ನೌಕರಿಗಾಗಿ ಬರುವ ಭಾರತೀಯರಿಗೆ ವೀಸಾ ನೀಡದಿದ್ದರೆ ಆರ್ಥಿಕ ವ್ಯವಸ್ಥೆ ಡೋಲಾಯಮಾನ

ಬ್ರಿಟನ್ ನಲ್ಲಿ ಋಷಿ ಸುನಕ್ ಸರಕಾರಕ್ಕೆ ವಾಣಿಜ್ಯೋದ್ಯಮಿಗಳ ಎಚ್ಚರಿಕೆ

ಲಂಡನ್ (ಬ್ರಿಟನ್) – ಬ್ರಿಟನ್ನಲ್ಲಿ ಅಧಿಕಾರದಲ್ಲಿರುವ ಹುಜೂರ್ ಪಕ್ಷದಿಂದ ಹೊಸ ವಿಸಾ ನಿಯಮ ಬರುವ ಏಪ್ರಿಲ್ ನಾಲ್ಕರಿಂದ ಜಾರಿಗೊಳಿಸಲಾಗುವುದು ; ಆದರೆ ಇದನ್ನು ಬ್ರಿಟನ್ ನಲ್ಲಿನ ಉದ್ಯಮಿಗಳು ವಿರೋಧಿಸಲು ಆರಂಭಿಸಿದ್ದಾರೆ. ದೇಶದಲ್ಲಿನ ೨೦೦ ಉದ್ಯಮಿಗಳು ಪ್ರಧಾನಮಂತ್ರಿ ಋಷಿ ಸುನಕ್ ಇವರಿಗೆ ಎಚ್ಚರಿಕೆ ನೀಡುತ್ತಾ, ಮಧ್ಯಮ ವರ್ಗದ ಕುಶಲ ಕಾರ್ಮಿಕರ ವೀಸಾ ಮೇಲಿನ ವೇತನ ಮಿತಿ ಹೆಚ್ಚಿಸದಿದ್ದರೆ ಸುಮಾರು ೧೦ ಲಕ್ಷ ಭಾರತಿಯರು ಅರ್ಥ ವ್ಯವಸ್ಥೆಯಿಂದ ಹೊರಬೀಳುವರು. ಇದರಿಂದ ಬ್ರಿಟನ್ನಿನ ಆರ್ಥಿಕ ವ್ಯವಸ್ಥೆ ಶೇಕಡ ೩೦ ಕ್ಕಿಂತಲೂ ಹೆಚ್ಚು ಕುಸಿಯುವ ಸಾಧ್ಯತೆ ಇದೆ ಎಂದು ಹೇಳಿದರು.

ಹೊಸ ನಿಯಮಗಳ ಪ್ರಕಾರ ಬ್ರಿಟನ್ ನಲ್ಲಿ ನೌಕರಿ ಮಾಡಲು ಬರುವ ಭಾರತೀಯ ನಾಗರೀಕರ ವೇತನ ವಾರ್ಷಿಕ ೩೦ ಲಕ್ಷ ರೂಗಿಂತಲೂ ಹೆಚ್ಚಿದ್ದರೆ ಮಾತ್ರ ಅವರಿಗೆ ವೀಸಾ ದೊರೆಯುತ್ತದೆ. ಸದ್ಯ ಅಲ್ಲಿರುವ ಭಾರತೀಯರ ವೇತನ ವಾರ್ಷಿಕ 27 ಲಕ್ಷ ರೂ. ಸುಮಾರು ಇದೆ. ಈ ನಿಯಮದ ಪ್ರಕಾರ ಮಧ್ಯಮ ವರ್ಗದ ಭಾರತೀಯ ಉದ್ಯೋಗಿಗಳಿಗೆ ಬ್ರಿಟನ್ನಿನಲ್ಲಿ ನೌಕರಿ ಸಿಗುವ ಸಾಧ್ಯತೆ ಬಹಳ ಕಡಿಮೆಯಾಗಿದೆ. ಅಲ್ಲಿನ ಶ್ವೇತ ವರ್ಣಿಯ ಜನರಿಗೆ ನೌಕರಿ ನೀಡುವ ಉದ್ದೇಶದಿಂದ ಈ ಹೊಸ ನಿಯಮ ರೂಪಿಸಲಾಗಿದೆ ಎಂದು ಬ್ರಿಟನ್ ಸರಕಾರದ ಹೇಳಿಕೆ ಆಗಿದೆ.

ಸರಕಾರದ ನಿರ್ಣಯ ಹಿಂಪಡೆಯಬೇಕಾಗುವುದು !

