ಮದ್ಯ ಸೇವಿಸಿ ತರಗತಿಗೆ ಬಂದು ಮಕ್ಕಳಿಗೆ ಅವಾಚ್ಯಪದಗಳಿಂದ ಬಯ್ಯುತ್ತಿದ್ದ ಶಿಕ್ಷಕನನ್ನ ಚಪ್ಪಲಿಯಿಂದ ಥಳಿಸಿದ ಮಕ್ಕಳು !

ಬಸ್ತಾರ್ (ಛತ್ತೀಸಗಡ) – ಒಬ್ಬ ಶಿಕ್ಷಕ ಪ್ರತಿದಿನ ಶಾಲೆಗೆ ಬಂದು ಮಕ್ಕಳಿಗೆ ಪಾಠ ಮಾಡುವ ಬದಲಾಗಿ ಮಧ್ಯ ಸೇವಿಸಿ ತರಗತಿಯಲ್ಲಿ ನೆಲದ ಮೇಲೆ ಮಲಗುತ್ತಿದ್ದನು. ಆ ಸಮಯದಲ್ಲಿ ವಿದ್ಯಾರ್ಥಿಗಳು ಅವನಿಗೆ ಪಾಠ ಮಾಡಲು ಹೇಳಿದಾಗ, ಅವನು ವಿದ್ಯಾರ್ಥಿಗಳಿಗೆ ಅವಾಚ್ಯ ಪದಗಳಿಂದ ಬಯ್ಯುತ್ತಿದ್ದನು. ಇದರಿಂದ ಆಕ್ರೋಶಗೊಂಡ ಮಕ್ಕಳು ಶಿಕ್ಷಕನಿಗೆ ಚಪ್ಪಲಿಯಿಂದ ಹೊಡೆದು ಓಡಿಸಿರುವ ಘಟನೆ ಇಲ್ಲಿ ನಡೆದಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಪಲ್ಲವಿಭಟ ಗ್ರಾಮದ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಷಯದಲ್ಲಿ ತನಿಖೆ ನಡೆಸುವಂತೆ ಬಸ್ತರ ಜಿಲ್ಲಾಧಿಕಾರಿ ಕೆ. ವಿಜಯ ದಯಾರಾಮ ಇವರು ಗುಂಪು ಶಿಕ್ಷಣ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿಜಯ ದಯಾರಾಮ ಇವರು ಹೇಳಿದರು.

ಸಂಪಾದಕೀಯ ನಿಲುವು

ಇಂತಹವರು ಶಿಕ್ಷಕರೆಂದು ಹೇಗೆ ನೇಮಕಾತಿಯಾಗುತ್ತದೆ ? ಮತ್ತು ಅವರು ತರಗತಿಯಲ್ಲಿ ಏನು ಮಾಡುತ್ತಾರೆ ಎಂದು ಮುಖ್ಯೋಪಾಧ್ಯಾಪಕರು ನೋಡುವುದಿಲ್ಲವೇ ?