ಚಂಡೀಗಡ- ಪಂಜಾಬಿನಲ್ಲಿರುವ ನಾಭಾದ ಸರಕಾರಿ ಕಾಲೇಜಿನಲ್ಲಿನ ಕಲಾ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿರುವ ಘಟನೆ ಬಹಿರಂಗವಾಗಿದೆ. ಈ ಘಟನೆ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಮಾರ್ಚ 27ರಂದು ನಡೆದಿದೆ. ಆದರೆ ದೂರು ಈಗ ದಾಖಲಾಗಿದೆ. ಈ ದೂರಿನ ಆಧಾರದ ಮೇಲೆ 3 ಜನರ ವಿರುದ್ಧ ಅಪರಾಧ ದಾಖಲಿಸಲಾಗಿದೆ. ಈ ಆರೋಪಿ ವಿದ್ಯಾರ್ಥಿಗಳಲ್ಲಿ ದವಿಂದರ ಸಿಂಗ್ ಎಂಬವನು ಕೂಡ ಒಬ್ಬನಾಗಿದ್ದಾನೆ. ಈ ವಿದ್ಯಾರ್ಥಿನಿಯನ್ನು ಮುಖ್ಯೋಪಾಧ್ಯಾಪಕರ ಕೊಠಡಿಗೆ ಕರೆಸಲಾಗಿತ್ತು. ಅವಳು ಅಲ್ಲಿಗೆ ಹೋದಾಗ ದವಿಂದರ ಸಿಂಗ್ ಅವನೊಂದಿಗೆ ಮತ್ತಿಬ್ಬರು ವಿದ್ಯಾರ್ಥಿಗಳು ಅಲ್ಲಿದ್ದರು. ಈ ಮೂವರು ಸೇರಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು.
ತರಣತಾರಣದಲ್ಲಿ ಮಹಿಳೆಯನ್ನು ಅರೆಬೆತ್ತಲೆ ಮಾಡಿದ ಜನ
ಪಂಜಾಬಿನ ತರಣತಾರಣದಲ್ಲಿ ಕೆಲವು ದಿನಗಳ ಹಿಂದೆ ಓರ್ವ ಮಹಿಳೆಯನ್ನು ಅರೆಬೆತ್ತಲೆ ಅವಸ್ಥೆಯಲ್ಲಿ ರಸ್ತೆಯಲ್ಲಿ ಓಡಿಸಲಾಯಿತು. ಮಗಳ ಪ್ರೇಮ ವಿವಾಹದಿಂದ ಆಕ್ರೋಶಗೊಂಡಿದ್ದ ಕುಟುಂಬಸ್ಥರು ಯುವಕನ ತಾಯಿಯ ಬಟ್ಟೆಗಳನ್ನು ಹರಿದು ಆಕೆಯನ್ನು ಅರೆಬೆತ್ತಲೆ ಮಾಡಿದ್ದರು. ಈ ಪ್ರಕರಣದಲ್ಲಿ 4 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣದ ಬಗ್ಗೆ ಪಂಜಾಬ- ಹರಿಯಾಣಾ ಉಚ್ಚ ನ್ಯಾಯಾಲಯವು, ತರಣತಾರಣ ಘಟನೆಯು ನಮಗೆ ಮಹಾಭಾರತದ ಕಾಲವನ್ನು ನೆನಪಿಸಿದೆ. ದ್ರೌಪದಿಯ ವಸ್ತ್ರಾಪಹರಣವಾದಾಗ ಪಾಂಡವರು ಮತ್ತು ಭೀಷ್ಮ ಪಿತಾಮಹರು ಶಾಂತರಾಗಿದ್ದರು. ಈ ಮೌನದ ಪರಿಣಾಮವೆಂದರೆ ಮಹಾಭಾರತ ಯುದ್ಧದಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿದರು. ಇಂದು, ಕಾನೂನು ಜಾರಿಯಲ್ಲಿರುವಾಗ, ಆಡಳಿತದ ಕಣ್ಣೆದುರಿನಲ್ಲಿಯೇ ಇಂತಹ ಘಟನೆಗಳು ನಡೆಯುತ್ತಿದ್ದರೆ ನಾವು ಮೂಕ ವೀಕ್ಷಕರಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದೆ.
ಸಂಪಾದಕೀಯ ನಿಲುವು
|