ಅಧಿಕಾರ ಪಕ್ಷದ ಜೊತೆ ಸಂಬಂಧಿಸಿದ ಓರ್ವ ಮುಖ್ಯ ಉದ್ಯಮಿಯ ಪ್ರಕಾರ, ಮಧ್ಯಮ ವರ್ಗದ ನೌಕರಿಯನ್ನು ಸ್ಥಳಿಯ ಶ್ವೇತ ವರ್ಣಿಯ ಜನರು ಮಾಡುವರೆಂದು ಸರಕಾರ ಗ್ರಹಿಸಿದೆ; ಆದರೆ ವಾಸ್ತವ ಸ್ಥಿತಿ ಬೇರೆಯೇ ಆಗಿದೆ. ಮಧ್ಯಮ ವರ್ಗದಲ್ಲಿನ ನೌಕರಿಯಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂಪೂರ್ಣ ವ್ಯವಸ್ಥೆಯನ್ನು ಒಂದೇ ದಿನ ಬದಲಾಯಿಸಲಾಗದು. ಸರಕಾರ ಈ ನಿರ್ಣಯ ಹಿಂಪಡೆಯಬೇಕಾಗುವುದು .

ಲಂಡನ್ನಿನ ಪಾಕಿಸ್ತಾನ ಮೂಲದ ಮೇಯರ್ ನಿಂದಲೂ ವಿರೋಧ

ಲಂಡನಿನ ಪಾಕಿಸ್ತಾನ ಮೂಲದ ಮೇಯರ್ ಸಾಧಿಕ್ ಖಾನ್ ಅವರು ಈ ಬಗ್ಗೆ ಮಾತನಾಡಿ, ಸುನಕ್ ಸರಕಾರ ಕೇವಲ ಭಾರತೀಯರ ಸಂಖ್ಯೆಯನ್ನು ಕೆಳಗಿಳಿಸುವ ಯತ್ನ ಮಾಡುತ್ತಿದೆ; ಆದರೆ ಇದರಿಂದ ಬ್ರಿಟನ್ನಿಗೆ ದೊಡ್ಡ ನಷ್ಟವಾಗುವುದು. ವಲಸಿಗರಿಂದ ಬ್ರಿಟನ್ನಿನ ಅರ್ಥ ವ್ಯವಸ್ಥೆಗೆ ಚಾಲನೆ ಸಿಕ್ಕಿದೆ. ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ವಲಸಿಗರಿದ್ದಾರೆ. ಮಧ್ಯಮ ವರ್ಗದ ನೌಕರಿಯು ಬ್ರಿಟನ್ನಿನ ಅರ್ಥ ವ್ಯವಸ್ಥೆಯ ಬೆನ್ನೆಲುಬಾಗಿದ್ದು ವಲಸಿಗರು ಅದನ್ನು ಸುಶೋಭಿತಗೊಳಿಸಿದ್ದಾರೆ, ಎಂದರು.

ಅಧಿಕಾರಕ್ಕೆ ಬಂದರೆ ವರ್ಷದ ಕೊನೆಯಲ್ಲಿ ಈ ನಿಯಮ ಬದಲಾಯಿಸುವೆವು ! – ಮಜೂರ್ ಪಕ್ಷ

ಬ್ರಿಟನ್ನಲ್ಲಿ ಮುಖ್ಯ ವಿರೋಧಿ ಪಕ್ಷವಾಗಿರುವ ಮಜೂರ್ ಪಕ್ಷದ ನಾಯಕ ಕ್ರಿಶ್ ಬ್ರಾಯಂಟ್ ಅವರು, ಈ ವರ್ಷದ ಕೊನೆಯಲ್ಲಿ ನಡೆಯುವ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ನರ್ಸ್, ಶಿಕ್ಷಕರು ಮತ್ತು ಮಧ್ಯಮ ವರ್ಗದ ನೌಕರಿ ಇದಕ್ಕಾಗಿ ವೀಸಾದ ವೇತನ ಮಿತಿಯನ್ನು ಮತ್ತೆ ವಾರ್ಷಿಕ 27 ಲಕ್ಷ ರೂಪಾಯಿವರೆಗೆ ಮಾಡುವೆವು. ಇದಕ್ಕಾಗಿ ಬ್ರಿಟನ್ನಲ್ಲಿನ ಭಾರತೀಯರ ಜೊತೆಗೆ ಚರ್ಚೆ ನಡೆಯುತ್ತಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಬ್ರಿಟನ್ನಿನ ಪ್ರಧಾನಮಂತ್ರಿ ಋಷಿ ಸುನಕ್ ಭಾರತೀಯ ಮೂಲದವರಾಗಿದ್ದರೂ ಸಹ ಭಾರತೀಯರಿಗೆ ಉದ್ಯೋಗ ಸಿಗದೆ ಬ್ರಿಟನ್ನಿನ ನಾಗರೀಕರಿಗೆ ಉದ್ಯೋಗ ಸಿಗಬೇಕೆಂದು ಕಾನೂನು ರೂಪಿಸುತ್ತಾರೆ ಮತ್ತು ಬ್ರಿಟನ್ ನ ಉದ್ಯಮಿಗಳೇ ಇದನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಡಿ !