Quran Burner Salwan Momika : ಸ್ವೀಡನ್‌ನಲ್ಲಿ ಮೇಲಿಂದ ಮೇಲೆ ಖುರಾನ ಸುಡುತ್ತಿದ್ದ ಸಲ್ವಾನ ಮೋಮಿಕಾ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ !

ಇದುವರೆಗೂ ಅಧಿಕೃತವಾಗಿ ದೃಢೀಕರಿಸಿಲ್ಲ !

ಸಲ್ವಾನ ಮೋಮಿಕಾ

ಸ್ಟಾಕ್‌ಹೋಮ (ಸ್ವೀಡನ) – ಇಲ್ಲಿ ಪೊಲೀಸರು ಮತ್ತು ನ್ಯಾಯಾಲಯದ ಅನುಮತಿ ಪಡೆದು ಸಾರ್ವಜನಿಕ ಸ್ಥಳದಲ್ಲಿ ಅನೇಕಬಾರಿ ಕುರಾನ ಸುಟ್ಟಿದ್ದ ಸಲವಾನ ಮೊಮಿಕಾ ಅವರು ಸಾವನ್ನಪ್ಪಿರುವ ಬಗ್ಗೆ ಯುರೋಪಿನ ಪ್ರಸಾರ ಮಾಧ್ಯಮಗಳು ವರದಿ ಮಾಡಿವೆ; ಆದರೆ ಇದನ್ನು ಇದುವರೆಗೂ ಅಧಿಕೃತವಾಗಿ ದೃಢೀಕರಿಸಿಲ್ಲ. ಸಲವಾನ ಮೊಮಿಕಾ 37 ವರ್ಷದ ನಿರಾಶ್ರಿತ ಇರಾಕಿ ಕ್ರೈಸ್ತರಾಗಿದ್ದರು. ಅವರು ಎಪ್ರಿಲ್ 2018 ರಲ್ಲಿ ಸ್ವೀಡನ ಗೆ ಬಂದರು ಮತ್ತು ಎಪ್ರಿಲ್ 2021 ರಲ್ಲಿ ಅವರಿಗೆ ನಿರಾಶ್ರಿತರೆಂದು ಸ್ಥಾನಮಾನ ಸಿಕ್ಕಿತು. ಅವರು ತಮ್ಮ ಫೇಸಬುಕ ಖಾತೆಯ ಮೇಲೆ ತಮ್ಮನ್ನು ನಾಸ್ತಿಕವಾದಿ ಮತ್ತು ಲೇಖಕರೆಂದು ಪರಿಚಯಿಸಿಕೊಂಡಿದ್ದರು. ಮೊಮಿಕಾ ಇವರು ಜೂನ್ 28, 2023 ರಂದು ಬಕರಿ ಈದ್ ದಿನದಂದು ಸ್ಟಾಕ ಹೋಮನ ಅತ್ಯಂತ ದೊಡ್ಡ ಮಶೀದಿಯ ಎದುರು ಕುರಾನ ಸುಟ್ಟಿದ್ದರು. ‘ಕುರಾನ್ ಜಗತ್ತಿನ ಅತ್ಯಂತ ಅಪಾಯಕಾರಿ ಪುಸ್ತಕ’ ಎಂದು ಮೊಮಿಕಾ ಹೇಳಿದ್ದರು. ‘ನಾನು ಇಸ್ಲಾಮಿಕ್ ಸಿದ್ಧಾಂತದ ವಿರುದ್ಧ ಕರೆ ನೀಡಿರುವ ಯುದ್ಧವನ್ನು ಮುಂದುವರಿಸುತ್ತೇನೆ’ ಎಂದು ಹೇಳಿದ್ದರು.

1. ಮೊಮಿಕಾ ಅವರ ಈ ಕೃತ್ಯದಿಂದ, ಸ್ವೀಡನ್‌ಗೆ ಮುಸ್ಲಿಂ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ವಿರೋಧವನ್ನು ಎದುರಿಸಬೇಕಾಯಿತು ಹಾಗೆಯೇ ಅಲ್ಲಿನ ಜನರ ಮೇಲೆ ದಾಳಿಯ ಘಟನೆಗಳು ಹೆಚ್ಚಾದವು.

2. 57 ಇಸ್ಲಾಮಿಕ್ ದೇಶಗಳ ಸಂಘಟನೆಯಾಗಿರುವ ‘ಆರ್ಗನಾಯಝೇಶನ ಆಫ್ ಇಸ್ಲಾಮಿಕ್ ಕೋಆಪರೇಶನ’, ಅಂತರಾಷ್ಟ್ರೀಯ ಕಾನೂನನ್ನು ಜಾರಿಗೊಳಿಸುವ ಮತ್ತು ಇಂತಹ ಘಟನೆಗಳನ್ನು ತಡೆಗಟ್ಟಲು ಜಂಟಿಯಾಗಿ ಕಾರ್ಯಾಚಾರಣೆ ನಡೆಸುವ ಆವಶ್ಯಕತೆಯಿದೆಯೆಂದು ಹೇಳಿದೆ.

3. ಮೊಮಿಕಾ ಅವರ ಇಂತಹ ಕೃತ್ಯದಿಂದಾಗಿ, ಪಾಕಿಸ್ತಾನದ ಇಸ್ಲಾಮಾಬಾದ, ಕರಾಚಿ ಮತ್ತು ಲಾಹೋರನಲ್ಲಿ ಕುರಾನ್ ಸುಟ್ಟಿರುವ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು.