‘ಸನಾತನ ಪ್ರಭಾತ’ ಅಂತರಂಗದ ಪರಿವರ್ತನೆಯ ಸಾಧನ ! – ಯೋಗೆಶ್ ಜಲತಾರೆ, ಸಮೂಹ ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ

‘ಸನಾತನ ಪ್ರಭಾತ’ದ ಸಮೂಹ ಸಂಪಾದಕ ಹುದ್ದೆಗೆ ಶ್ರೀ. ಯೋಗೆಶ್ ಜಲತಾರೆ ನೇಮಕ !

ರಾಮನಾಥಿ, ಎಪ್ರಿಲ್ 9 (ಸುದ್ದಿ.) : ‘ಸನಾತನ ಪ್ರಭಾತ’ ಆಂತರಿಕ ಪರಿವರ್ತನೆಗೆ ಅತ್ಯುತ್ತಮ ಮಾಧ್ಯಮವಾಗಿದೆ ಎಂದು ‘ಸನಾತನ ಪ್ರಭಾತ’ದ ನೂತನವಾಗಿ ಆಯ್ಕೆಯಾದ ಸಮೂಹ ಸಂಪಾದಕ ನ್ಯಾಯವಾದಿ ಶ್ರೀ. ಯೋಗೆಶ್ ಜಲತಾರೆ ಹೇಳಿದರು. ಯುಗಾದಿಯ ಶುಭ ಮುಹೂರ್ತದಲ್ಲಿ ‘ಸನಾತನ ಪ್ರಭಾತ’ದ ಸಮೂಹ ಸಂಪಾದಕರಾಗಿ ನೇಮಕಗೊಂಡ ಬಳಿಕ ಅವರು ಮಾತನಾಡುತ್ತಿದ್ದರು. ಗುರುಕೃಪೆಯಿಂದ ಲಭಿಸುವ ಈ ಸೇವೆಯ ಮೂಲಕ ‘ಸನಾತನ ಪ್ರಭಾತ’ದ ರಾಷ್ಟ್ರ ರಕ್ಷಣೆ ಮತ್ತು ಧಾರ್ಮ ಜಾಗೃತಿ ಕಾರ್ಯವನ್ನು ಅತ್ಯಂಗಕ್ಕೆ ಹೆಚ್ಚಿಸುವತ್ತ ಗಮನ ಹರಿಸುವುದಾಗಿ ತಿಳಿಸಿದರು.

ಶ್ರೀ. ಯೋಗೇಶ ಜಲತಾರೆ

‘ಸನಾತನ ಪ್ರಭಾತ’ದ ಕಛೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸನಾತನ ಪ್ರಭಾತ’ದ ಹಿಂದಿನ ಸಮೂಹ ಸಂಪಾದಕರಾದ ಶ್ರೀ. ನಾಗೇಶ ಗಾಡೆ ಇವರು ಶ್ರೀ. ಜಲತರೆ ಅವರು ‘ಸನಾತನ ಪ್ರಭಾತ’ದ ಸಮೂಹ ಸಂಪಾದಕರಾಗಿ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು. ಈ ಸಮಯದಲ್ಲಿ ‘ಸನಾತನ ಪ್ರಭಾತ’ದ ಮಾಜಿ ಸಮೂಹ ಸಂಪಾದಕ ಪೂ. ಪೃಥ್ವಿರಾಜ ಹಜಾರೆ ಕೂಡ ಶ್ರೀ. ಜಲತಾರೆಯನ್ನು ಅಭಿನಂದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ‘ಸನಾತನ ಪ್ರಭಾತ’ ಸೇವೆ ಮಾಡುವ ಸಾಧಕರು ಉಪಸ್ಥಿತರಿದ್ದರು.

ಶ್ರೀ. ಯೋಗೇಶ ವಾಮನ ಜಲತಾರೆಯವರ ಕಿರು ಪರಿಚಯ !

ಮೂಲತಃ ಅಕೋಲದವರಾದ ಶ್ರೀ. ಜಲತಾರೆ ಅವರು 1998 ರಿಂದ ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಾಧನೆಯನ್ನು ಪ್ರಾರಂಭಿಸಿದರು. ಅವರು 2000 ರಿಂದ ಪೂರ್ಣ ವೇಳೆ ಸಾಧಕರಾಗಿ ಕಾರ್ಯ ಮಾಡುತ್ತಿದ್ದಾರೆ. ‘ಸನಾತನ ಪ್ರಭಾತ’ದ ಕೇಂದ್ರ ಕಛೇರಿಯ ನಿರ್ವಹಣೆಯ ಜವಾಬ್ದಾರಿಯನ್ನು ಕೆಲಕಾಲ ನಿಭಾಯಿಸಿದ್ದಾರೆ. ಅವರ 26 ವರ್ಷಗಳ ಸಾಧನಾ ಅವಧಿಯಲ್ಲಿ, ಅವರು ಸನಾತನ ಪ್ರಭಾತ, ಅದೇ ರೀತಿ ಧರ್ಮಪ್ರಸಾರದ ಕಾರ್ಯದಲ್ಲಿ ಸಿಂಹಪಾಲು ವಹಿಸಿದ್ದಾರೆ. ಪೂರ್ಣ ವೇಳೆ ಸಾಧಕರಾದ ನಂತರ, ಅವರು ಆರಂಭದಲ್ಲಿ ಠಾಣೆಯ ‘ಸನಾತನ ಪ್ರಭಾತ’ ವಾರಪತ್ರಿಕೆಯ ಸಂಸ್ಥೆ ಸ್ಥರದ ಲೆಕ್ಕಪತ್ರ ವಿಭಾಗದಲ್ಲಿ ಸೇವೆ ಸಲ್ಲಿಸಿದರು. ಅವರು ‘ದೈನಿಕ್ ಸನಾತನ ಪ್ರಭಾತ್’ಗಾಗಿ ವಿವಿಧ ಸಾಮಾಜಿಕ ಮತ್ತು ಕಾನೂನು ಲೇಖನಗಳನ್ನು ಸಂಗ್ರಹಿಸಿದರು. ಅವರು ‘ಸನಾತನ ಪ್ರಭಾತ’ದ ವೈಶಿಷ್ಟ್ಯವಾಗಿರುವ ಸೂಕ್ಷ್ಮ ಜಗತ್ತಿನ ವಿದ್ಯಮಾನಗಳ ಬಗ್ಗೆ ವರದಿ ಮಾಡಿದರು ಮತ್ತು ಸಾಧನೆ ಬಗ್ಗೆಯೂ ಬರೆದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ‘ಸನಾತನ ಪ್ರಭಾತ’ಕ್ಕಾಗಿ ರಾಷ್ಟ್ರ-ಧರ್ಮ ಜಾಗೃತಿ ಕಿರುಚಿತ್ರಗಳ ನಿರ್ಮಾಣದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.