WB Jalpaiguri Storm : ದೇಶದ ೪ ರಾಜ್ಯಗಳಲ್ಲಿ ಹಠಾತ್ ಗುಡುಗು ಸಹಿತ ಮಳೆ

ಬಂಗಾಳದ ಜಲಪಾಯಿಗುಡಿಯಲ್ಲಿ ೫ ಜನರ ಸಾವು ಹಾಗೂ ೧೦೦ ಜನರಿಗೆ ಗಾಯ

ಕೋಲಕಾತಾ (ಬಂಗಾಳ) – ಮಾರ್ಚ್ ೩೧ ರಂದು ಹಠಾತ್ ಚಂಡಮಾರುತ ಸಹಿತ ಮಳೆಯಿಂದಾಗಿ ದೇಶದ ಈಶಾನ್ಯ ಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯನ್ನುಂಟುಮಾಡಿದೆ. ಬಂಗಾಳ, ಅಸ್ಸಾಂ, ಮಿಜೋರಾಂ ಮತ್ತು ಮಣಿಪುರದಲ್ಲಿ ಭಾರಿಪ್ರಮಾಣದಲ್ಲಿ ಆರ್ಥಿಕ ನಷ್ಟವುಂಟಾಗಿದೆ. ಬಂಗಾಳದ ಜಲಪಾಯಿಗುಡಿಯಲ್ಲಿ ೫ ಜನರು ಸಾವನ್ನಪ್ಪಿದ್ದು, ೧೦೦ ಜನರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ‘ಎಕ್ಸ್‘ ನಿಂದ ಸಂತಾಪ ವ್ಯಕ್ತ ಪಡಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜಲಪಾಯಿಗುಡಿ ಮತ್ತು ಸಿಲಿಗುಡಿ ಈ ಭಾಗಗಳಿಗೆ ಭೇಟಿನೀಡಿ ಸಂತ್ರಸ್ತರ ಬಗ್ಗೆ ವಿಚಾರಿಸಿದ್ದಾರೆ.

೧. ಜಲಪಾಯಿಗುಡಿಯಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿದೆ. ಸಿಲಿಗುಡಿಯ ಬಾಗಡೋಗರಾ ವಿಮಾನನಿಲ್ದಾಣಕ್ಕೆ ಭಾಗಶಃ ಹಾನಿಯಾಗಿದೆ.

೨. ಧಾರಾಕಾರ ಮಳೆಯಿಂದಾಗಿ ಅಸ್ಸಾಂನ ಗೌಹಾಟಿಯಲ್ಲಿರುವ ಗೋಪಿನಾಥ್ ಬೋರದೋಲೋಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಇದರಿಂದಾಗಿ ಕೆಲವು ವಿಮಾನಗಳ ಹಾರಾಟ ನಿಲ್ಲಿಸಲಾಗಿತ್ತು ಹಾಗೂ ೬ ವಿಮಾನಗಳ ಮಾರ್ಗ ಬದಲಿಸಬೇಕಾಯಿತು.

೩. ಮಿಜೋರಾಂ ರಾಜ್ಯದಲ್ಲಿರುವ ಚಂಫೈ ಜಿಲ್ಲೆಯ ಲುಂಗಟಾನ ಗ್ರಾಮದಲ್ಲಿ ಚರ್ಚ್ ಕಟ್ಟಡ ಕುಸಿದಿದೆ. ಆಯಜಾಲ ಜಿಲ್ಲೆಯ ಸಿಯಾಲಸುಕದಲ್ಲಿ ಮತ್ತೊಂದು ಚರ್ಚ್ ಕಟ್ಟಡಕ್ಕೆ ಹಾನಿಯಾಗಿದೆ.

೪. ಮಣಿಪುರದ ಥೌಬಲ್ ಮತ್ತು ಖೋಂಗಜೋಮ್ ಪ್ರದೇಶಗಳಲ್ಲಿ ಅನೇಕ ಮರಗಳು ಧರೆಗುರುಳಿವೆ ಮತ್ತು ಮನೆಗಳ ಮೇಲ್ಛಾವಣಿಗಳು ಹಾರಿಹೋಗಿವೆ.

೫. ಬಂಗಾಳದ ಮೈನಾಗುರಿಯ ಅನೇಕ ಪ್ರದೇಶಗಳಲ್ಲಿ ಬಲವಾದ ಗಾಳಿಯಿಂದ ಅನೇಕ ಮನೆಗಳಿಗೆ ಹಾನಿಯಾಗಿದೆ. ಮರಗಳು ಧರೆಗುರುಳಿವೆ ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ರಾಜ್ಯದಲ್ಲಿ ಅತ್ಯಧಿಕ ಹಾನಿಗೊಳಗಾದ ಪ್ರದೇಶಗಳೆಂದರೆ ರಾಜರಹಾಟ್, ಬರನೀಶ, ಬಕಾಲಿ, ಜೋರಪಕಡಿ, ಮಾಧಬಡಂಗಾ ಮತ್ತು ಸಾಪ್ತಿಬಾರಿಗಳ ಸಮಾವೇಶ ಇದೆ.