ಕಚ್ಚತಿವು ದ್ವೀಪದ ಮೇಲೆ ಭಾರತದ ಹಕ್ಕು ಆಧಾರರಹಿತವಾಗಿದೆಯಂತೆ ! – ಶ್ರೀಲಂಕಾದ ಮೀನುಗಾರಿಕೆ ಸಚಿವ ಡಗಲಸ್ ದೇವಾನಂದ

ಶ್ರೀಲಂಕಾದ ಮೀನುಗಾರಿಕೆ ಸಚಿವ ಡಗಲಸ್ ದೇವಾನಂದ ಇವರ ಹೇಳಿಕೆ

ಜಾಫನಾ (ಶ್ರೀಲಂಕಾ) – ತಾತ್ಕಾಲಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಇವರು ಶ್ರೀಲಂಕಾಗೆ ಭಾರತ ಮತ್ತು ಶ್ರೀಲಂಕಾ ಇವರ ಮಧ್ಯದಲ್ಲಿ ಇರುವ ಕಚ್ಚಾತಿವು ದ್ವೀಪ ಉಡುಗೊರೆಯಾಗಿ ನೀಡಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವರಾದ ಡಾ. ಎಸ್. ಜೈ ಶಂಕರ್ ಇವರು ಕಾಂಗ್ರೆಸ್ಸಿನ ವಿರುದ್ಧ ಇದರ ಕುರಿತು ಆರೋಪ ಮಾಡಿದ್ದರು. ಇದರ ಬಗ್ಗೆ ಶ್ರೀಲಂಕಾದ ವಿದೇಶಾಂಗ ಸಚಿವರ ನಂತರ ಈಗ ಮೀನುಗಾರಿಕೆ ಸಚಿವ ಡಗಲಸ ದೇವಾನಂದ ಇವರು ಹೇಳಿಕೆ ನೀಡಿದ್ದಾರೆ. ಇಲ್ಲಿ ಆಯೋಜಿಸಿದ್ದ ಪತ್ರಕರ್ತರ ಸಭೆಯಲ್ಲಿ ಅವರು, ಕಚ್ಚಾತಿವು ದ್ವೀಪ ಶ್ರೀಲಂಕಾದಿಂದ ಹಿಂಪಡೆಯುವ ಭಾರತದ ಹೇಳಿಕೆಗೆ ಯಾವುದೇ ಆಧಾರವಿಲ್ಲ. ಭಾರತದಲ್ಲಿ ಚುನಾವಣೆಯ ಸಮಯವಿದೆ. ಇಂತಹ ಸಮಯದಲ್ಲಿ ಕಚ್ಚಾತಿವು ದ್ವೀಪದ ಕುರಿತು ಈ ರೀತಿ ದಾವೆ ಪ್ರತಿ ದಾವೆ ನಡೆಯುವುದು ಹೊಸದೇನಲ್ಲ ಎಂದು ಹೇಳಿದ್ದಾರೆ.

(ಸೌಜನ್ಯ – Oneindia News)

ದೇವಾನಂದ ಇವರು ಮಾತು ಮುಂದುವರೆಸಿ,

೧. ೧೯೭೪ ರಲ್ಲಿ ನಡೆದಿರುವ ಒಪ್ಪಂದದ ಪ್ರಕಾರ ಎರಡು ದೇಶದ ಮೀನುಗಾರರು ಎರಡು ದೇಶದ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆ ಮಾಡಬಹುದಿತ್ತು; ಆದರೆ ೧೯೭೬ ರಲ್ಲಿ ಈ ಒಪ್ಪಂದದ ಲ್ಲಿ ಬದಲಾವಣೆ ಮಾಡಲಾಯಿತು. ಅದರ ನಂತರ ಎರಡೂ ದೇಶದ ಮೀನಗಾರರನ್ನು ಪರಸ್ಪರ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುವುದರ ಕುರಿತು ನಿಷೇದ ಹೇರಲಾಯಿತು.

೨. ಭಾರತದಲ್ಲಿ ಕನ್ಯಾಕುಮಾರಿಯ ಹತ್ತಿರ ವಾಡ್ಡ ಸಮುದ್ರ ಇದೆ. ಕಚ್ಚಾತಿವುಕ್ಕಿಂತಲೂ ಅದು ೮೦ ಪಟ್ಟು ದೊಡ್ಡ ಕ್ಷೇತ್ರವಿದೆ. ೧೯೭೬ ರಲ್ಲಿ ನಡೆದಿರುವ ಸಮೀಕ್ಷಾ ಸಂಶೋಧನೆಯ ಪ್ರಕಾರ ವಾಡ್ದ ಸಮುದ್ರ ಮತ್ತು ಅದರಲ್ಲಿನ ಎಲ್ಲಾ ನೈಸರ್ಗಿಕ ಸಾಧನ ಸಂಪತ್ತು ಇದರ ಮೇಲೆ ಭಾರತದ ಅಧಿಕಾರವಿದೆ.

೩. ಭಾರತ ಈ ಜಾಗವನ್ನು ಸುರಕ್ಷಿತವಾಗಿ ಇಡಲು ತಮ್ಮ ಹಿತದ ದೃಷ್ಟಿಯಿಂದ ಕಾರ್ಯ ಮಾಡುತ್ತಿದೆ, ಇದರಿಂದ ಶ್ರೀಲಂಕಾದ ಮೀನುಗಾರರು ಇಲ್ಲಿ ತಲುಪಲು ಸಾಧ್ಯವಿಲ್ಲ. ನಾವು ಆ ಪ್ರದೇಶ ಬಗ್ಗೆ ಯಾವುದೇ ದಾವೆ ಮಾಡಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕಚ್ಚಾತಿವು ಕುರಿತು ಈ ಹಿಂದೆ ಶ್ರೀಲಂಕಾದ ವಿದೇಶಾಂಗ ಸಚಿವರು ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ಮೂಲತಹ ಮಾಹಿತಿ ಅಧಿಕಾರ ಕಾನೂನಿನ ಅಡಿಯಲ್ಲಿ ಕಚ್ಚಾತಿವು ದ್ವೀಪ ಇದು ಕಾಂಗ್ರೆಸ್ಸಿನವರು ಯಾವುದೇ ಪ್ರದೇಶ ಪಡೆಯದೆ ಶ್ರೀಲಂಕಾಗೆ ನೀಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದರ ಬಗ್ಗೆ ಒಪ್ಪಂದ ಆಗಿರುವ ಇತಿಹಾಸ ಇರುವಾಗ ಶ್ರೀಲಂಕಾದಿಂದ ಅದನ್ನು ನಿರಾಕರಿಸುವುದು, ಹಾಸ್ಯಸ್ಪದವಾಗಿದೆ !