ಉತ್ತರಾಖಂಡದ ನಾನಕಮತ್ತಾ ಗುರುದ್ವಾರದ ಮುಖ್ಯಸ್ಥನ ಗುಂಡಿಕ್ಕಿ ಹತ್ಯೆ

ಡೆಹ್ರಾಡೂನ (ಉತ್ತರಾಖಂಡ) – ಉತ್ತರಾಖಂಡದ ಉಧಮಸಿಂಹ ನಗರದ ಪ್ರಮುಖ ಧಾರ್ಮಿಕ ಸ್ಥಳವಾದ ನಾನಕಮತ್ತಾ ಗುರುದ್ವಾರದ ಮುಖ್ಯ ಜತ್ತೇದಾರ್ ಬಾಬಾ ತರಸೆಮ ಸಿಂಹರನ್ನು ಮಾರ್ಚ್ 28 ರಂದು ಬೆಳಿಗ್ಗೆ ಹತ್ಯೆ ಮಾಡಲಾಗಿದೆ. ದ್ವಿಚಕ್ರವಾಹನದಿಂದ ಬಂದ ಇಬ್ಬರು ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ಗಾಯಗೊಂಡ ಬಾಬಾ ತಾರಸೆಮ ಅವರನ್ನು ಖತಿಮಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಬಾಬಾ ತಾರಸೆಮ ಸಿಂಹ ಇವರು ಇಡೀ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದರು. ಈ ಕೊಲೆಯ ಹಿಂದಿನ ಕಾರಣಗಳು ಇದುವರೆಗೂ ತಿಳಿದುಬಂದಿಲ್ಲ.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಟಿ.ಸಿ. ಇವರು ಮಾತನಾಡಿ, ಈ ಘಟನೆ ಬೆಳಗ್ಗೆ 6.15ರ ಸುಮಾರಿಗೆ ನಡೆದಿದೆ. ಆ ಸಮಯದಲ್ಲಿ ಬಾಬಾಜಿ ಗುರುದ್ವಾರದ ಒಳಗೆ ಮುಖ್ಯ ದ್ವಾರದ ಎದುರಿನ ಖುರ್ಚಿಯಲ್ಲಿ ಕುಳಿತಿದ್ದರು. ಅವರು ತಮ್ಮ ಮೊಬೈಲನಲ್ಲಿ ಎನೋ ಮಾಡುತ್ತಿರುವಾಗ, ಇಬ್ಬರು ಪೇಟಧಾರಿಗಳು ದ್ವಿಚಕ್ರವಾಹನದಿಂದ ಬಂದು ಬಾಬಾಜಿ ಅವರ ಮೇಲೆ ಕೆಲವೇ ಸೆಕೆಂಡುಗಳಲ್ಲಿ ಎರಡು ಗುಂಡುಗಳನ್ನು ಹಾರಿಸಿದರು ಮತ್ತು ಪರಾರಿಯಾದರು. ಸಿಸಿಟಿವಿ ದೃಶ್ಯಾವಳಿಯಲ್ಲಿ ಇಬ್ಬರ ಮುಖವೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಬ್ಬರೂ ಸಿಖ್ಖರು ಮತ್ತು ಪರಿಚಿತರಾಗಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಲು 8 ರಿಂದ 10 ದಳಗಳನ್ನು ರಚಿಸಿದ್ದಾರೆ.