೀ’ ಮಾಡಿದ ತಾಂತ್ರಿಕ ಸಂಶೋಧನೆ ಯಶಸ್ವಿ !

ಅಯೋಧ್ಯೆ (ಉತ್ತರ ಪ್ರದೇಶ) – ಬರುವ ಶ್ರೀರಾಮ ನವಮಿಯಂದು, ಅಂದರೆ ಏಪ್ರಿಲ್ 17 ರಂದು, ಸೂರ್ಯನ ಕಿರಣಗಳು ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಲಲ್ಲಾಗೆ ಅಭಿಷೇಕ ಮಾಡುತ್ತವೆ. ದೇವಾಲಯದ ಮೂರನೇ ಮಹಡಿಯಲ್ಲಿ ಸ್ಥಾಪಿಸಲಾದ ‘ಆಪ್ಟೋಮೆಕಾನಿಕಲ್ ಸಿಸ್ಟಮ್’ (ಯಂತ್ರ ಮತ್ತು ಬೆಳಕಿನ ಸಂಯೋಜಿತ ಯಂತ್ರದ ಕಾರ್ಯವಿಧಾನ) ಮೂಲಕ, ಶ್ರೀರಾಮ ನವಮಿಯಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳು ಗರ್ಭಗುಡಿ ಒಳಗೆ ತಲುಪುತ್ತವೆ. ಇಲ್ಲಿ ಕಿರಣಗಳು ಕನ್ನಡಿಯ ಮೂಲಕ ಪರಿವರ್ತನೆ ಆಗುವುವು ಮತ್ತು ನೇರವಾಗಿ ಶ್ರೀರಾಮ ಲಲ್ಲಾನ ಹಣೆಯ ಮೇಲೆ 75 ಮಿ.ಮೀ ಸುತ್ತುತ್ತಾ ತಿಲಕದ ರೂಪದಲ್ಲಿ 4 ನಿಮಿಷಗಳ ಕಾಲ ಕಾಣುವುದು.

‘ಐಐಟಿ ರೂಡಕೀ’ಯ ಪರಿಶ್ರಮದಿಂದ ಈ ಸೂರ್ಯತಿಲಕ ಸಾಕಾರಗೊಳ್ಳುತ್ತಿದೆ. ಈ ಕುರಿತು ದೇವಾಲಯದ ಅರ್ಚಕ ಅಶೋಕ್ ಉಪಾಧ್ಯಾಯ ಅವರು ಮಾತನಾಡಿ, ಗರ್ಭಗುಡಿಯ ಮೂರನೇ ಮಹಡಿಯಲ್ಲಿ ಸೂರ್ಯ ತಿಲಕಕ್ಕಾಗಿ ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ಯಂತ್ರಗಳ ಜೋಡಣೆ ಹೀಗೆ ಸಿದ್ದ ಮಾಡಲಾಗಿದೆ !

ಯೋಜನಾ ವಿಜ್ಞಾನಿ ದೇವದತ್ ಘೋಷ್ ಮಾತನಾಡಿ, ಸೂರ್ಯನ ಪಥವನ್ನು ಬದಲಾಯಿಸುವ ತತ್ವಗಳ ಆಧಾರದ ಮೇಲೆ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ ‘ರಿಫ್ಲೆಕ್ಟರ್’ (‘ಪ್ರತಿಫಲಕ’), 2 ಕನ್ನಡಿಗಳು, 3 ಲೆನ್ಸ್ (ಭೂತಗನ್ನಡಿ) ಮತ್ತು ಹಿತ್ತಾಳೆ ಪೈಪ್ ಅನ್ನು ಬಳಸಲಾಗಿದೆ. ಸೂರ್ಯನ ಕಿರಣಗಳು ಮೇಲ್ಛಾವಣಿಯ ಮೇಲೆ ಅಳವಡಿಸಲಾದ ಪ್ರತಿಫಲಕದ ಮೇಲೆ ಬಿದ್ದು ಮೊದಲ ಕನ್ನಡಿಯನ್ನು ತಲುಪುತ್ತವೆ. ಅಲ್ಲಿಂದ ಅವು ಕೆಳಮುಖವಾಗಿ ಪ್ರತಿಫಲಿಸುತ್ತವೆ. ಪ್ರತಿಯೊಂದು ಮಹಡಿಯು ಭೂತ ಕನ್ನಡಿಯನ್ನು ಹೊಂದಿದ್ದು ಮತ್ತು ಹಿತ್ತಾಳೆಯ ಪೈಪ್ ಮೂಲಕ ಮತ್ತೊಂದು ಕನ್ನಡಿಯನ್ನು ತಲುಪುತ್ತದೆ. ಎರಡನೇ ಕನ್ನಡಿಯು ಗರ್ಭ ಗುಡಿಯಲ್ಲಿಯ ಶ್ರೀರಾಮಲಲ್ಲಾನ ತಲೆಯ ಮುಂದೆ ಇರುತ್ತದೆ. ಈ ಮೂಲಕ ಸೂರ್ಯನ ಕಿರಣಗಳು ಶ್ರೀರಾಮ ಲಲ್ಲಾಗೆ ಅಭಿಷೇಕ ಮಾಡುತ್ತವೆ.