Case Registered Against NIA : ಮೇದಿನಿಪುರ (ಬಂಗಾಲ)ದಲ್ಲಿ ರಾಷ್ಟ್ರೀಯ ತನಿಖಾ ದಳದ ವಿರುದ್ಧ ದೂರು ದಾಖಲು !

 

ಕೋಲಕಾತಾ (ಬಂಗಾಳ) – ರಾಜ್ಯದಲ್ಲಿರುವ ಪೂರ್ವ ಮೇದಿನಿಪುರ ಜಿಲ್ಲೆಯ ಭೂಪತಿನಗರದಿಂದ ಬಂಧಿತರಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಮನೋಬ್ರತಾ ಜಾನಾ ಅವರ ಪತ್ನಿ ಮೋನಿ ಜಾನಾ ಅವರು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಅವರು, ತನಿಖೆಯ ನೆಪದಲ್ಲಿ ತನಿಖಾ ದಳದ ಅಧಿಕಾರಿಗಳು ಬಲವಂತವಾಗಿ ತನ್ನ ಮನೆಯನ್ನು ಪ್ರವೇಶಿಸಿ ಹಲ್ಲೆ ನಡೆಸಿದ್ದಾರೆ, ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಮನೆಯಲ್ಲಿ ಸಾಮಗ್ರಿ ಧ್ವಂಸ ಮಾಡಿದರು ಎಂದು ಆರೋಪಿಸಿದ್ದಾರೆ. ಇದರಿಂದ ಬಂಗಾಲ ಪೊಲೀಸರು ತನಿಖಾ ಸಂಸ್ಥೆಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದರು. (ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎನ್ನುವುದಕ್ಕೆ ಇದೇ ಉದಾಹರಣೆಯಾಗಿದೆ ! – ಸಂಪಾದಕರು)

2022ರಲ್ಲಿ ನಡೆದ ಬಾಂಬ್ ಸ್ಫೋಟದ ತನಿಖೆಗಾಗಿ ಕೊಲಕಾತಾ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ರಾಷ್ಟ್ರೀಯ ತನಿಖಾ ದಳವು ಭೂಪತಿನಗರಕ್ಕೆ ಭೇಟಿ ನೀಡಿತ್ತು. ತೃಣಮೂಲ ಕಾಂಗ್ರೆಸ್ ನಾಯಕರಾದ ಬಾಲ ಚರಣ್ ಮೈತಿ ಮತ್ತು ಮನೋಬ್ರತಾ ಜಾನಾ ಈ ಅಪರಾಧದ ಪ್ರಮುಖ ಸೂತ್ರಧಾರರಾಗಿದ್ದಾರೆ. ತನಿಖಾ ದಳದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಲು ಮುಂದಾದರು, ಆಗ ಸ್ಥಳೀಯ ಜನರು ಅವರ ಎದುರಿಗೆ ದೊಣ್ಣೆ ಹಿಡಿದುಕೊಂಡು ನಿಂತರು. ಅವರು ಅಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಿದರು. ಈ ದಾಳಿಯಲ್ಲಿ ಒರ್ವ ಅಧಿಕಾರಿ ಗಾಯಗೊಂಡರು. ಈ ವಿರೋಧವನ್ನು ಲೆಕ್ಕಿಸದೇ ಪೊಲೀಸರು ಆರೋಪಿಯನ್ನು ಕರೆದುಕೊಂಡು ಕೋಲಕಾತಾಗೆ ಹೋದರು. ತನಿಖಾ ದಳದ ಅಧಿಕಾರಿಗಳು ಈ ದಾಳಿಯ ವಿರುದ್ಧ ಭೂಪತಿ ನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೂ ಯಾರನ್ನೂ ಬಂಧಿಸಿಲ್ಲ.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್ ಅಧಿಕಾರದಲ್ಲಿರುವ ಬಂಗಾಳದಲ್ಲಿ ಇದಕ್ಕಿಂತ ಭಿನ್ನ ಏನು ನಡೆಯುವುದು ?