ಸಮೂಹದಿಂದ ಥಳಿತ ಕೇರಳದಲ್ಲಿ ಬೇರೆ ಪ್ರಾಂತ್ಯದ ಕಾರ್ಮಿಕನ ಸಾವು

ಇದುವರೆಗೆ 10 ಜನರ ಬಂಧನ

ತಿರುವನಂತಪುರಂ (ಕೇರಳ) – ಕೇರಳದ ಮುವಾಟ್ಟುಟ್ಟುಪೂಜಾದಲ್ಲಿ 3 ದಿನಗಳ ಹಿಂದೆ ಅಶೋಕ ದಾಸ್ ಎಂಬ ಬೇರೆ ಪ್ರಾಂತ್ಯದ ಕಾರ್ಮಿಕನನ್ನು ಗುಂಪೊಂದು ಕಂಬಕ್ಕೆ ಕಟ್ಟಿ ಥಳಿಸಿ ಕೊಂದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಶೋಕ ಅರುಣಾಚಲ ಪ್ರದೇಶದ ನಿವಾಸಿ ಎನ್ನಲಾಗಿದೆ. ಅವನು ಆ ಪ್ರದೇಶದಲ್ಲಿ ವಾಸಿಸುವ ಸ್ನೇಹಿತೆಯನ್ನು ಭೇಟಿಯಾಗಲು ಹೋಗಿದ್ದನು. ಇದಾದ ನಂತರ ಸ್ಥಳೀಯರು ಆತನನ್ನು ಮೊದಲು ವಿಚಾರಣೆಗೊಳಪಡಿಸಿ ನಂತರ ಆತನನ್ನು ಕಂಬಕ್ಕೆ ಕಟ್ಟಿ ತೀವ್ರವಾಗಿ ಥಳಿಸಿದ್ದಾರೆ.