ಒಂದು ವಿಚ್ಛೇದನ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮಾಡಿದ ಟಿಪ್ಪಣಿ
ಪಾಟಲೀಪುತ್ರ (ಬಿಹಾರ) – ವಿವಾಹಿತ ದಂಪತಿಗಳು ಪರಸ್ಪರ ದೆವ್ವ ಅಥವಾ ಪಿಶಾಚಿ ಎಂದು ಅಣಕಿಸುವುದು ಕ್ರೌರ್ಯವಲ್ಲ, ಎಂದು ಪಾಟ್ನಾ ಉಚ್ಚನ್ಯಾಯಾಲಯವು ಒಂದು ದಂಪತಿಯ ಪ್ರಕರಣದ ವಿಚಾರಣೆಯ ಸಮಯದಲ್ಲಿ ಇತ್ತೀಚೆಗೆ ಟಿಪ್ಪಣೆ ಮಾಡಿದೆ. ಜಾರ್ಖಂಡ್ ರಾಜ್ಯದ ಬೊಕಾರೋಚೆ ನಿವಾಸಿ ಸಹದೇವ ಗುಪ್ತಾ ಮತ್ತು ಅವರ ಪುತ್ರ ನರೇಶ ಕುಮಾರ ಗುಪ್ತಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ವಿವೇಕ್ ಚೌಧರಿ ಅವರ ಪೀಠವು ಈ ಟಿಪ್ಪಣಿಯನ್ನು ದಾಖಲಿಸಿದೆ. ನರೇಶ್ ಗುಪ್ತಾ ಅವರ ವಿಚ್ಛೇದಿತ ಪತ್ನಿ ಸ್ಥಳೀಯ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ಕುರಿತಾದ ಆದೇಶಕ್ಕೆ ಗುಪ್ತಾ ತಂದೆ ಮತ್ತು ಪುತ್ರ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಗುಪ್ತಾ ತಂದೆ ಮತ್ತು ಪುತ್ರರು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸುವಾಗ ’21ನೇ ಶತಕದಲ್ಲಿ ಓರ್ವ ಮಹಿಳೆಯ ಅತ್ತೆಯ ಮನೆಯವರು `ಭೂತ’ ಮತ್ತು ‘ಪಿಶಾಚಿ’ ಎಂದು ಕರೆಯುವುದು ಅತ್ಯಂತ ಕ್ರೂರ ವರ್ತನೆಯಾಗಿದೆ’, ಎಂದು ಪ್ರತಿವಾದಿ ವಿಚ್ಛೇದಿತ ಮಹಿಳೆಯ ನ್ಯಾಯವಾದಿಗಳು ವಾದಿಸಿದ್ದರು. ಈ ಪ್ರತಿವಾದ ಸ್ವೀಕಾರಾರ್ಹವಲ್ಲ,’ ಎಂದು ನ್ಯಾಯಾಲಯ ದಾಖಲಿಸಿದೆ. ‘ವೈವಾಹಿಕ ಸಂಬಂಧದಲ್ಲಿ ಅದರಲ್ಲೂ ವಿಫಲವಾಗಿರುವ ವೈವಾಹಿಕ ಸಂಬಂಧದಲ್ಲಿ ಪತಿ-ಪತ್ನಿ ಇಬ್ಬರೂ ಪರಸ್ಪರ ಅವಾಚ್ಯ ಶಬ್ದಗಳಲ್ಲಿ ಬೈಯುವ ಪ್ರಸಂಗಗಳು ನಡೆಯುತ್ತವೆ. ಹೀಗಿದ್ದರೂ, ಈ ಎಲ್ಲಾ ಆರೋಪಗಳು ಕ್ರೌರ್ಯವಾಗುವುದಿಲ್ಲ’ ಎಂದು ನ್ಯಾಯಾಲಯವು ಅಭಿಪ್ರಾಯವನ್ನು ದಾಖಲಿಸಿದೆ.
ಸಂಪಾದಕೀಯ ನಿಲುವುಮೂಲದಲ್ಲಿ ಸಾಧನೆಯ ಕೊರತೆಯಿಂದಾಗಿ, ಕಲಿಯುಗದಲ್ಲಿ ಪತಿ-ಪತ್ನಿಯರು ಅತ್ಯಂತ ಕೆಳಮಟ್ಟಕ್ಕೆ ಹೋಗಿ, ಪರಸ್ಪರ ಜಗಳವಾಡುತ್ತಾರೆ. ಅನೇಕ ಬಾರಿ ಅದು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತದೆ. ಸಮಾಜ ಪುರುಷನನ್ನು ಸಂತೋಷ ಮತ್ತು ಅಂತರ್ಮುಖಗೊಳಿಸಲು ಅವನಿಂದ ಸಾಧನೆ ಮಾಡಿಸಿಕೊಳ್ಳುವುದು ಆವಶ್ಯಕವಾಗಿದೆ ಎನ್ನುವುದು ಈ ಘಟನೆಯಿಂದ ಗಮನಕ್ಕೆ ಬರುತ್ತದೆ. |