ಪ್ರಾ. ಅಬ್ದುಲ್ಲಾ ಮುಲ್ಲಾ ಮೇಲೆ ‘ದೈಹಿಕ ಸಂಬಂಧ ಹೊಂದಿದರೇ ಮಾತ್ರ ಪರೀಕ್ಷೆಯಲ್ಲಿ ಪಾಸ್’ ಮಾಡುವ ಆರೋಪ !

  • ಕೊಲಕಾತಾದ ‘ವಿಶ್ವಭಾರತಿ ವಿದ್ಯಾಪೀಠ’ದಲ್ಲಿನ ಘಟನೆ !

  • ಪೊಲೀಸರಿಂದ ದೂರು ದಾಖಲು

ಕೋಲಕಾತಾ (ಬಂಗಾಲ) – ಇಲ್ಲಿಯ ಶಾಂತಿನಿಕೇತನ ವಿಶ್ವಭಾರತಿ ವಿದ್ಯಾಪೀಠದಲ್ಲಿ ಪರೀಕ್ಷೆಯಲ್ಲಿ ಪಾಸ್ ಆಗಬೇಕಿದ್ದರೆ ದೈಹಿಕ ಸಂಬಂಧದ ಇಡಬೇಕೆಂದು ೩ ವಿದ್ಯಾರ್ಥಿನೀಯರು ಅಬ್ದುಲ್ಲಾ ಮುಲ್ಲಾ ಈ ಅತಿಥಿ ಪ್ರಾಧ್ಯಾಪಕರ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರು ಈ ಗಂಭೀರ ಪ್ರಕರಣದ ದೂರು ದಾಖಲಿಸಿಕೊಂಡಿದ್ದಾರೆ. ಪ್ರಾ. ಅಬ್ದುಲ್ಲಾ ಮಾತ್ರ ಈ ಆರೋಪ ತಳ್ಳಿ ಹಾಕಿದ್ದಾರೆ.

೧. ವಿದ್ಯಾಪೀಠದ ‘ಪರ್ಶಿಯನ್, ಉರ್ದು ಅಂಡ್ ಇಸ್ಲಾಮಿಕ್ ಸ್ಟಡಿಜ್’ ಈ ವಿಭಾಗದಲ್ಲಿ ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರು ತಮ್ಮ ದೂರಿನಲ್ಲಿ, ಪ್ರಾ. ಅಬ್ದುಲ್ ಮುಲ್ಲಾ ವಾಟ್ಸಪ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದರು ಮತ್ತು ಅನೇಕ ಸಾರಿ ಅಯೋಗ್ಯವಾಗಿ ಸ್ಪರ್ಶಿಸಿದ್ದರು ಎಂದು ಹೇಳಿದ್ದಾರೆ.

೨. ಪ್ರಾ. ಮುಲ್ಲಾ ಇವರು ವಿದ್ಯಾರ್ಥಿನಿಯರ ಆರೋಪ ತಳ್ಳಿ ಹಾಕಿದ್ದಾರೆ. ಅವರು, ನನಗೆ ಇದರ ಬಗ್ಗೆ ಏನು ತಿಳಿದಿಲ್ಲ. ನನಗೆ ಮೋಸ ಮಾಡಲಾಗುತ್ತಿದೆ. ಯಾವುದಾದರೂ ವಿದ್ಯಾರ್ಥಿನಿಗೆ ವಾಟ್ಸಪ್ ನಲ್ಲಿ ಯಾವುದಾದರೂ ಸಂದೇಶ ಕಳುಹಿಸಿದರೆ, ಅದು ಅಧ್ಯಯನಕ್ಕೆ ಸಂಬಂಧಪಟ್ಟದ್ದಾಗಿದೆ. ಅದರ ಇತರ ಯಾವುದಕ್ಕು ಸಂಬಂಧವಿಲ್ಲ. ಇಷ್ಟು ದಿನ ನಾನು ಇಲ್ಲಿ ಕಲಿಸುತ್ತಿದ್ದೇನೆ. ಈ ಹಿಂದೆ ನನ್ನ ಮೇಲೆ ಈ ರೀತಿಯ ಎಂದು ಆರೋಪೀಸಲಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಸಂದೇಶಖಾಲಿ ಪ್ರಕರಣದ ಬಗ್ಗೆ ಬಂಗಾಲ ಪೋಲೀಸರ ನಿಲುವು ಸಂಪೂರ್ಣ ಜಗತ್ತೆ ನೋಡಿದೆ. ಆದ್ದರಿಂದ ಈ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರದ ಪೊಲೀಸರು ದೂರು ದಾಖಲಿಸುವ ಕ್ರಮ ಕೈಗೊಂಡಿದ್ದರು, ಮುಂದೆ ಏನು ನಡೆಯಲಿಲ್ಲ ಎಂದರೆ ಆಶ್ಚರ್ಯ ಅನಿಸಬಾರದು !