ಈದ್ ದಿನದಂದು ಮುಸಲ್ಮಾನ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ !

ಶಿಮ್ಲಾ (ಹಿಮಾಚಲ ಪ್ರದೇಶ) – ಹಿಮಾಚಲ ಪ್ರದೇಶ ಸಾರಿಗೆ ಸಂಸ್ಥೆಯು ಈದ್ ನಿಮಿತ್ತ ಮುಸ್ಲಿಂ ಮಹಿಳೆಯರಿಗೆ ಈದ್ ಮತ್ತು ಬಕರೀದ ದಿನದಂದು ಉಚಿತ ಬಸ ಸೇವೆ ನೀಡುವುದಾಗಿ ಘೋಷಿಸಿದೆ. ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ಮಂಡಳಿಯ ಆಡಳಿತ ನಿರ್ದೇಶಕ ರೋಹನಚಂದ್ ಠಾಕೂರ್ ಈ ಆದೇಶ ಹೊರಡಿಸಿದ್ದಾರೆ.

ಏಪ್ರಿಲ್ 11 ರಂದು ಮುಸ್ಲಿಂ ಮಹಿಳೆಯರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಈ ಸೌಲಭ್ಯ ಪಡೆಯಲು ಮುಸ್ಲಿಂ ಮಹಿಳೆಯರು ತಮ್ಮ ಗುರುತಿನ ಚೀಟಿ ತೋರಿಸಬೇಕು. ವಿಶೇಷವೆಂದರೆ, ರಾಜ್ಯದಲ್ಲಿ ಪ್ರಥಮ ಬಾರಿಗೆ ಇಂತಹ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಹಿಂದೆ ರಕ್ಷಾ ಬಂಧನದಂದು ಎಲ್ಲಾ ಮಹಿಳೆಯರಿಗೆ ಇಂತಹ ಸೌಲಭ್ಯವನ್ನು ನೀಡಲಾಗಿತ್ತು. ಆಗ ಯಾವುದೇ ಧಾರ್ಮಿಕ ನಿರ್ಬಂಧಗಳಿರಲಿಲ್ಲ.

ಸಂಪಾದಕೀಯ ನಿಲುವು

ಹಿಂದೂಗಳ ಹಬ್ಬದ ಸಮಯದಲ್ಲಿ ಎಂದಾದರೂ ಹಿಂದೂ ಮಹಿಳೆಯರಿಗೆ ಇಂತಹ ಸೌಲಭ್ಯಗಳನ್ನು ಒದಗಿಸಿದ್ದಾರೆಯೇ? ಪಾಕಿಸ್ತಾನದಲ್ಲಿ ಮಾತ್ರವಲ್ಲ, ಯಾವುದೇ ಇಸ್ಲಾಮಿ ದೇಶಗಳಲ್ಲಿಯೂ ಇಂತಹ ಸೌಲಭ್ಯಗಳನ್ನು ಒದಗಿಸುವುದಿಲ್ಲ; ಆದರೆ ಭಾರತದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿರುವಲ್ಲಿ ಮುಸ್ಲಿಮರಿಗೆ ಅವರ ಧರ್ಮದ ಆಧಾರದಲ್ಲಿ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂಬುದನ್ನು ಗಮನಿಸಿರಿ.