|
ನಾಸಿಕ – ಅಖಿಲ ಭಾರತೀಯ ಸಂತ ಸಮಿತಿ ಹಾಗೆಯೇ ಮಹಾರಾಷ್ಟ್ರದ ಧರ್ಮ ಸಮಾಜದ ಮುಖ್ಯಸ್ಥ ಮತ್ತು ಮಹಂತ ಪೀಠಾಧೀಶ್ವರ ಡಾ. ಅನಿಕೇತಶಾಸ್ತ್ರಿ ಮಹಾರಾಜರ ಮೇಲೆ ಏಪ್ರಿಲ್ 3 ರಂದು ರಾತ್ರಿ 1:00 ಗಂಟೆಗೆ 900 ರಿಂದ 1 ಸಾವಿರ ಮತಾಂಧರು ನಾಶಿಕ ಹೆದ್ದಾರಿ ಬಳಿ ದಾಳಿ ನಡೆಸಿ ಅವರ ವಾಹನದ ಗಾಜುಗಳನ್ನು ಹಾನಿಗೊಳಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ರಾಜ್ಯ ಸರಕಾರದಲ್ಲಿ ಮಹಾರಾಜರಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಆಗ್ರಹಿಸಲಾಗಿದೆ. 2020 ರಲ್ಲಿ, ಪಾಲಘರನಲ್ಲಿ ಗುಂಪು ಇಬ್ಬರು ಸಾಧುಗಳ ಮೇಲೆ ದಾಳಿ ಮಾಡಿ ಅವರ ಹತ್ಯೆ ಮಾಡಿದ್ದರು. ‘ಆ ಹತ್ಯಾಕಾಂಡದಂತೆಯೇ ಈ ದಾಳಿ ನಡೆದಿದೆ’ ಎಂದು ಮಹಾರಾಜರು ಆತಂಕ ವ್ಯಕ್ತಪಡಿಸಿದರು. ಮಹಾರಾಜರ ವಾಹನದ ಮೇಲೆ ದಾಳಿ ಮಾಡಿದ ಮತಾಂಧರು ರಸ್ತೆಯ ಮೇಲಿನ ಇತರ ವಾಹನಗಳನ್ನು ಧ್ವಂಸಗೊಳಿಸಿದರು. ಮಹಾರಾಜರ ವಾಹನದ ಮೇಲೆ ಕಾಲಿನಿಂದ ಒದ್ದು ಮತ್ತು ಲಾಠಿಯಿಂದ ಹೊಡೆದರು. ಆ ಸಮಯದಲ್ಲಿ, ‘ಒಂದು ಗಲ್ಲಿಯಿಂದ ವಾಹನವನ್ನು ಹೊರಗೆ ತೆಗೆದು ನಾವು ನಮ್ಮ ಜೀವವನ್ನು ರಕ್ಷಿಸಿಕೊಂಡೆವು’ ಎಂದು ಮಹಾರಾಜರು ಹೇಳಿದರು. ಇದುವರೆಗೆ ಅವರ ಮೇಲೆ ನಡೆದ ನಾಲ್ಕನೇ ದಾಳಿಯಾಗಿದೆ. ಈ ಮೊದಲು ಕೆಲವು ಅಪರಿಚಿತರು ಅವರ ಆಶ್ರಮದ ಮೇಲೆ ಕಲ್ಲು ತೂರಾಟ ಮಾಡುವುದು, ಗೋಶಾಲೆಯ ಮೇಲೆ ಮದ್ಯದ ಬಾಟಲಿಯನ್ನು ಎಸೆಯುವುದು, ಮೇಲಿಂದ ಮೇಲೆ ವಾಹನಕ್ಕೆ ಕಲ್ಲು ತೂರುವುದು ಇತ್ಯಾದಿ ಘಟನೆಗಳು ನಡೆದಿತ್ತು.
ಸರಕಾರ ಹಿಂದೂಗಳ ಧರ್ಮಗುರುಗಳನ್ನು ರಕ್ಷಿಸಲು ಅಸಮರ್ಥರಾಗಿದ್ದರೆ, ಹಿಂದೂಗಳೇ ಅವರ ರಕ್ಷಣೆ ಮಾಡುವುದು ಆವಶ್ಯಕ ! – ರಣಜೀತ ಸಾವರಕರ, ಸ್ವಾತಂತ್ರ್ಯವೀರ ಸಾವರಕರ ಅವರ ಮೊಮ್ಮಗ ಮತ್ತು ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷರುಡಾ. ಅನಿಕೇತಶಾಸ್ತ್ರಿ ಮಹಾರಾಜರ ಮೇಲಿನ ಹಲ್ಲೆಯನ್ನು ನಾನು ಖಂಡಿಸುತ್ತೇನೆ. ಬಹುಸಂಖ್ಯಾತ ಹಿಂದೂಗಳಿರುವ ಸ್ಥಳದಲ್ಲಿ ಹಿಂದೂಗಳ ಧರ್ಮಗುರುಗಳ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಸರಕಾರ ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಕೊಂಡು ಈ ಪ್ರವೃತ್ತಿಯನ್ನು ಬದಲಾಯಿಸುವುದು ಅವಶ್ಯಕವಾಗಿದೆ. ಪಾಲಘರ ಪ್ರಕರಣದಲ್ಲಿ, ಇದುವರೆಗೂ ದೋಷಿಗಳಿಗೆ ಶಿಕ್ಷೆಯಾಗಿಲ್ಲ ಎನ್ನುವುದನ್ನು ಹಿಂದೂ ಸಮಾಜ ಮರೆತಿಲ್ಲ. ಸರಕಾರ ಹಿಂದೂಗಳ ಧರ್ಮಗುರುಗಳ ರಕ್ಷಣೆ ಮಾಡುವುದು ಆವಶ್ಯಕವಾಗಿದೆ ಎಂದು ಹೇಳಿದರು. |
ಸಂಪಾದಕೀಯ ನಿಲುವುಹಿಂದೂಗಳ ಧರ್ಮಗುರುಗಳ ಮೇಲೆ ಪದೇ ಪದೇ ಆಗುವ ದಾಳಿಗಳು ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ಒತ್ತಿ ಹೇಳುತ್ತವೆ ! ಸಾವಿರಾರು ಸಂಖ್ಯೆಯಲ್ಲಿ ಮತಾಂಧರು ಗುಂಪುಗೂಡಿದಾಗ ಪೋಲೀಸರು ಏನು ಮಾಡುತ್ತಿದ್ದರು ? ಮತಾಂಧರ ಹಿಂಸಾತ್ಮಕತೆಯನ್ನು ನಿಯಂತ್ರಣದಲ್ಲಿಡದ ಪೊಲೀಸರನ್ನು ಅಮಾನತ್ತುಗೊಳಿಸಬೇಕು ! |